Advertisement

ಅನಗತ್ಯ ಸಂಚಾರದ ವಿರುದ್ಧ ಕಠಿಣ ಕ್ರಮ: ರಾಜ್ಯ ಸರಕಾರ

06:01 PM Jul 01, 2020 | Suhan S |

ಮುಂಬಯಿ, ಜೂ. 30: ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ನಾಗರಿಕರು ತಮ್ಮ ಮನೆಯಿಂದ 2 ಕಿ. ಮೀ. ವ್ಯಾಪ್ತಿಯನ್ನು ಮೀರಿ ಹೋಗುವುದನ್ನು ಮುಂಬಯಿ ಪೊಲೀಸರು ನಿಷೇಧಿಸಿದ್ದು, ಇದೊಂದು ಅತ್ಯಗತ್ಯ ನಡೆಯಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.

Advertisement

ಪೊಲೀಸರ ಮಾರ್ಗಸೂಚಿಗಳ ಪ್ರಕಾರ, ನಾಗರಿಕರು ಕೆಲಸಕ್ಕೆ ಹೋಗಬೇಕಾದರೆ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಮಾತ್ರ 2 ಕಿ.ಮೀ. ಮಿತಿ ವರೆಗೆ ಸಂಚರಿಸಬಹುದು. ಈ ನಿಯ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೂ ಎಂದು ರಾಜ್ಯ ಪೊಲೀಸ್‌ ಇಲಾಖೆ ಎಚ್ಚರಿಸಿದೆ. ರಸ್ತೆಗಳಲ್ಲಿ ಅನಿ ಯಂತ್ರಿತ ಮತ್ತು ಅನಗತ್ಯ ಜನಸಂದಣಿಯನ್ನು ತಡೆಹಿ ಡಿಯುವುದು ಇದರಉದ್ದೇಶವಾಗಿದೆ ಎಂದು ಉದ್ಧವ್‌ ಠಾಕ್ರೆ ಹೇಳಿದರು.

ಮುಂಬಯಿ ಮತ್ತು ಮುಂಬಯಿ ಮೆಟ್ರೋಪಾಲಿಟನ್‌ ಪ್ರದೇಶದಲ್ಲಿರುವ ಜನರು ಯಾವುದೇ ಕಾರಣ ವಿಲ್ಲದೆ ತಮ್ಮ ಮನೆಗಳಿಂದ ಹೊರಹೋಗುವುದನ್ನು ಕಾಣಬಹುದು. ಇದು ಜನಸಂದಣಿ ಮತ್ತು ಸಂಚಾರ ದಟ್ಟಣೆಗೆ ಕಾರಣ ವಾಗುತ್ತಿದೆ. ಜನರ ಈ ಮಡೆಯಿಂದ ಕೋವಿಡ್ ಹರಡುವುದನ್ನು ನಿಯಂತ್ರಣದಲ್ಲಿಡಲು ಮಾಡಿದ ಪ್ರಯತ್ನಗಳು ವ್ಯರ್ಥವಾಗುತ್ತದೆ. ಈ ಹಿನ್ನೆಲೆ ಇಂತಹ ಸಂದರ್ಭದಲ್ಲಿ ಮುಂಬಯಿ ಪೊಲೀಸರು ತೆಗೆದುಕೊಳ್ಳುವ ಕ್ರಮಗಳು ಅಗತ್ಯವಾಗಿರುತ್ತದೆ ಎಂದು ಠಾಕ್ರೆ ಪುನರುಚ್ಚಿರಿಸಿದ್ದಾರೆ.

ಪೊಲೀಸರ ಆದೇಶ ಗೊಂದಲಕ್ಕೆ ಕಾರಣವಾಯಿತು : ರಾಜ್ಯ ಸರಕಾರದ ಅಧಿಕಾರಿಗಳ ಪ್ರಕಾರ, ಈ ನಿರ್ಬಂಧಗಳನ್ನು ವಿಧಿಸಲು ಮುಂಬಯಿ ಪೊಲೀಸರಿಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿಲ್ಲ. ಕಾಲಕಾಲಕ್ಕೆ ಹೊರಡಿಸಿದ ಅಧಿಸೂಚನೆಗಳ ಮೂಲಕ ಅವರಿಗೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಜ್ಞೆಯು ಬಹಳಷ್ಟು ಗೊಂದಲಕ್ಕೆ ಕಾರಣವಾಯಿತು ಎಂಬುದು ನಿಜ. ಆದರೆ ಅದು ಅಗತ್ಯವಾಗಿತ್ತು. ಅವರು ನಾಗರಿಕರಲ್ಲಿ ಅಗತ್ಯ ಜಾಗೃತಿ ಮೂಡಿಸಿದ್ದರೆ, ಗೊಂದಲವನ್ನು ತಪ್ಪಿಸಬಹುದಿತ್ತು ಎಂದು ರಾಜ್ಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.

14,691 ವಾಹನಗಳು ವಶಕ್ಕೆ : ಜೋಗೇಶ್ವರಿ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ ಮಹೇಂದ್ರ ನೆರ್ಲೇಕರ್‌ ಮಾಹಿತಿ ನೀಡಿ, ಕಳೆದ 24 ಗಂಟೆಗಳಲ್ಲಿ ಮುಂಬಯಿ ಪೊಲೀಸರು ಸಂಚಾರ ಇಲಾಖೆಯೊಂದಿಗೆ 14,691 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು. ಜನರು ಅನಗತ್ಯವಾಗಿ ಸಂಚರಿ ಸುತ್ತಿದ್ದಾರೆ. ನಾವು ಅವರನ್ನು ತಡೆದಾಗ ಕ್ಷುಲ್ಲಕ ಕಾರಣಗಳನ್ನು ನೀಡಿ ದಾಖಲೆಗಳನ್ನು ನಮಗೆ ತೋರಿಸಲು ವಿಫ‌ಲರಾಗುತ್ತಾರೆ. ಅಂತವರ ವಿರುದ್ಧ ಕ್ರಮಕೈಗೊಳ್ಳಿತ್ತಿದ್ದೇವೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next