ಅಂಬೇಡ್ಕರ್ ವಸತಿ ಸೇರಿ ವಿವಿಧ ವಸತಿ ಯೋಜನೆ ಜಾರಿಗೆ ತಂದಿದೆ.
Advertisement
ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿ ಕೊಳ್ಳಲು ಅನುದಾನ ನೀಡುತ್ತಿದೆ. ಆದರೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕಂತಿನ ಹಣ ಜಮಾ ಮಾಡದ್ದರಿಂದ ಈಗಾಗಲೇ ಸಾಲ ಮಾಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ಅನುದಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
Related Articles
Advertisement
ಗ್ರಾಪಂಗೆ ಯಾವುದೇ ಹಣಕಾಸಿನ ಅಧಿಕಾರ ಇಲ್ಲ ಎಂದು ಜಾರಿಕೊಳ್ಳುತ್ತಾರೆ. ಇದ್ದ ಹರಕು-ಮುರಕು ಗುಡಿಸಲುಗಳಲ್ಲಿವಾಸ ಮಾಡುತ್ತಿದ್ದ ಬಡ ಕುಟುಂಬಗಳು ಸರಕಾರ ಸಹಾಯಧನ ನೀಡುತ್ತದೆ ಎಂಬ ಆಶೆಯಿಂದ ಗುಡಿಸಲುಗಳನ್ನು ಕಿತ್ತಿ ಸಾಲ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಮನೆಗಳ
ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಂಬಂಧಿಸಿದ ಅಧಿಕಾರಿಗಳು ಮನೆ ನಿರ್ಮಿಸಿಕೊಂಡವರಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಹಡಗಲಿ ತಾಪಂ ಸದಸ್ಯೆ ಶಾರದಾ ರಾಠೊಡ ಆಗ್ರಹಿಸಿದ್ದಾರೆ. ಜಿಪಿಎಸ್ ತಂತ್ರಜ್ಞಾನದ ಫಲಾನುಭವಿಗಳು ನಿರ್ಮಿಸಿಕೊಂಡ ಫೋಟೋಗಳನ್ನು ಸೆರೆಹಿಡಿಯಲಾಗಿದೆ. ಅನುದಾನದ ಕಂತು ಬಿಡುಗಡೆಗೆ ರಾಜೀವಗಾಂಧಿ ವಸತಿ ನಿಗಮಕ್ಕೆ ಶಿಫಾರಸು ಮಾಡಲಾಗಿದೆ. ಇಂದು-ನಾಳೆ ಕಂತಿನ ಅನುದಾನ ಜಮೆಯಾಗುವ ಸಾಧ್ಯತೆ ಇದೆ.
ಶಂಕರ ನಾಯ್ಕ, ವಸತಿ ಯೋಜನೆಗಳ ನೋಡಲ್ ಅಧಿಕಾರಿ ದೇವಪ್ಪ ರಾಠೊಡ