Advertisement

ಶಿಸ್ತಿಗೆ ಹೆಸರಾದವರು ನರಭಕ್ಷಣೆಗಿಳಿದರು

12:30 AM Feb 07, 2019 | |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ

Advertisement

ಪ್ರಾಚೀನ ಕಾಲದಲ್ಲಿ, ಜಗತನ್ನು ಅನ್ವೇಷಿಸುವ ಗೀಳಿಗೆ ಬಿದ್ದ ಇಂಗ್ಲೆಂಡ್‌ ದೇಶ ದೂರದ ದೇಶಗಳಿಗೆಗಳಿಗೆ ಸೈನಿಕರು, ನೌಕಾಯಾನಿಗಳ ಗುಂಪುಗಳನ್ನು ಕಳಿಸಲು ಶುರು ಮಾಡಿದ್ದ ದಿನಗಳವು. ಸಮುದ್ರ ಮಾರ್ಗ ಕಂಡುಹಿಡಿಯುವ ವಿಚಾರದಲ್ಲಿ ನೆರೆಹೊರೆಯ ದೇಶಗಳ ನಡುವೆ ಯಾರು ಮೊದಲು ಕಂಡು ಹಿಡಿಯುವರೋ ಎಂಬ ಸ್ಪರ್ಧೆಯೂ ಏರ್ಪಟ್ಟಿತ್ತು. ರಾಜಮನೆತನದವರಿಗೆ ಇದು ಪ್ರತಿಷ್ಟೆಯ ವಿಷಯವೂ ಆಗಿತ್ತು. 18ನೇ ಶತಮಾನದ ಮಧ್ಯಭಾಗದಲ್ಲಿ ಇದುವರೆಗೂ ಯಾರೂ ಪ್ರಯಾಣಿಸದಿದ್ದ  ಉತ್ತರ ಧೃವಪ್ರದೇಶದ(ಆರ್ಕ್‌ಟಿಕ್‌) ಒಂದು ಪ್ರದೇಶದತ್ತ ತನ್ನ ಸೈನ್ಯವನ್ನು ಕಳಿಸಲು ಇಂಗ್ಲೆಂಡ್‌ ದೇಶ ನಿರ್ಧರಿಸಿತು. ಒಂದು ವೇಳೆ ಆ ಯಾನವೇನಾದರೂ ಯಶಸ್ವಿಯಾದರೆ ಇಂಗ್ಲೆಂಡ್‌ಗೆ ತುಂಬಾ ಲಾಭವಾಗುವುದಿತ್ತು. ಎರಡು ಹಡಗುಗಳು ಮತ್ತು 129 ಮಂದಿ ಸೈನಿಕರನ್ನು ಈ ಯಾನಕ್ಕೆ ನಿಯೋಜಿಸಲಾಯಿತು. ಆ ಕಾಲದಲ್ಲಿ ಇಂಗ್ಲೆಂಡ್‌ನ‌ಲ್ಲಿಯೇ ಹೆಸರುಮಾಡಿದ್ದ ನೌಕಾಯಾನ ಪರಿಣತರು, ವಿಜ್ಞಾನಿಗಳು, ಸಸ್ಯಶಾಸ್ತ್ರಜ್ಞರು ಮತ್ತು ಸಮರ್ಥ ತಂತ್ರಜ್ಞರನ್ನು ಆ ತಂಡ ಒಳಗೊಂಡಿತ್ತು. ಸೇನಾಧಿಕಾರಿ ಜೋಸೆಫ್ ಫ್ರಾಂಕ್ಲಿನ್‌ ಮುಂದಾಳತ್ವದಲ್ಲಿ ಯಾನ ಹೊರಟಿತು. ವರ್ಷಗಳುರುಳಿದವು. 129 ಮಂದಿ ಸೈನಿಕರ ಸುಳಿವೇ ಸಿಗಲಿಲ್ಲ. ಹಡಗುಗಳು ಏನಾದುವು ಎಂಬುದೂ ಪತ್ತೆಯಾಗಲಿಲ್ಲ. 11 ವರ್ಷಗಳ ಕಾಲ ಅದರ ಹುಡುಕಾಟಕ್ಕೆ ಸೇನೆ ನಡೆಸಿದ ಪ್ರಯತ್ನಗಳೊಂದೂ ಫ‌ಲ ನೀಡಲಿಲ್ಲ. ಸಮುದ್ರದಲ್ಲಿ ನಿಗೂಢವಾಗಿ ಮಾಯವಾದ ಎರಡು ಹಡಗುಗಳ ಬಗ್ಗೆ ಅನೇಕ ಕಥೆಗಳು, ಪುಕಾರುಗಳು ಹುಟ್ಟಿಕೊಂಡವು. ತಂತ್ರಜ್ಞಾನ ಬೆಳೆದಂತೆ ಈ ಆರ್ಕ್‌ಟಿಕ್‌ ಯಾನದ ಕುರಿತ ಕುತೂಹಲವೂ ದುಪ್ಪಟ್ಟಾಗುತ್ತಾ ಬಂದಿತು. ಹೀಗಾಗಿ ಹುಡುಕಾಟ ನಿಂತಿರಲಿಲ್ಲ. ಅದರ ಫ‌ಲವಾಗಿ ಒಂದೊಂದೇ ಮಾಹಿತಿಗಳು ಹೊರಬೀಳತೊಡಗಿದವು. ಅದನ್ನು ಕೇಳಿ ಇಂಗ್ಲೀಷರು ಹೌಹಾರಿದರು! ಇಂಗ್ಲೆಂಡಿನಿಂದ ಹೊರಟ ಎರಡು ಹಡಗುಗಳು ಉತ್ತರ ಧೃವಪ್ರದೇಶದ ಚಳಿಯ ಹೊಡೆತಕ್ಕೆ ಸಿಕ್ಕು ಮಂಜುಗಡ್ಡೆಯಲ್ಲಿ ಸಿಕ್ಕಿಕೊಂಡಿದ್ದವು. ಕಣ್ಣು ಕಾಣುವಷ್ಟು ದೂರದವರೆಗೂ ಮಂಜುಗಡ್ಡೆ, ಶೀತಮಾರುತ. ಮಂಜುಗಡ್ಡೆ ಕರಗಿದಾಗ ಮತ್ತೆ ಪ್ರಯಾಣ ಮುಂದವರಿಸಬಹುದೆಂಬುದು ಅದಿಕಾರಿಗಳ ಲೆಕ್ಕಾಚಾರವಾಗಿತ್ತು. ಆದರೆ ಅದಕ್ಕೂ ಮೊದಲೇ ಆಹಾರದ ದಾಸ್ತಾನು ಖಾಲಿಯಾಗುತ್ತಾ ಬಂದಿತು. ಅದರ ಜೊತೆಗೇ ಬದುಕುವ ಭರವಸೆಯೂ ಕ್ಷೀಣಿಸುತ್ತಾ ಬಂದಿತು. ಕಡೆ ಕಡೆಗೆ ಯಾವ ದುರ್ಗತಿ ಒದಗಿತೆಂದರೆ ಅಲ್ಲಿ ಸಿಲುಕಿಕೊಂಡ ಸೈನಿಕರು ನರಭಕ್ಷಣೆಗೂ ಇಳಿದಿದ್ದರು. ಈ ಸಂಗತಿ ಹೊರಬರುತ್ತಿದ್ದಂತೆ, ಜಗತ್ತಿನಲ್ಲೇ ಶಿಸ್ತಿಗೆ ಹೆಸರಾದ ಇಂಗ್ಲೀಷರು ಹೌಹಾರಿದ್ದರು. ಯಾನದಲ್ಲಿ ಭಾಗಿಯಾದ 129ರಲ್ಲಿ ಅಷ್ಟೂ ಮಂದಿ ಹೇಳಹೆಸರಿಲ್ಲದಂತೆ ಸತ್ತುಹೋದರು. ಮಹತ್ವಾಕಾಂಕ್ಷಿ ಸಮುದ್ರಯಾನವೊಂದು ಈ ರೀತಿಯಾಗಿ ದುರಂತ ಅಂತ್ಯ ಕಂಡಿತು. 

ಹವನ

Advertisement

Udayavani is now on Telegram. Click here to join our channel and stay updated with the latest news.

Next