Advertisement

ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡ ಸಂಬಂಧಿಸಿದ ರಚನಾತ್ಮಕ ನ್ಯೂನತೆಗಳು

06:00 AM Apr 15, 2018 | |

ಮಾನವ ಸೃಷ್ಟಿ ಮತ್ತು ಬೆಳವಣಿಗೆ ಭೂಮಿಯ ಮೇಲೆ ಒಂದು ಅದ್ಭುತವಾದ ಕೃತಿ. ವೈದ್ಯಕೀಯ ವಿಜ್ಞಾನ ಬೆಳವಣಿಗೆಯಾದಂತೆ ನಾವು ಸೃಷ್ಟಿಯ ರಹಸ್ಯವನ್ನು ಅರಿಯಲು ಸಾಧ್ಯವಾಗಿದೆ. ಆದರೆ ಕೆಲವೊಮ್ಮೆ ಭ್ರೂಣದ ಬೆಳವಣಿಗೆಯಲ್ಲಿ ಏರುಪೇರಾಗಿ ನಾವು ಜನಿಸಿದ ಮಕ್ಕಳಲ್ಲಿ ಹತ್ತು ಹಲವು ರಚನಾತ್ಮಕ ವಿಕೃತಿ (Congenital Malformation) ಗಳನ್ನು ಕಾಣುತ್ತೇವೆ. ಈ ರೀತಿಯ ವಿಕೃತಿಗಳಿಗೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದ ಕಾರಣಗಳೆಂದರೆ ವಂಶವಾಹಿಗಳ ರೂಪಾಂತರ (Genetic Mutations) ತಾಯಿಯಲ್ಲಿನ ಜೀವಸತ್ವದ ಕೊರತೆಗಳು, ವಿಷಪೂರಿತ ಅಂಶಗಳು (Toxins  Teratogens) ಮತ್ತು ಆನುವಂಶಿಕ ರೋಗಗಳು (Hereditary diseases). ದೇಹದ ಯಾವುದೇ ಭಾಗಗಳು ವಿಕೃತವಾಗಿ ರೂಪಾಂತರವಾಗಬಹುದು. ಆದರೆ ಸಾಮಾನ್ಯವಾಗಿ ನಾವು ಕಾಣಬಹುದಾದ ವಿಕೃತಿಗಳೆಂದರೆ ಹೃದಯಕ್ಕೆ, ಮೂತ್ರ ಪಿಂಡ ಮತ್ತು ಮೂತ್ರಕೋಶಕ್ಕೆ ಅಥವಾ ಮೂಳೆ ಮತ್ತು ಸ್ನಾಯುಗಳಿಗೆ ಸಂಬಂಧಪಟ್ಟಂತೆ ವಿಕೃತಿಗಳು.

Advertisement

ಸರಿಯಾದ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ ಮಕ್ಕಳು ಎಲ್ಲರಂತೆ ಬೆಳೆದು ಒಳ್ಳೆಯ ಜೀವನದ ಗುಣಮಟ್ಟವನ್ನು ಹೊಂದುತ್ತಾರೆ. ಸಂಪೂರ್ಣವಾಗಿ ಊನತೆಯನ್ನು ಗುಣಪಡಿಸಲು ಆಗದಿದ್ದಲ್ಲಿ ಕನಿಷ್ಠ ಪಕ್ಷ ಮಕ್ಕಳನ್ನು ಸ್ವತಂತ್ರವಾಗಿ ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸುವಂತೆ ಮಾಡಬಹುದು. ಮುಂದುವರಿದ ತಂತ್ರಜ್ಞಾನದಿಂದ ಕೆಲವು ರಚನಾತ್ಮಕ ದೋಷಗಳನ್ನು ಪ್ರಸವಪೂರ್ವ ಅಲ್ಟ್ರಾಸೋನೋಗ್ರಫಿ ಸ್ಕ್ಯಾನ್‌ (USG) ಸಹಾಯದಿಂದ ಕಂಡುಹಿಡಿಯಬಹುದು. ಆದರೆ ಪೂರ್ಣ ಪ್ರಮಾಣದ ರೋಗದ ಮಾಹಿತಿ ಮಗುವಿನ ಜನನದ ಅನಂತರ ತಿಳಿದುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಎಮ….ಆರ್‌.ಐ. (MRI) ಸ್ಕ್ಯಾನ್‌ ಮಾಡಿಯೂ ಕೂಡ ಅಂಗದ ಬೆಳವಣಿಗೆ ನ್ಯೂನತೆಯನ್ನು ಕಂಡುಹಿಡಿಯಬಹುದು.ಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಿದ್ದು ಪೋಷಕರಲ್ಲಿ ಚಿಕಿತ್ಸೆಯಲ್ಲಿ ಹೆಚ್ಚಿನ ಭರವಸೆ ಮೂಡಿಸಿದೆ.

ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡ ಹಾಗೂ ಜನನಾಂಗಕ್ಕೆ ಸಂಬಂಧಿಸಿದ ರಚನಾತ್ಮಕ ನ್ಯೂನತೆಗಳೆಂದರೆ (Paediatric Urology), ವೆಸಿಕೋ ಯುರೆಟರಿಕ್‌ ರಿಫ್ಲû… (Vesico Uroteric Reflux), ಪೊಸ್ಟೇರಿಯರ್‌ ಯುರೆತ್ರಲ್‌ ವಾಲ್ವ… (Posterior Urethral Valve) ಹೈಪೋಸ್ಪೆಡಿಯಾಸ್‌ ((Hypospadias), ಫೆಮೋಸಿಸ್‌ (Phimosis), ಅನಿxಸೆಂಡೆಡ್‌ ಟೆಸ್ಟಿಸ್‌ (Undescended Testis) ಹಾಗೂ ಕ್ರಿಯಾತ್ಮಕ ದೋಷಗಳು (Night Bed Wetting etc) 

ಪಿಯುಜೆ ಅಬ್‌ಸ್ಟ್ರಕ್ಷನ್‌ 
(PUJ Obstruction):

ಇದರಲ್ಲಿ ಮೂತ್ರ ಪಿಂಡದಿಂದ ಮೂತ್ರಕೋಶಕ್ಕೆ ಮೂತ್ರವನ್ನು ಸಾಗಿಸುವ ಕೊಳವೆಯಲ್ಲಿ (Ureter) ಅಡಚಣೆಯಿದ್ದು, ಮೂತ್ರಪಿಂಡದಲ್ಲಿ ಊತ ಕಂಡುಬರುತ್ತದೆ. ಇದನ್ನು ಕೆಲವು ಬಾರಿ ಪ್ರಸವ ಪೂರ್ವ ಸ್ಕ್ಯಾನಿಂಗ್‌ನಲ್ಲಿ ಗುರುತಿಸಬಹುದು. ಮಗು ಜನಿಸಿದ ಅನಂತರ ನ್ಯೂಕ್ಲಿಯರ್‌ ಸ್ಕ್ಯಾನ್‌ ಮೂಲಕ ಮೂತ್ರ ಪಿಂಡದ ಕಾರ್ಯ ಮತ್ತು ಅಡಚಣೆಯ ತೀವ್ರತೆಯನ್ನು ನಿಖರವಾಗಿ ಕಂಡುಹಿಡಿಯಬಹುದು. 

ದೊಡ್ಡಮಕ್ಕಳಲ್ಲಿ ಈ ಕಾಯಿಲೆಯು ಹೊಟ್ಟೆನೋವು, ಮೂತ್ರದ ಸೋಂಕು ಅಥವಾ ಮೂತ್ರಪಿಂಡದಲ್ಲಿ ಹರಳನ್ನು ಕಾಣಬಹುದು. ಈ ನ್ಯೂನತೆಯನ್ನು ಶಸ್ತ್ರಚಿಕಿತ್ಸೆ ಮಾಡದಿದ್ದರೆ ರೋಗಕ್ಕೆ ಒಳಗೊಂಡ ಮೂತ್ರಪಿಂಡದ ವೈಫ‌ಲ್ಯತೆಗೆ ಕಾರಣವಾಗುತ್ತದೆ. ಕೀ ರಂಧ‌Å ಶಸ್ತ್ರಚಿಕಿತ್ಸೆ (Laproscopy) ಅಥವಾ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯಿಂದ ಅಡಚಣೆ ನಿವಾರಿಸಿ ಮುಮದಾಗುವ ಅನಾಹುತಗಳನ್ನು ತಡೆಯಬಹುದು. ಕೆಲವೊಮ್ಮೆ ಅಡಚಣೆ ತೀವ್ರವಾಗಿದ್ದರೆ ಹುಟ್ಟಿದ ಒಂದು ತಿಂಗಳೊಳಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.

Advertisement

ವೆಸಿಕೋ ಯುರೆಟರಿಕ್‌ ರಿಫ್ಲû… 
(Vesico Ureteric Reflux): 

ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ತಯಾರಾದ ಮೂತ್ರವು ಮೂತ್ರಕೋಶದಲ್ಲಿ ಶೇಖರಣೆಯಾಗಿ ಅನಂತರ ಪೂರ್ಣ ಪ್ರಮಾಣದಲ್ಲಿ ಜನನಾಂಗದ ಮೂಲಕ ವಿಸರ್ಜಿಸಲ್ಪಡುತ್ತದೆ. ಈ ಕಾಯಿಲೆಯಲ್ಲಿ ಒಂದಷ್ಟು ಪ್ರಮಾಣದ ಮೂತ್ರ ತಿರುಗಿ ಮೂತ್ರಪಿಂಡಕ್ಕೆ ಸಾಗಣೆಯಾಗಿ (Reflux) ಅಲ್ಲಿ ಗಾಯವನ್ನುಂಟು ಮಾಡುತ್ತದೆ. ಈ ರೀತಿಯ ಸ್ಥಿತಿಯನ್ನು ಮುತ್ರ ಕೋಶದ ಅಡಚಣೆ ((Bladder Outlet Obstruction) ಅಥವಾ ಮೂತ್ರ ಕೋಶದ ನರದೌರ್ಬಲ್ಯವಿ¨ªಾಗ ಕೂಡ ಕಂಡುಬರುತ್ತದೆ (Neurogenic Bladder).

ಈ ರೀತಿಯ ದೋಷ ಹೊಂದಿದ ಮಕ್ಕಳು ಪುನರಾವರ್ತಿತ ಮೂತ್ರದ ಸೋಂಕು ಅಥವಾ ಬೆಳವಣಿಗೆಯ ಕುಂಠಿತತೆಯಿಂದ ಬಳಲುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ರೋಗವು ಮೂತ್ರಪಿಂಡ ವೈಫ‌ಲ್ಯ ಪ್ರಮುಖ ಕಾರಣವಾಗಿದ್ದು ಮಕ್ಕಳಿಗೆ ಮೂತ್ರಪಿಂಡದ ಕಸಿ ಮಾಡಲು (Kidney Transplantation) ಕಾರಣವಾಗಿದೆ.

ಪ್ರಸವ ಪೂರ್ವ ಸ್ಯಾನಿಂಗ್‌ ನಲ್ಲಿ ಇದು ಮೂತ್ರಪಿಂಡದ ಊತದಂತೆ (Hydroneprosis) ಕಾಣಿಸಿಕೊಳ್ಳುತ್ತದೆ. ಈ ತರಹದ ಸ್ಥಿತಿಯನ್ನು ನ್ಯೂಕ್ಲಿಯರ್‌ ಸ್ಕ್ಯಾನ್‌ ಮತ್ತು MCU ಟೆಸ್ಟ್‌ ಮೂಲಕ ದೃಢಪಡಿಸಿ ಅನಂತರ ಚಿಕಿತ್ಸೆ ನೀಡಬಹುದು. ಮೂತ್ರಪಿಂಡದ ಕಾರ್ಯ (Kidney Function) ಚೆನ್ನಾಗಿದ್ದು ಮತ್ತು ರಿಫ್ಲಕ್ಸ್‌ ತೀವ್ರತೆ ಕಡಿಮೆ ಇದ್ದರೆ ಮೂತ್ರ ವಿಸರ್ಜನೆಯ ನೈರ್ಮಲ್ಯ ಕ್ರಮ ಹಾಗೂ ಆಂಟಿಬಯಾಟಿಕ್‌ ಪ್ರೊಫೈಲಾಕ್ಸಿಸ್‌ (Urine Hygiene Antibiotic prophylaxis) ಚಿಕಿತ್ಸೆ ನೀಡಬಹುದು. ಇನ್ನು ಕೆಲವೊಮ್ಮೆ ಸಿಸ್ಟೋಸ್ಕೋಪಿ (ಮೂತ್ರ ರೋಗದ ಎಂಡೋಸ್ಕೊಪಿ) ಮೂಲಕ ಔಷಧ ನೀಡಿ ಗುಣಪಡಿಸಬಹುದು. ಆದರೆ ಶಸ್ತ್ರಚಿಕಿತ್ಸೆ ((Ureteric reimplantation) ಮೂಲಕ  ಸರಿಪಡಿಸಿದರೆ ಉತ್ತಮ ಫ‌ಲಿತಾಂಶ ಸಾಧ್ಯ.

ಪೊಸ್ಟೇರಿಯರ್‌ 
ಯುರೆಥÅಲ್‌ ವಾಲ್ವ… 
(Posterior Urethral Valve):

ಈ ರೋಗವು ಗಂಡುಮಕ್ಕಳಲ್ಲಿ ಮಾತ್ರ ಕಂಡುಬರುತ್ತದೆ. ಈ ರೋಗವು ನವಜಾತ ಶಿಶುಗಳಲ್ಲಿ ಮೂತ್ರಪಿಂಡದ ವೈಫ‌ಲ್ಯಕ್ಕೆ ಕಾರಣವಾಗಬಹುದು. ಈ ಕಾಯಿಲೆಯಲ್ಲಿ ಮೂತ್ರಕೋಶದಿಂದ ಮೂತ್ರ ವಿಸರ್ಜನೆಯಾಗುವ ಕೊಳವೆಯಲ್ಲಿ (Urethra) ಅಡಚಣೆ ಇದ್ದು ಮೂತ್ರಪಿಂಡಕ್ಕೆ ಹಾನಿಯುಂಟಾಗುತ್ತದೆ. ಕೆಲವೊಮ್ಮೆ ಜನ್ಮತಃ ಮೂತ್ರಪಿಂಡ ಬೆಳವಣಿಗೆ ಆಗದೆ ಹುಟ್ಟಿದ ಕೂಡಲೇ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಈ ರೋಗವು ಹುಟ್ಟಿದ ಮಗುವಿನಿಂದ ಹಿಡಿದು 8-10 ವರ್ಷದ ಮಕ್ಕಳಲ್ಲಿ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತದೆ ಮತ್ತು ಮೂತ್ರಪಿಂಡದ ವೈಫ‌ಲ್ಯತೆಗೆ ಕಾರಣವಾಗುತ್ತದೆ. ಈ ರೀತಿಯ ತೊಂದರೆಯನ್ನು ಪ್ರಸವಪೂರ್ವ ಸ್ಕ್ಯಾನಿಂಗ್‌ನಲ್ಲಿ ಸುಮಾರಾಗಿ ಕಂಡುಹಿಡಿಯಬಹುದು. ಪ್ರಸವಪೂರ್ವ ಸ್ಕ್ಯಾನಿಂಗ್‌ನಲ್ಲಿ ಈ ರೋಗದ ಸಂದೇಹವಿದ್ದರೆ ನವಜಾತ ಶಿಶುವಿನ ರಕ್ತ ಪರೀಕ್ಷೆ ಹಾಗೂ MCU ಮೂಲಕ ರೋಗ ಲಕ್ಷಣದ ತೀವ್ರತೆಯನ್ನು ಗುರುತಿಸಿ ಶಸ್ತ್ರಚಿಕಿತ್ಸೆ ನೀಡಬಹುದು (Cystoscopy and Fulguration). 

ದೊಡ್ಡ ಮಕ್ಕಳಲ್ಲಿ ಈ ರೋಗವು ಮೂತ್ರಧಾರೆ ತುಂಬಾ ಕ್ಷೀಣವಾಗಿ ಕಂಡುಬರುವುದು, ಪುನರಾವರ್ತಿತ ಮೂತ್ರದ ಸೋಂಕು, ಮೂತ್ರ ಸೋರುವಿಕೆ, ಕುಂಠಿತ ಬೆಳವಣಿಗೆ ಹಾಗೂ ಮೂತ್ರ ಪಿಂಡದ ವೈಫ‌ಲ್ಯತೆಯಾಗಿ ಕಾಣಬಹುದು. 

ಹೈಪೋಸ್ಪೆಡಿಯಾಸ್‌
(Hypospadias):

ಗಂಡು ಮಕ್ಕಳಲ್ಲಿ ಮೂತ್ರವು ಜನನಾಂಗದ ತುದಿಯಿಂದ ಹೊರಬರುತ್ತದೆ. ಆದರೆ ಈ ತರಹದ ವಿಲಕ್ಷಣತೆಯಲ್ಲಿ ಮೂತ್ರದ್ವಾರವು ಜನನಾಂಗದ ಕೆಳಭಾಗದಲ್ಲಿ ಕಂಡುಬಂದು ಮೂತ್ರಧಾರೆ ಸರಿಯಾಗಿರುವುದಿಲ್ಲ. ಹೊಸದಾದ ಮೂತ್ರದ್ವಾರವನ್ನು ಚರ್ಮದ ಸಹಾಯದಿಂದ ಶಸ್ತ್ರಚಿಕಿತ್ಸೆ ಮೂಲಕ ರಚಿಸಬೇಕಾಗುತ್ತದೆ.

ಅನ್‌ಡಿಸೆಂಡೆಡ್‌ ಟೆಸ್ಟಿಸ್‌ ಗಂಡು ಮಕ್ಕಳಲ್ಲಿ ವೃಷಣ (Testis)ಗಳು ಜನನಾಂಗದ ಕೆಳಗಿರುವ ಚರ್ಮದ ಚೀಲದಲ್ಲಿ ಮಗು ಹುಟ್ಟುವ ಮುನ್ನ  ಬಂದಿರಬೇಕು. ಕೆಲವೊಮ್ಮೆ ಒಂದು ಅಥವಾ ಎರಡೂ ವೃಷಣ ಚೀಲಕ್ಕೆ ಸೇರದೆ ಕೆಲಭಾಗದ ಹೊಟ್ಟೆಯಲ್ಲಿ ಇನ್ನೂ ಕೆಲವೊಮ್ಮೆ ಹೊಟ್ಟೆಯ ಒಳಗಡೆ ಉಳಿದುಕೊಂಡು ಬರುತ್ತದೆ. ಸರಿಯಾದ ಸಮಯದಲ್ಲಿ ಗುರುತಿಸಿ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿ ವೃಷಣ ಚೀಲದಲ್ಲಿ ವೃಷಣಗಳನ್ನು ತಂದಿರಿಸಬೇಕು. ಇಲ್ಲವಾದಲ್ಲಿ ವೃಷಣ ತಿರುಗಿ (Torsion) ರಕ್ತಪರಿಚಲನೆ ಕಡಿಮೆಯಾಗಿ ಅದು ಕಾರ್ಯಹೀನವಾಗುತ್ತದೆ. ಇಂತಹ ವೃಷಣಗಳಲ್ಲಿ ಕ್ಯಾನ್ಸರ್‌ ಆಗುವ ಸಂಭವನೀಯತೆ ಅಧಿಕವಾಗಿರುತ್ತದೆ.

ಮೂತ್ರದೋಷಗಳು:
ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುವ ಮೂತ್ರ ತೊಂದರೆಗಳೆಂದರೆ ರಾತ್ರಿಯ ಸಮಯದಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡುವುದು, ಮೂತ್ರ ತಡೆಹಿಡಿಯುವ ಅಭ್ಯಾಸ ((Urine Holding Behaviour) ಮತ್ತು ತಮಗೆ ಅರಿವಿಲ್ಲದೆ ಮೂತ್ರ ವಿಸರ್ಜನೆ ಮಾಡುವುದು (Urine Incontinence). ಈ ಎಲ್ಲ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬರುವ ವರ್ತನೆ ತೊಂದರೆ ((Behavioural Problems) ಮೂತ್ರ ಕೋಶದ ತೊಂದರೆ ಅಥವಾ ನರದ ತೊಂದರೆ (Neurogenic Bladder)ಗಳಿಂದ ಬರಬಹುದು. ಮಕ್ಕಳಲ್ಲಿ ವರ್ತನೆ ತರಬೇತಿ ಮತ್ತು ಮೂತ್ರ ವಿಸರ್ಜನೆ ತರಬೇತಿ (Behavioural Training  Toilet Traning) ನೀಡಿ ಗುಣಪಡಿಸಬಹುದು. ಬೆನ್ನು ಹುರಿ, ಮೆದುಳಿನ ತೊಂದರೆ (Brain  Spinal cord)ಅಥವಾ ಮೂತ್ರ ರೋಗದ (Urinary bladder) ರಚನಾತ್ಮಕ ಅಭಾವಗಳಿದ್ದಲ್ಲಿ ಹೆಚ್ಚಿನ ತನಿಖೆ (USG, MRI Spine) ಮಾಡಿ ಕಾರಣ ಗುರುತು ಪಡಿಸಿ ಚಿಕಿತ್ಸೆ ಒದಗಿಸಬೇಕಾಗುತ್ತದೆ. 

ಇವುಗಳಲ್ಲದೆ ಅನೇಕ ರಚನಾತ್ಮಕ ತೊಂದರೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಅಥವಾ ಜೀವನದ ಶೈಲಿಯಲ್ಲಿ ಪರಿಣಾಮ ಕಾಣುವಂತೆ ಮಾಡಬಹುದು.

ಈ ಎಲ್ಲ ರೋಗ ಲಕ್ಷಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಒಂದನೇ ಮಹಡಿಯಲ್ಲಿರುವ ಮಕ್ಕಳ ಶಸ್ತ್ರಚಿಕಿತ್ಸೆ (Paediatric Surgery)ಹಾಗೂ ಮಕ್ಕಳ ಮೂತ್ರರೋಗ ಶಸ್ತ್ರಚಿಕಿತ್ಸಾ ವಿಭಾಗ (Paediatric Urology)ವನ್ನು ಸಂಪರ್ಕಿಸಬಹುದು.ದೂರವಾಣಿ: 0824-2445858 (Ext No: 5380) 

ಡಾ| ಜಯತೀರ್ಥ ಜೋಶಿ,
ಪೀಡಿಯಾಟ್ರಿಕ್‌ ಸರ್ಜರಿ
ಕೆ.ಎಂ.ಸಿ. ಆಸ್ಪತ್ರೆ,
ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next