Advertisement
ಸಾವಿತ್ರಿ ಸೋಮಪ್ಪ ಕೊಡ್ಲಿ ಕುಂದಗೋಳ ತಾಲೂಕಿನ ರಾಮಾಪುರ ಗ್ರಾಮದವರು. ಇರುವ ಎರಡು ಎಕರೆ ಜಮೀನಿನಲ್ಲಿ ಸಂಸಾರ ತೂಗಬೇಕು. 2000 ಸಾವಿರ ಇಸವಿಯಲ್ಲಿ, ಸ್ತ್ರೀಶಕ್ತಿ ಸಂಘ ಕಟ್ಟಿದರು. ಜಗದಾಂಬ ಮಹಿಳಾಸ್ವಸಹಾಯ ಸಂಘ ಕಟ್ಟಿದರು. ಅದು 12ಮಹಿಳೆಯರ ತಂಡ. ಕೃಷಿಯ ಜೊತೆಹೈನುಗಾರಿಕೆ ಸೇರಿದರೆ ಆರ್ಥಿಕವಾಗಿ ಮಹಿಳೆಯರು ಬಲಾಡ್ಯರಾಗಬಹುದು ಎಂಬಉದ್ದೇಶದಿಂದ ಬ್ಯಾಂಕ್ ಲೋನ್ ಕೊಡಿಸಿದರು. ಮನೆ ಮನೆಗೂ ಹಸು ,ಎಮ್ಮೆ ಬಂದವು. ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಿತು.ಹಾಲಿನ ಡೇರಿ ಶುರುವಾಯ್ತು: ಆದರೆ, ಹಾಲು ಕೊಳ್ಳುವವರೇ ಇಲ್ಲ! “ಹೋಟೆಲ್ ನವರು ಎಮ್ಮೆಹಾಲು ಒಯ್ಯುತ್ತಿದ್ದರು. ಆಕಳ ಹಾಲುಬಿಟ್ಟೋಗ್ತಿದ್ದರು. ಬ್ಯಾಂಕ್ ಸಾಲ ಬರ್ತಿ ಮಾಡ್ಲಿಕ್ಕೆರೊಕ್ಕ ಬರೊವಲ್ಲದು’! ಇಂಥ ಸಂದರ್ಭದಲ್ಲಿರಾಮಾಪುರದಲ್ಲಿ ಹಾಲಿನ ಡೇರಿ ಮಾಡುವ ಆಲೋಚನೆ ಸಾವಿತ್ರಿಯವರಿಗೆ ಬಂತು.
Related Articles
Advertisement
ಕಿರು ಉದ್ಯಮಗಳು ಅಗತ್ಯ: ಅಗರಬತ್ತಿ ಉದ್ಯಮದ ಜೊತೆಗೆ, ಮೆಣಸಿನ ಕಾಯಿ ಪುಡಿ ತಯಾರಿಕೆ ಕೂಡ ಮಾಡುತ್ತಿದ್ದಾರೆ. ಒಂದೇ ಬಗೆಯ ಬಿಸಿನೆಸ್ ಇದ್ದರೆ ಸಾಲದು. ಮುಖ್ಯಉದ್ಯಮದ ಜೊತೆ ಒಂದೆರೆಡು ಕಿರು ಉದ್ಯಮಗಳು ಜೊತೆಗಿರಬೇಕು. ಹೆಚ್ಚು ಕಡಿಮೆಯಾಗಿಒಂದು ಉದ್ಯಮ ಕೈ ಕಚ್ಚಿದರೂ ಇನ್ನೊಂದು ಕೈಹಿಡಿಯುತ್ತದೆ’ ಸಾವಿತ್ರಿಯವರ ಅನುಭವದ ಮಾತಿದು. ಇವರಿಗೆ ಪತಿ ಸೋಮಪ್ಪ ಕೊಡ್ಲಿಯವರ ಬೆಂಬಲವಿದೆ. ಮಗಳು-ಅಳಿಯ ಕೂಡ ಜೊತೆಗಿದ್ದು ಅಗರಬತ್ತಿ ಉದ್ಯಮ ನೋಡಿಕೊಳ್ಳುತ್ತಿದ್ದಾರೆ. ಹಳ್ಳಿಗಾಡಿನ ಮಹಿಳೆಯರು ಬೂದಿ ಮುಚ್ಚಿದ ಕೆಂಡದಂತೆ. ಮುಚ್ಚಿದ ಬೂದಿಯ ಸರಿಸಿದರೆ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಛಲ, ಶ್ರಮ ಮತ್ತು ಬುದ್ಧಿವಂತಿಕೆಯ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಸಾವಿತ್ರಿ ಸಾಕ್ಷಿ.
ಬೀಜ ಸಂರಕ್ಷಣೆಯಲ್ಲೂ ಮುಂದು :
ಬೀಜ ಸಂರಕ್ಷಣೆಯಲ್ಲೂ ಸಾವಿತ್ರಿಯವರು ಮುಂದು. ಸಿರಿಧಾನ್ಯ ಮೂಲದಅಕ್ಕಡಿ ಬೆಳೆಗಳ ಕೃಷಿಯನ್ನು ಮಹಿಳಾ ಸಂಘದ ಮೂಲಕ ಜನಪ್ರಿಯಗೊಳಿಸುತ್ತಿದ್ದಾರೆ. ಮರೆಯಾಗಿದ್ದ ರಾಗಿ, ನವಣೆ, ಬರಗು ಮತ್ತೆ ಮುನ್ನಲೆಗೆ ಬಂದಿವೆ. ಕೈತೋಟಗಳ ಮೂಲಕ ಮಹಿಳಾ ಸಂಘದ ಸದಸ್ಯರುಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಲು ಉತ್ತೇಜಿಸಲಾಗುತ್ತಿದೆ.ಮಳೆಯಾಶ್ರಿತ ಜಮೀನಿಗೆ ಸೂಕ್ತವಾಗಬಲ್ಲ “ಘನ ಜೀವಾಮೃತ’ ವಿಧಾನವನ್ನುಗ್ರಾಮಸ್ಥರು ಅಳವಡಿಸಿಕೊಂಡಿದ್ದಾರೆ. ಆದಾಯ ಉತ್ಪನ್ನ ಕಾರ್ಯಕ್ರಮಗಳನ್ನು ಮಹಿಳಾ ಸಂಘದ ಸದಸ್ಯರಿಗೆ ಪರಿಚಯಿಸಿದ ಹೆಮ್ಮೆ ಸಾವಿತ್ರಿಯರದು.
ಚಿತ್ರ-ಲೇಖನ: ಜಿ. ಕೃಷ್ಣ ಪ್ರಸಾದ್