ಹರಪನಹಳ್ಳಿ: ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಒತ್ತಡ ನಿವಾರಣೆ ಹಾಗೂ ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ ಎಂದು ಉಪವಿಭಾಗಾಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಜೆಸಿಐ ಸ್ಫೂರ್ತಿ,ಅಥ್ಲೆಟಿಕ್ಸ್ ಅಸೋಸಿಯೇಷನ್, ದೈಹಿಕ ಶಿಕ್ಷಕರ ಸಂಘ, ಜೀವವಿಮಾ ಪ್ರತಿನಿಧಿಗಳ ಸಂಘ, ವೈದ್ಯಕೀಯ ಸಂಘ, ಎಪಿಎಂಸಿ ವರ್ತಕರ ಸಂಘ, ಕರುಣೆ ಜೀವಿ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಯೋಗದ ಮಹತ್ವ ತಿಳಿಸಲು ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಶಾಲೆಗಳಲ್ಲಿ ಶಿಬಿರ ಏರ್ಪಡಿಸಬೇಕು. ಉತ್ತಮ ಆರೋಗ್ಯ ಕಾಪಾಡುವಲ್ಲಿ ಯೋಗಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಯೋಗ ಮಾಡುವುದರಿಂದ ಮಾನಸಿಕ ಹಾಗೂ ಶಾರೀರಿಕ ಕಾಯಿಲೆಗಳು ದೂರವಾಗುತ್ತವೆ ಎಂದು ಹೇಳಿದರು.
ತಹಶೀಲ್ದಾರ್ ಎಲ್. ಶಿವಶಂಕರ ನಾಯ್ಕ ಮಾತನಾಡಿ, ಯೋಗ ಕೇವಲ ದಿನಾಚರಣೆಗೆ ಸೀಮಿತವಾಗದೆ ನಮ್ಮ ದಿನನಿತ್ಯದ ಚಟುವಟಿಕೆ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್ ಮಾತನಾಡಿ, ಭಾರತಕ್ಕಷ್ಟೇ ಸೀಮಿತವಾಗಿದ್ದ ಯೋಗವನ್ನು ಪ್ರಧಾನಿ ಮೋದಿಯವರು ವಿಶ್ವಕ್ಕೆ ಪರಿಚಯಿಸಿದರು ಎಂದರು.
ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ್, ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ್, ವೈದ್ಯರ ಸಂಘದ ಅಧ್ಯಕ್ಷ ಡಾ| ಕೆ.ಎಂ. ಖಾನ್, ಪ್ರೊ| ತಿಮ್ಮಪ್ಪ, ಮುಖಂಡರಾದ ಪಟ್ನಾಮದ ನಾಗರಾಜ್, ಡಾ| ಮಹೇಶ್, ರವೀಂದ್ರ ಅಕಾರ್, ಪ್ರಸನ್ನಕುಮಾರ ಜೈನ, ಹೇಮಣ್ಣ ಮೊರಗೇರಿ, ಯು.ಪಿ. ನಾಗರಾಜ್, ಪಿ.ಟಿ. ನಾಗರಾಜ್, ಇರ್ಷಾದ್
ಭಾಷಾ, ಯೋಗ ಗುರುಗಳಾದ ಎ. ಗಂಗಪ್ಪ, ಕಸುಮಾ ಜಗದೀಶ್, ಲೋಕೇಶ್, ಬಂಕಾಪುರ, ವೀರಭದ್ರಪ್ಪ,
ಸುಮೇರಿಮಲ್ಲ ಜೈನ್, ವಿ.ಎಸ್. ರುಸ್ತುಮ್, ಸಿದ್ದಲಿಂಗನಗೌಡ, ಎನ್.ಜಿ. ಬಸವರಾಜಗೌಡ, ಮಂಜುನಾಥ್, ಲಕ್ಷ್ಮಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಇದ್ದರು.