Advertisement

ಕಾಗಕ್ಕ- ಗುಬ್ಬಕ್ಕ ಕತೆ

03:45 AM Mar 23, 2017 | Harsha Rao |

ಒಂದೂರಲ್ಲಿ ಕಾಗಕ್ಕ ಗುಬ್ಬಕ್ಕ ಇದ್ದರು. ಇಬ್ಬರೂ ಜೀವದ ಗೆಳೆಯರು. ತಿಂಡಿಯನ್ನು ಹಂಚಿಕೊಂಡೇ ತಿನ್ನುತ್ತಿದ್ದರು. ಬಿಡುವಿನ ವೇಳೆಯಲ್ಲಿ ಹತ್ತಿರದ ಮಾವಿನ ಮರದ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ಒಮ್ಮೆ ಇಬ್ಬರೂ ವಾಯು ವಿಹಾರಕ್ಕೆ ತೆರಳಿದ್ದರು. ಅಷ್ಟರಲ್ಲಿ ಜೋರು ಮಳೆ ಮಳೆ ಸುರಿಯಿತು. ಇಬ್ಬರಿಗೂ ಆತಂಕ ಉಂಟಾಯಿತು. ಕೂಡಲೆ ಗೂಡಿಗೆ ಹಾರಿ ಬಂದು ನೋಡಿದರೆ ಗುಬ್ಬಚ್ಚಿ ಗೂಡು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. “ಕೆಲ ದಿನಗಳ ಕಾಲ ನಿನ್ನ ಗೂಡಲ್ಲಿ ಉಳಿಯುವುದಕ್ಕೆ ಅವಕಾಶ ಮಾಡಿಕೊಡು’ ಎಂದು ಗುಬ್ಬಚ್ಚಿ ಕೇಳಿಕೊಂಡಿತು. ಆದರೆ ಕಾಗೆ ತನ್ನ ಗೂಡಲ್ಲಿ ತನಗೇ ಜಾಗವಿಲ್ಲ ದಯವಿಟ್ಟು ಕ್ಷಮಿಸು ಎಂದು ಕೈತೊಳೆದುಕೊಂಡುಬಿಟ್ಟಿತು. ಗುಬ್ಬಚ್ಚಿಗೆ ಬೇಜಾರಾದರೂ ಸುಮ್ಮನಾಯಿತು. 

Advertisement

ಎರಡು ದಿನಗಳ ಕಾಲ ಮಳೆಗಾಳಿಯಲ್ಲಿ ನೆನೆದು ಹೇಗೋ ಕಷ್ಟಪಟ್ಟು ಗೂಡೊಂದನು ಕಟ್ಟಿಕೊಂಡಿತು ಗುಬ್ಬಚ್ಚಿ. ಈ ಘಟನೆಯ ನಂತರವೂ ಕಾಗೆಯೊಡನೆ ಒಡನಾಡುವುದನ್ನು ಗುಬ್ಬಚ್ಚಿ ನಿಲ್ಲಿಸಲಿಲ್ಲ. ಒಂದು ದಿನ ಮನುಷ್ಯರು ನಗರವನ್ನು ವಿಸ್ತರಿಸುವ ಸಂದರ್ಭ ನಗರದಲ್ಲಿದ್ದ ಮರಗಳನ್ನು ಉರುಳಿಸುತ್ತಾ ಬಂದರು. ಆಗ ಕಾಗೆಯ ಮನೆಯಿದ್ದ ಮರವೂ ನೆಲಕ್ಕುರುಳಿತು. ಕಾಗೆಗೆ ಸೂರಿಲ್ಲದಂತಾಯಿತು. ಅದಕ್ಕೀಗ ಗುಬ್ಬಚ್ಚಿಯ ಬಳಿ ಸಹಾಯ ಕೇಳಲು ನಾಚಿಕೆಯಾಯಿತು. ಆ ಸಮಯದಲ್ಲಿ ಗುಬ್ಬಚ್ಚಿ ತಾನಾಗಿಯೇ ಕಾಗೆಗೆ ಸಹಾಯಹಸ್ತವನ್ನು ಚಾಚಿತು. “ಹೊಸ ಗೂಡು ಕಟ್ಟಿಕೊಳ್ಳುವವರೆಗೆ ತನ್ನ ಮನೆಯಲ್ಲಿ ಆರಾಮಾಗಿರಬಹುದು’ ಎಂದು ಅಭಯ ನೀಡಿತು.

– ವೀಣಾ

Advertisement

Udayavani is now on Telegram. Click here to join our channel and stay updated with the latest news.

Next