Advertisement

ಬ್ರಾಡ್- ಬರ್ನ್ಸ್ ಬೊಂಬಾಟ್ ಅಟ: ಸರಣಿ ಗೆಲುವಿನ ಸನಿಹದಲ್ಲಿ ಇಂಗ್ಲೆಂಡ್

01:15 PM Jul 27, 2020 | keerthan |

ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರಿ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಈ ಪಂದ್ಯವನ್ನೂ ಗೆದ್ದು ಸರಣಿ ಗೆಲುವು ಕಾಣುವ ತವಕದಲ್ಲಿದೆ. ವಿಂಡೀಸ್ ಗೆಲುವಿಗೆ ಎಂಟು ವಿಕೆಟ್ ಗಳಿಂದ ಇನ್ನೂ 389 ರನ್ ಅಗತ್ಯವಿದೆ.

Advertisement

ಎರಡನೇ ದಿನದ ಅಂತ್ಯಕ್ಕೆ 137 ರನ್ ಗೆ ಏಳು ವಿಕೆಟ್ ಕಳೆದುಕೊಂಡಿದ್ದ ವಿಂಡಿಸ್ 197 ರನ್ ಗೆ ಆಲ್ ಔಟ್ ಆಯಿತು. ಹೋಲ್ಡರ್ 46 ರನ್ ಗಳಿಸಿದರೆ, ಕೀಪರ್ ಡೌರಿಚ್ 37 ರನ್ ಗಳಿಸಿದರು. ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿದ ಬ್ರಾಡ್ ಆರು ವಿಕೆಟ್ ಪಡೆದರು. ವಿಂಡೀಸ್ 172 ರನ್ ಹಿನ್ನಡೆ ಅನುಭವಿಸಿತು.

ಉತ್ತಮ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಂಗ್ಲರಿಗೆ ರೋರೊ ಬರ್ನ್ಸ್ ಮತ್ತು ಡಾಮ್ ಸಿಬ್ಲಿ ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್ ಗ 114 ರನ್ ಜೊತೆಯಾಟ ಆಡಿದರು. ಸಿಬ್ಲಿ 56 ರನ್ ಔಟಾದರು. ನಂತರ ನಾಯಕ ರೂಟ್ ಜೊತೆಗೆ ಬರ್ನ್ಸ್ ಮತ್ತೊಂದು ಶತಕದ ಜೊತೆಯಾಟ ನಡೆಸಿದರು. ರೂಟ್ ಅಜೇಯ 68 ರನ್ ಗಳಿಸಿದರೆ, 90 ರನ್ ಮಾಡಿದ ಬರ್ನ್ಸ್ ಔಟಾಗುತ್ತಿದ್ದಂತೆ 226 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ಮಾಡಿತು. ವಿಂಡಿಸ್ ಗೆಲುವಿಗೆ 399 ರನ್ ಗುರಿ ನೀಡಿತು.

ದಿನದ ಕೊನೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ 10 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದೆ. ಎರಡೂ ವಿಕೆಟ್ ಗಳು ಬ್ರಾಡ್ ಪಾಲಾಗಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಸಾಧನೆ ಮಾಡಲು ಬ್ರಾಡ್ ಗೆ ಇನ್ನು ಒಂದು ವಿಕೆಟ್ ಅವಶ್ಯಕತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next