Advertisement
ಕಾಲೇಜಿನ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿರುವ ಇವರು, ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡು ಗಮನ ಸೆಳೆಯುತ್ತಿದ್ದು, ಕೆಜಿ ತರಗತಿಯಿಂದ 4 ನೇ ತರಗತಿಯವರೆಗೆ ಪ್ರತೀ ವರ್ಷ ರಜಾ ದಿನಗಳನ್ನು ಬಿಟ್ಟು ಉಳಿದೆಲ್ಲ ದಿನಗಳಲ್ಲಿ ಪೂರ್ಣ ಹಾಜರಾತಿಯೊಂದಿಗೆ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಪ್ರಶಂಸೆಗಳಿಸಿದ್ದರು.
ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾಪಟು ವಾಗಿ ಬಹುಮಾನವನ್ನು ಗಳಿಸಿದ್ದರು. ಕಲಿಕೆಯೊಂದಿಗೆ ಕ್ರಿಕೆಟ್, ನೃತ್ಯ ಪ್ರದರ್ಶನ, ಚಿತ್ರಕಲೆ, ನಾಟಕ ಮುಂತಾದ ಚಟು ವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಗಮನ ಸೆಳೆಯುತ್ತಿರುವ ವಿದ್ಯಾರ್ಥಿ ಯಾಗಿ¨ªಾರೆ. ಉತ್ತಮ ಕ್ರಿಕೆಟ್ ಆಟಗಾರನಾಗಿರುವ ಇವರು ಸತತ ಎರಡು ವರ್ಷ ಸಿಂಹಘಡ್ ಕಾಲೇಜಿನ ಕ್ರಿಕೆಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ¨ªಾರೆ. ಪುಣೆ ಬಂಟರ ಸಂಘದ ಯುವ ವಿಭಾಗದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಕ್ರಿಯರಾಗಿ ಗುರುತಿಸಿಕೊಂಡು ಉತ್ತಮ ಕಾರ್ಯವನ್ನು ಮಾಡುತ್ತಿ¨ªಾರೆ. ಪುಣೆ ಬಂಟರ ಸಂಘದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಗುರುತಿಸಿ ಕೊಂಡಿದ್ದಲ್ಲದೆ ನೃತ್ಯ ಪ್ರದರ್ಶನ, ಕ್ರಿಕೆಟ್, ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿ¨ªಾರೆ. ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ, ಹೊಟೇಲ್ ಉದ್ಯಮಿ ಮೂಲತಃ ಮಡಿಕೇರಿಯ ಶೇಖರ್ ಸಿ. ಶೆಟ್ಟಿ ಮತ್ತು ಲತಾ ಎಸ್. ಶೆಟ್ಟಿ ದಂಪತಿಯ ಪುತ್ರ.
Related Articles
Advertisement