Advertisement
ದಿಲ್ಲಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ವಿವರಗಳನ್ನು ವಿಧಾನ ಪರಿಷತ್‌ಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
Related Articles
ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಉಕ್ರೇನ್‌ನಲ್ಲಿ ಸಿಲುಕಿದ ಭಾರತದ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ತಾವಾಗಿಯೇ ಗಡಿ ಭಾಗಗಳಿಗೆ ಬಂದ ಮೇಲೆ ಅವರನ್ನು ಅಲ್ಲಿಂದ ಕರೆದುಕೊಂಡು ಬರಲಾಗುತ್ತಿದೆ. ಉಕ್ರೇನ್ ಒಳಗೆ ಯಾರೂ ಹೋಗಲು ಆಗುತ್ತಿಲ್ಲ. ಆದ್ದರಿಂದ, ಸ್ಥಳೀಯರನ್ನು ಸಂಪರ್ಕಿಸಿ ಮೃತದೇಹ ವಾಪಸ್ ತರಲು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
Advertisement
ಉಕ್ರೇನ್‌ನಲ್ಲಿದ್ದಾರೆ 22 ಸಾವಿರ ಭಾರತೀಯರು!ಸರಕಾರದ ಪರ ಉತ್ತರಿಸಿದ ಆರೋಗ್ಯ ಸಚಿವ ಡಾ| ಸುಧಾಕರ್, ಯುದ್ಧ ಪ್ರದೇಶ ಹೇಗಿರುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. 22 ಸಾವಿರ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಒಬ್ಬ ಕನ್ನಡಿಗ ಮೃತಪಟ್ಟಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಪ್ರಧಾನಿ ಮೋದಿಯವರ ಮಾರ್ಗದರ್ಶನಲ್ಲಿ ಕೇಂದ್ರ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ನವೀನ್ ಮೃತದೇಹ ವಾಪಸ್ ತರಲಾಗುವುದು. ಪ್ರಧಾನಿ ಮನವಿಯವಂತೆ ಕೆಲವು ಗಂಟೆ ಯುದ್ಧ ವಿರಾಮ ಘೋಷಿಸಿದ್ದರಿಂದ ಭಾರತೀಯರು ಸುರಕ್ಷಿವಾಗಿ ಅಲ್ಲಿಂದ ಹೊರಬರಲು ಸಾಧ್ಯವಾಯಿತು ಎಂದರು. ಸರ್ವಪಕ್ಷದವರ ಸಾಥ್
ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಅನೇಕ ಸದಸ್ಯರು ನವೀನ್ ಮೃತದೇಹ ವಾಪಸ್ ತರುವ ಬಗ್ಗೆ ಧ್ವನಿಗೂಡಿಸಿದರು. ದಿಲ್ಲಿ ಅಧಿಕಾರಿಗಳಿಂದ ವಿವರ ಪಡೆದು ಸದನಕ್ಕೆ ಮಾಹಿತಿ ನೀಡುವಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದ ಸಭಾಪತಿಯವರು ಚರ್ಚೆಗೆ ತೆರೆ ಎಳೆದರು.