Advertisement

ಪಕ್ಷದ ಬಲವರ್ಧನೆಗೆ ಬೂತ್‌ ಮಟ್ಟದಲ್ಲಿ ಶ್ರಮಿಸಿ

01:27 PM Jul 20, 2017 | |

ಕುರುಗೋಡು: ದೇಶದ ಹಿತಕ್ಕಾಗಿ ಪ್ರತಿಯೊಬ್ಬ ನಾಗರಿಕರು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಕಾಂಗ್ರೆಸ್‌ ಹೈದ್ರಾಬಾದ್‌ ಕರ್ನಾಟಕ
ಪ್ರದೇಶದ ಉಸ್ತುವಾರಿ ಡಾ| ಶೈಲೇಂದ್ರನಾಥ ಹೇಳಿದರು.

Advertisement

ಪಟ್ಟಣದ ಕೋಳೂರು-ಕುರುಗೋಡು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬ್ಲಾಕ್‌ ಕಾಂಗ್ರೆಸ್‌
ಪದಾಧಿ ಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಹಾಗೂ ಕಾರ್ಮಿಕ
ವಿರೋಧ ನೀತಿ ಅನುಸರಿಸುತ್ತಿದೆ. ಜೊತೆಗೆ ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯದೆ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು 
ಆರೋಪಿಸಿದರು.

ಗ್ರಾಮೀಣ ವಿಭಾಗದ ಜಿಲ್ಲಾಧ್ಯಕ್ಷ ಶಿವಯೋಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದಾರೆ.
ಆದ್ದರಿಂದ ಪ್ರತಿಯೊಬ್ಬ ಕಾಂಗ್ರೆಸ್‌ ಕಾರ್ಯಕರ್ತರು ಬೂತ್‌ ಮಟ್ಟದಿಂದ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಕೆಲಸ 
ಮಾಡಬೇಕೆಂದರು.

ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಂಪ್ಲಿ ಮತ್ತು ಕುರುಗೋಡು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಸಭೆ ಕರೆದು ಆಯ್ಕೆ ಮಾಡುವಂತೆ ಕೆಲ ಸ್ಥಳೀಯ ಮುಖಂಡರು ಹೈದ್ರಾಬಾದ್‌-ಕರ್ನಾಟಕ ಪ್ರದೇಶದ ಉಸ್ತುವಾರಿ ಡಾ| ಲೇಂದ್ರನಾಥ ಅವರನ್ನು ಒತ್ತಾಯಿಸಿದರು. ವಾಲ್ಮೀಕಿ ನಿಗಮದ ಅಧ್ಯಕ್ಷ ವಿ.ಎನ್‌. ಗಿರಿಮಲ್ಲಪ್ಪ, ಜಿಪಂ ಸದಸ್ಯ ಗೋಪಾಲ್‌, ಕೆ.ಬಸಪ್ಪ, ಕೋಳೂರು-ಕುರುಗೊಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಮಲ್ಲಿಕರ್ಜುನ್‌, ಕಂಪ್ಲಿ ಬ್ಲಾಕ್‌ ಅಧ್ಯಕ್ಷ ಸಿ.ಆರ್‌. ಹನುಮಂತ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಕೆ.ಗಾ  ಲಿಂಗಪ್ಪ, ಎಸ್‌ಟಿ ವಿಭಾಗದ ಅಧ್ಯಕ್ಷ ನಾರಾಯಣಪ್ಪ, ಪಾಯಿಧ್‌ ಸಾಬ್‌, ಎ.ರವೀಂದ್ರ, ಸಿ. ಯುವರಾಜ, ಶೆಟ್ಟಿ
ಮಂಜು, ಬಸವರಾಜಗೌಡ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next