Advertisement

ಮೊದಲ ಟೆಸ್ಟ್‌ ಪಂದ್ಯಕ್ಕೆ ಬ್ರಾಡ್‌ ಅನುಮಾನ

11:31 PM Jul 06, 2020 | Sriram |

ಸೌತಾಂಪ್ಟನ್‌: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಬುಧ ವಾರದಿಂದ ಇಲ್ಲಿ ಆರಂಭವಾಗ ಲಿರುವ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡಿನ ಪೇಸ್‌ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಆಡುವ ಸಂಭವ ಕಡಿಮೆ.

Advertisement

ಜೇಮ್ಸ್‌ ಆ್ಯಂಡರ್ಸನ್‌ ಅವರೊಂದಿಗೆ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಇಂಗ್ಲೆಂಡಿನ ಪ್ರಮುಖ ವೇಗಿಗಳಾಗಿ ದಾಳಿಗಿಳಿಯುವ ಸಾಧ್ಯತೆ ಇದೆ ಎಂಬುದಾಗಿ “ಗಾರ್ಡಿಯನ್‌’ ವರದಿ ಮಾಡಿದೆ.

“ಸ್ಟುವರ್ಟ್‌ ಬ್ರಾಡ್‌ 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತವರಿನ ಪ್ರಥಮ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆರ್ಚರ್‌-ವುಡ್‌ ಜೋಡಿಯನ್ನು ದಾಳಿಗಿಳಿಸಲು ಇಂಗ್ಲೆಂಡ್‌ ಗಂಭೀರ ಚಿಂತನೆ ನಡೆಸುತ್ತಿದೆ. ಇದಕ್ಕೆ ಆವರ್ತನ ಪದ್ಧತಿ ಕಾರಣ’ ಎಂದು ವರದಿ ತಿಳಿಸಿದೆ.

2012ರ ಬಳಿಕ…
ಸ್ಟುವರ್ಟ್‌ ಬ್ರಾಡ್‌ ತವರಿನ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದದ್ದು 2012ರಷ್ಟು ಹಿಂದೆ. ಆ ಪಂದ್ಯವೂ ವಿಂಡೀಸ್‌ ವಿರುದ್ಧವೇ ನಡೆದಿತ್ತು.

138 ಟೆಸ್ಟ್‌ ಪಂದ್ಯಗಳ ಅನುಭವಿ ಸ್ಟುವರ್ಟ್‌ ಬ್ರಾಡ್‌ 485 ವಿಕೆಟ್‌ ಹಾರಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next