ರಾಣಿಬೆನ್ನೂರ: ಸುತ್ತಮುತ್ತಲಿನ ಪರಿಸರವನ್ನು ಸ್ವ ಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘೀ, ಚಿಕೊನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಂದ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಗ್ರಾಪಂ ಅಧ್ಯಕ್ಷ ಮಾದೇಗೌಡ ಜಾಪಾಳಿ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಗರಿಕರೆಲ್ಲರೂ ಪ್ರಜ್ಞಾವಂತರಾಗಿ ನಮ್ಮ ಸುತ್ತಮುತ್ತಲಿನ ಜಾಗದಲ್ಲಿ ಪರಿಸರವನ್ನು ಸ್ವತ್ಛತೆಯಿಂದ ಇಟ್ಟುಕೊಳ್ಳೋಣ. ಸರ್ಕಾರದ ಜೊತೆಗೆ ಕೈಜೋಡಿಸುವುದರ ಮೂಲಕ ಡೆಂಘೀ ಮತ್ತು ಚಿಕೂನ್‌ಗುನ್ಯಾ ಮುಕ್ತ ಗ್ರಾಮವನ್ನಾಗಿ ಮಾಡೋಣ ಎಂದು ಕರೆಕೊಟ್ಟರು. ಆರೋಗ್ಯ ನೀರಿಕ್ಷಣಾಧಿ ಕಾರಿ ಎ.ಆರ್. ತಿಪ್ಪೇಸ್ವಾಮಿ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳ ಮುಂಜಾಗ್ರತಾ ಕ್ರಮವಾಗಿ ಅರಿವು ಮೂಡಿಸಲಾಗುತ್ತಿದೆ.
ಗ್ರಾಮಸ್ಥರು ಗ್ರಾಮದಲ್ಲಿ ದಿನ ನಿತ್ಯ ಬಳಸುವ ನೀರಿನ ತೊಟ್ಟಿ, ಬ್ಯಾರಲ್, ಡ್ರಮ್, ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ಮಳೆ ಯಾವಾಗ ಚುರುಕಾಗಿರುತ್ತದೋ ಅಂತಹ ಕಾಲದಲ್ಲಿ ಮನೆ ಸುತ್ತಮುತ್ತ ಕೃತಕ ವಸ್ತುಗಳಾದ ಟೈರ್‌ಗಳು, ತೆಂಗಿನಕಾಯಿ ಚಿಪ್ಪು ಅಥವಾ ತೆರೆದ ಜಾಗದಲ್ಲಿ ನೀರು ಕೃತಕವಾಗಿ ಶೇಖರಣೆಯಾದರೆ ಅವುಗಳಿಂದ ಸೊಳ್ಳೆಗಳು
ಮೊಟ್ಟೆ ಇಡುವುದರ ಮೂಲಕ ಸೊಳ್ಳೆಗಳು ಹೆಚ್ಚಾಗುತ್ತವೆ.
ಅದರಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂತಾನೋತ್ಪತ್ತಿಯಾಗುತ್ತದೆ. ಅದಕ್ಕೆ ಮೂಲ ಕಾರಣ ನೀರು ಮತ್ತು ನಮ್ಮ ಸುತ್ತಮುತ್ತಲಿನ ಹವಾಗುಣ. ಆದ್ದರಿಂದ ಸಾರ್ವಜನಿಕರು ಎಷ್ಟು ಪ್ರಮಾಣದಲ್ಲಿ ಜಾಗೃತರಾಗಿರುತ್ತಾರೋ ಅಷ್ಟೇ ಸಮಾಜಕ್ಕೆ ಒಳ್ಳೆಯದು ಎಂದರು. ಪ್ರಾಥಮಿಕ ಆರೋಗ್ಯ ಸುರಕ್ಷಿತಾಕಾರಿಯಾದ ಕೆ.ಎನ್. ರಾಧಿ ಕಾ, ಪ್ರಾಚಾರ್ಯರ ಪಿ.ಮುನಿಯಪ್ಪ, ಸ್ಥಳೀಯ ಸಲಹಾ ಸಮಿತಿ ಸದಸರಾದ ಎಂ.ಸಿ. ಲಿಂಗದಹಳ್ಳಿ, ಗ್ರಾಪಂ ಸದಸ್ಯರಾದ ಅರುಣಕುಮಾರ ಕೆ., ಲಲಿತಾ. ಆರ್, ಸಿಬ್ಬಂದಿ ಶಂಕರಗೌಡ ಪೊಲೀಸ್ ಗೌಡ್ರ, ಮಲ್ಲೇಶ ಹೂರಗಿ, ಶಿಕ್ಷಕರಾದ ಬಿ.ಎ. ವಿಜಯಕುಮಾರ, ಸಿ.ಜೈಪ್ರಕಾಶ, ಜಿ.ಸುಚಿತ್ರಾ, ಕೆ.ಜೆ. ಆಶಾ, ಉಮ್ಮೇಹಬೀಬಾ, ಎಸ್. ಎಸ್.ಬಡ್ನಿ, ಆರ್.ಪ್ರವೀಣ್‌ಕುಮಾರ, ಆಶಾ ಕಾರ್ಯಕರ್ತೆರಾದ ಗಂಗಮಾಳವ್ವ ಕುಸಗೂರ, ಸುನಂದ ಕುಸಗೂರ, ದ್ರಾಕ್ಷಯಣಿ ಕಮ್ಮಾರ, ಅಕ್ಕಮ್ಮ ಇಮ್ಮಡಿ ಮತ್ತು ಶಾಲಾ, ಕಾಲೇಜು ಮಕ್ಕಳು ಇದ್ದರು.