Advertisement
ಇಲ್ಲಿನ ಸೋಮಸಂದ್ರಪಾಳ್ಯದ ಎನ್.ಡಿ.ಸಫಲ್ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಇಂಥದ್ದೊಂದು ದುರಂತಕ್ಕೆ ಸಾಕ್ಷಿಯಾದರು. ಮ್ಯಾನ್‌ಹೋಲ್‌ಗೆ ಇಳಿದಿದ್ದ ಸರ್ಜಾಪುರ ಮುಖ್ಯರಸ್ತೆಯ ಕೈಗೊಂಡನಹಳ್ಳಿ ನಿವಾಸಿ ನಾರಾಯಣಸ್ವಾಮಿ (40), ಸೋಮಸಂದ್ರಪಾಳ್ಯದ ಶ್ರೀನಿವಾಸ್ (38) ಹಾಗೂ ಮಹದೇವಗೌಡ (37) ಸಾವಿಗೀಡಾದ ದುರ್ದೈವಿಗಳು.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಸುಮಾರು 15 ಅಡಿ ಆಳ ಇರುವ ಎಸ್‌ಟಿಪಿ ಘಟಕಕ್ಕೆ ಏಣಿ ಮೂಲಕ ಇಳಿದಿದ್ದಾರೆ. ಈ ವೇಳೆ ಏಣಿಯಿಂದ ಜಾರಿ, ನಾರಾಯಣಸ್ವಾಮಿ ಗುಂಡಿಯೊಳಗೆ ಬಿದ್ದಿದ್ದಾರೆ. ಇದನ್ನು ಕಂಡ ಶ್ರೀನಿವಾಸ್ ಮತ್ತು ಮಹದೇವಗೌಡ ತಮ್ಮ ಕೈ ಚಾಚಿ ಮೇಲಕ್ಕೆತ್ತಲು ಯತ್ನಿಸಿದ್ದಾರೆ. ಗುಂಡಿಯಲ್ಲಿ ತುಂಬಿದ್ದ ಮಲದಲ್ಲಿ ಹೂತು ಹೋಗಿದ್ದರಿಂದ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಕಂಗಾಲಾದ ನಾರಾಯಣಸ್ವಾಮಿ ಏಕಾಏಕಿ ಶ್ರೀನಿವಾಸ ಅವರ ಕೈಯನ್ನು ಬಲವಾಗಿ ಹಿಡಿದು ಎಳೆದಿದ್ದಾರೆ. ಶ್ರೀನಿವಾಸ್ ಕೂಡ ಗುಂಡಿಯೊಳಗೆ ಬಿದ್ದರು. ಇದರಿಂದ ಗಾಬರಿಯಾದ ಮಹದೇವ ಗೌಡ ಅವರಿಬ್ಬರ ರಕ್ಷಣೆಗೆ ಕೆಳಕ್ಕೆ ಇಳಿದಿದ್ದಾರೆ. ಮೂವರೂ ವಿಷಾನಿಲದಿಂದ ಉಸಿರಾಡಲು ಮೂವರಿಗೂ ಸಾಧ್ಯವಾಗಲಿಲ್ಲ.
Related Articles
Advertisement
ಮೂವರು ವೃತ್ತಿಪರರಲ್ಲ!ಕೋಲಾರ ಮೂಲದ ನಾರಾಯಣಸ್ವಾಮಿ ಎಲೆಕ್ಟ್ರಿಷಿಯನ್ ಆಗಿದ್ದು, ಸಣ್ಣ-ಪುಟ್ಟ ಸ್ವಚ್ಛತಾ ಕಾರ್ಯದ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಸರ್ಜಾಪುರ ಮುಖ್ಯರಸ್ತೆಯ ಕೈಗೊಂಡನಹಳ್ಳಿಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರಿನ ಮಹದೇವ ಗೌಡ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶ್ರೀನಿವಾಸ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಗಾರ್ಡನ್ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಈ ಇಬ್ಬರು ಸೋಮಸಂದ್ರಪಾಳ್ಯದಲ್ಲಿ ನೆಲೆಸಿದ್ದಾರೆ. ಆದರೆ, ಮೂವರೂ ವೃತ್ತಿಪರ ಪೌರಕಾರ್ಮಿಕರಲ್ಲ. ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದವರಿಗೆ ಅಪಾರ್ಟ್‌ಮೆಂಟ್‌ನ ನಿರ್ವಾಹಣಾಧಿಕಾರಿ ಒಂದಿಷ್ಟು ಹಣದ ಆಮಿಷವೊಡ್ಡಿ ಘಟಕ ಶುಚಿಗೊಳಿಸಲು ಸೂಚಿಸಿದ್ದಾರೆ. ಭಾನುವಾರವಾಗಿದ್ದರಿಂದ ರಜಾದಿನ ಬೇರೆ ಕೆಲಸ ಇಲ್ಲದ್ದರಿಂದ ಸಿಗುವ ಅಲ್ಪ ಮೊತ್ತಕ್ಕೆ ಆಸೆ ಪಟ್ಟು ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಹಾಪೌರರಾದ ಸಂಪತ್‌ರಾಜ್, ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಡಾ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲಿಸಿದರು. ಘಟನೆಯ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಆ ಬಳಿಕ ಎನ್‌ಡಿ ಸಫಲ್ ಅಪಾರ್ಟ್‌ಮೆಂಟ್ ಅಸೋಸಿಯೇಶನ್ ಸದಸ್ಯರು ಹಾಗೂ ನಿರ್ಲಕ್ಷ್ಯದ ಆರೋಪದಡಿ ಗುತ್ತಿಗೆ ಪಡೆದವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ.
– ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಉದಯವಾಣಿ ಕಳಕಳಿ
ಮ್ಯಾನ್‌ಹೋಲ್, ಎಸ್‌ಟಿಪಿಗಳನ್ನು ಸ್ವಚ್ಛಗೊಳಿಸಲು ಜಿಲ್ಲಾಡಳಿತ ಪರವಾನಗಿ ಅಗತ್ಯ. ಅಷ್ಟೇ ಅಲ್ಲ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ. ಆದರೆ ಈ ಘಟನೆಯಲ್ಲಿ ಈ ಎಲ್ಲ ನಿಯಮಗಳನ್ನು ಉಲ್ಲಂ ಸಲಾಗಿತ್ತು. ಇಂಥದ್ದೇ ಪ್ರಕರಣ ನಿಮ್ಮೂರಲ್ಲೂ ನಡೆದೀತು. ಈ ನಿಟ್ಟಿನಲ್ಲಿ ಮುನ್ನಚ್ಚರಿಕೆ ವಹಿಸಲು ಮರೆಯಬೇಡಿ. ಮತ್ತೂಂದು ಪ್ರಾಣ ಪಕ್ಷಿ ದುರಂತ ಸಾವಿಗೆ ಕಾರಣವಾಗದಿರಲಿ.