Advertisement

ಯುವರಾಜ್ ಸಿಂಗ್ ರ ಆರು ಸಿಕ್ಸರ್ ಗಳು ನನ್ನನ್ನು….. : ಸ್ಟುವರ್ಟ್ ಬ್ರಾಡ್

04:40 PM Jul 30, 2023 | Team Udayavani |

ಲಂಡನ್: 2007 ರ ಟಿ20 ವಿಶ್ವಕಪ್‌ ನಲ್ಲಿ ಯುವರಾಜ್ ಸಿಂಗ್ ಅವರ ತಮ್ಮ ಓವರ್ ನಲ್ಲಿ ಚಚ್ಚಿದ ಆರು ಸಿಕ್ಸರ್‌ ಗಳು ನನ್ನನ್ನು ಇಂದಿನ ಕಠಿಣ ಸ್ಪರ್ಧಿಯಾಗಿಸಿತು ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದರು.

Advertisement

ಆ್ಯಶಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿಜೀವನದ ಆರಂಭದಲ್ಲಿ ಈ ಘಟನೆ ಕಠಿಣ ಕಲಿಕೆಯ ಅನುಭವ ಮೂಡಿಸಿತ್ತು. ಅವರನ್ನು ಇಂದಿನ ಸ್ಪರ್ಧಿಯಾಗಿ ರೂಪಿಸಲು ಸಹಾಯ ಮಾಡಿತು ಎಂದರು.

ಆ್ಯಶಸ್ ಮೂರನೇ ದಿನದಾಟದ ಬಳಿಕ ಸ್ಟುವರ್ಟ್ ಬ್ರಾಡ್ ಅವರು ಕ್ರಿಕೆಟ್ ಜೀವನಕ್ಕೆ ತೆರೆ ಎಳೆಯುವ ನಿರ್ಧಾರ ಮಾಡಿದರು.

“ಅದು ನಡೆಯಬಾರದಿತ್ತು ಎಂದು ನಾನು ಬಯಸುತ್ತೇನೆ. ನನಗೆ ನಿಜವಾಗಿಯೂ ಸಹಾಯ ಮಾಡಿದ್ದು ಆ ಪಿಚ್ ಡೆಡ್ ರಬ್ಬರ್ ಆಗಿತ್ತು. ಇದು ನನ್ನನ್ನು ಇಂದಿಗೂ ನಾನು ಪ್ರತಿಸ್ಪರ್ಧಿಯನ್ನಾಗಿ ಮಾಡಲು ಪ್ರೇರೆಪಿಸಿತು. ನಾನು ಮುಂದೆ ಬೆಳೆಯುಂತೆ ಮಾಡಿತು” ಎಂದು ಬ್ರಾಡ್ ಹೇಳಿದ್ದಾರೆ.

2007ರ ಟಿ ವಿಶ್ವಕಪ್ ಕೂಟದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್ ನಲ್ಲಿ ಎಲ್ಲಾ ಆರು ಎಸೆತಗಳನ್ನು ಯುವರಾಜ್ ಸಿಂಗ್ ಸಿಕ್ಸರ್ ಗೆ ಅಟ್ಟಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಓವರ್ ನ ಎಲ್ಲಾ ಆರು ಎಸೆತಕ್ಕೆ ಆರು ಸಿಕ್ಸರ್ ಬಾರಿಸಿದ ಪ್ರಥಮ ನಿದರ್ಶನವಾಗಿತ್ತು.

Advertisement

ಇಂಗ್ಲೆಂಡ್ ಲೆಜೆಂಡ್: 600 ಟೆಸ್ಟ್ ವಿಕೆಟ್‌ ಗಳನ್ನು ಪಡೆದ ಇಬ್ಬರು ವೇಗಿಗಳಲ್ಲಿ ಒಬ್ಬರಾದ ಬ್ರಾಡ್, ಆ್ಯಶಸ್‌ ನಲ್ಲಿ 150+ ಟೆಸ್ಟ್ ವಿಕೆಟ್‌ಗಳನ್ನು ಗಳಿಸಿದ ಮೂರನೇ ಬೌಲರ್ ಆಗಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ ನಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಮುಗಿಸುತ್ತಿದ್ದಾರೆ.

ಒಟ್ಟು 165 ಟೆಸ್ಟ್ ಪಂದ್ಯಗಳನ್ನು ಆಡಿರುವ ಬ್ರಾಡ್ 602 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಆರಂಭಿಕ ದಿನಗಳಲ್ಲಿ ತನ್ನ ಬ್ಯಾಟಿಂಗ್ ಗೂ ಹೆಸರಾಗಿದ್ದ ಬ್ರಾಡ್, 3656 ರನ್ ಕೂಡಾ ಗಳಿಸಿದ್ದಾರೆ. ಪಾಕಿಸ್ಥಾನ ವಿರುದ್ದದ 167 ರನ್ ಗಳಿಸಿದ್ದು ಅವರು ಜೀವನಶ್ರೇಷ್ಠ ಬ್ಯಾಟಿಂಗ್ ಸಾಧನೆ. 2016ರಲ್ಲಿ ಕೊನೆಯದಾಗಿ ಏಕದಿನ ಪಂದ್ಯವಾಡಿದ್ದ ಬ್ರಾಡ್ 178 ವಿಕೆಟ್ ಕಬಳಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 65 ವಿಕೆಟ್ ಕಿತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next