Advertisement

ಪುಷ್ಕರ್‌ ಬ್ಯಾನರ್‌ನಲ್ಲಿ ಸೆನ್ನಾ ಹೆಗ್ಡೆ ಕಥೆ

01:14 PM Jul 01, 2019 | Team Udayavani |

ಕಳೆದ ವರ್ಷ ನಟ ದಿಗಂತ್‌, ಪೂಜಾ ದೇವಾರಿಯ ಅಭಿನಯದಲ್ಲಿ ತೆರೆಕಂಡ ‘ಕಥೆಯೊಂದು ಶುರುವಾಗಿದೆ’ ಚಿತ್ರ ನಿಮಗೆ ನೆನಪಿರಬಹುದು. ಸೆನ್ನಾ ಹೆಗ್ಡೆ ಎನ್ನುವ ನವ ನಿರ್ದೇಶಕನ ಕೈಯಲ್ಲಿ ಮೂಡಿಬಂದ ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ನಿರ್ಮಿಸಿದ್ದರು

Advertisement

ಚಿತ್ರ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರಲ್ಲೂ ಚಿತ್ರದ ನಿರೂಪಣೆ, ಮೇಕಿಂಗ್‌ ಸಾಕಷ್ಟು ಗಮನ ಸೆಳೆದಿತ್ತು. ಈಗ ಇದೇ ನಿರ್ದೇಶಕ ಸೆನ್ನಾ ಹೆಗ್ಡೆ ಮತ್ತು ನಿರ್ಮಾಪಕ ಪುಷ್ಕರ್‌ ಹೊಸ ಚಿತ್ರವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ.

ಹೌದು, ಈಗಾಗಲೇ ಈ ಹೊಸಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಶುರುವಾಗಿದ್ದು, ನಿರ್ಮಾಪಕ ಪುಷ್ಕರ್‌ ಮತ್ತು ನಿರ್ದೇಶಕ ಸೆನ್ನಾ ಹೆಗ್ಡೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಸದ್ಯ ಚಿತ್ರದ ಟೈಟಲ್‌, ಕಥಾಹಂದರ, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. “ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ, ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇದು ಕೂಡ ಒಳ್ಳೆಯ ಪ್ರಾಜೆಕ್ಟ್ ಆಗುವ ವಿಶ್ವಾಸವಿದೆ’ ಎನ್ನುವುದು ಪುಷ್ಕರ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next