Advertisement
ಶೌಚಾಲಯ ನಿರ್ಮಿಸಲು ಯೋಜನೆಯಿದ್ದರೂ ಹಣ ನೀಡಿಲ್ಲ. ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಜನತೆ ದಿನಂಪ್ರತಿ ಸಮಸ್ಯೆಗಳ ಸುಳಿಯಲ್ಲಿ ಜೀವನ ಮಾಡುತ್ತಿದ್ದಾರೆ. ಅನಾರೋಗ್ಯಕರ ವಾತಾವರಣದಲ್ಲಿ ಬದುಕು ಸಾಗಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾನಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಬದ್ದ ಹಕ್ಕುಗಳಿಂದ ವಂಚಿತರಾದ ಈ ಜನತೆಗೆ ಸರ್ಕಾರಿ ಯೋಜನೆಯಡಿ ಕೂಡಲೇ ಶೌಚಾಲಯ ನಿರ್ಮಿಸಿಕೊಡಬೇಕು. ಕುಡಿವ ನೀರು ಸರಬರಾಜು, ನಿಯಮಿತವಾಗಿ ಮಾಡಲು ಸೂಕ್ರ ಕ್ರಮ ಕೈಗೊಳ್ಳಬೇಕು. ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಬೇಕು. ಕೆಟ್ಟು ಹಾಳಾಗಿ ಹೋಗಿರುವ, ನೀರು ಹರಿಯದಂತಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿರುವ ಒಳಚರಂಡಿಗಳನ್ನು ದುರಸ್ತಿ ಮಾಡಿ, ಪುನಃ ನಿರ್ಮಿಸಿಕೊಡಬೇಕು. ಬಡಾವಣೆಯಲ್ಲಿ ರಸ್ತೆಯೇ ಇಲ್ಲ, ಆದ್ದರಿಂದ ರಸ್ತೆ ನಿರ್ಮಿಸಿಕೊಡಬೇಕು. ಬೀದಿ ದೀಪಗಳನ್ನು ಅಳವಡಿಸಿಕೊಡಬೇಕು. ಕಳೆದ 10-15 ವರ್ಷಗಳಿಂದ ವಿನಾಃ ಕಾರಣ ಕಟ್ಟಿಸಿಕೊಳ್ಳದ ಮನೆ ತೆರಿಗೆಯನ್ನು ಈಗಿನಿಂದಲೇ ಕಟ್ಟಿಸಿಕೊಳ್ಳಬೇಕು. ಜತೆಗೆ ಸೂಕ್ತ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಬಳಿಕ ಜಿಪಂ ಸಿಇಒ ಕೆ.ನಿತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
Advertisement
ಮಾಳಗಡ್ಡೆ ಬಡಾವಣೆಗೆ ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಹೋರಾಟ
11:47 AM Jun 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.