Advertisement

ಬಿಜೆಪಿಯವರೇ ನನ್ನ ಸೋಲಿಗೆ ಕಾರಣರಾದರು: ಜಯಪ್ರದಾ

10:03 AM May 25, 2019 | Vishnu Das |

ಲಕ್ನೋ: ನಮ್ಮ ಪಕ್ಷದವರು ವಿರೋಧಿ ಅಭ್ಯರ್ಥಿಗೆ ಸಹಕಾರ ನೀಡಿದ ಕಾರಣ ನನಗೆ ಸೋಲಾಯಿತು ಎಂದು ಹಿರಿಯ ನಟಿ , ಬಿಜೆಪಿ ನಾಯಕಿ ಜಯಪ್ರದಾ ಅವರು ಬೇಸರ ಹೊರ ಹಾಕಿದ್ದಾರೆ.

Advertisement

ಎಎನ್‌ಐನೊಂದಿಗೆ ಮಾತನಾಡಿದ ಜಯಪ್ರದಾ , ನಾನು ವರಿಷ್ಠರೊಂದಿಗೆ ಮಾತನಾಡಿದ್ದು, ಯಾರು ವಿರೋಧಿ ಅಭ್ಯರ್ಥಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದೇನೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ರಾಮ್‌ಪುರ್‌ ಕ್ಷೇತ್ರದಲ್ಲಿ ಜಯಪ್ರದಾ ಎಸ್‌ಪಿ ನಾಯಕ ಅಜಂ ಖಾನ್‌ ವಿರುದ್ಧ 1, 09,977 ಮತಗಳ ಅಂತರದ ಅಘಾತಕಾರಿ ಸೋಲು ಅನುಭವಿಸಿದ್ದರು.

ಜಯಪ್ರದಾ 2004 ಮತ್ತು 2009 ರಲ್ಲಿ ಎಸ್‌ಪಿ ಪಕ್ಷದ ಸಂಸದೆಯಾಗಿ ರಾಂಪುರ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next