Advertisement
ಅನೇಕ ಮಂದಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ, ಝೊಮ್ಯಾಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಸ್ವಿಗ್ಗಿ, ಝೊಮ್ಯಾಟೋ ಸೇರಿ ಇನ್ನಿತರ ಆಹಾರ ಸರಬರಾಜು ಆ್ಯಪ್‌ಗಳ ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮಾಡಲಾಗುತ್ತಿದೆ.
Related Articles
Advertisement
ಇದನ್ನೂ ಓದಿ: ಮಂಗಳೂರು: ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ
ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿಗದಿ ಮಾಡಬೇಕು ಎಂಬುದು ಹಿಂದಿನಿಂದಲೂ ಕೇಳಿಬರುತ್ತಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಬಿಬಿಎಂಪಿ 8 ವಲಯಗಳಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಲ್ಲಿ ವ್ಯಾಪಾರಿ ವಲಯ ಎಂದು ನಿಗದಿ ಮಾಡಲಾಗುತ್ತದೆ. ಅದಕ್ಕಾಗಿ ವಲಯ ಜಂಟಿ ಆಯುಕ್ತರು ಸೇರಿ ಇನ್ನಿತರ ಅಧಿಕಾರಿಗಳಿಂದ ವ್ಯಾಪಾರಿ ವಲಯ ಮಾಡಬಹುದಾದಂತಹ ಸ್ಥಳಗಳ ಪಟ್ಟಿ ನೀಡುವಂತೆ ಸೂಚಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಸಾಲ ಸೌಲಭ್ಯಕ್ಕೆ ಚಿಂತನೆ ತರಬೇತಿ, ಮಾರಾಟ ವಿಸ್ತರಿಸಲು ಅವಕಾಶ ನೀಡುವುದರ ಜತೆಗೆ ಬೀದಿಬದಿ ಆಹಾರ ಮಾರಾಟಗಾರರಿಗೆ ಬಿಬಿಎಂಪಿಯಿಂದ ಸಾಲವನ್ನೂ ಕೊಡಿಸಲಾಗುತ್ತದೆ. ಪಾಲಿಕೆ ಈಗಾಗಲೆ ನಿಗದಿ ಮಾಡಿರುವ ಬ್ಯಾಂಕ್‌ಗಳಿಂದ ಬೀದಿಬದಿ ಆಹಾರ ಮಾರಾಟಗಾರ ರಿಗೆ 2 ಲಕ್ಷ ರೂ. ಸಾಲ ಕೊಡಿಸಲಾಗುತ್ತದೆ. ಅದನ್ನು ವ್ಯಾಪಾರಿಗಳು ಹಂತ ಹಂತವಾಗಿ ತೀರಿಸಬೇಕಿದೆ.ಬೀದಿ ಬದಿ ಆಹಾರ ಮಾರಾಟಗಾರರ ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. – ರಾಮಪ್ರಸಾದ್ ಮನೋಹರ್, ಬಿಬಿಎಂಪಿ ವಿಶೇಷ ಆಯುಕ್ತ
–ಗಿರೀಶ್ ಗರಗ