Advertisement
ಎಲ್ಲೆಲ್ಲಿ ಮರಗಳು ಧರೆಗೆ?: ಗಂಟೆಗೆ 35-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ 40ಕ್ಕೂ ಅಧಿಕ ಮರಗಳು ಧರೆಗುರುಳಿರುವುದು ವರದಿಯಾಗಿದೆ. ನಗರದ ಬಿಟಿಎಂ ಬಡಾವಣೆಯಲ್ಲಿ 4 ಮರ, ರಾಜಾಜಿ ನಗರ, ವಿಲ್ಸನ್ ಗಾರ್ಡನ್, ಶೇಷಾದ್ರಿಪುರದಲ್ಲಿ ತಲಾ 1 ಮರ, ಮಹಾಲಕ್ಷಿ ಲೇಔಟ್‌ನಲ್ಲಿ 4 ಮರ, ಮರದ ರೆಂಬೆ, ಕೊಂಬೆ, ನಾಗಪುರ, ಇಬ್ಬಲೂರು, ಆಡುಗೋಡಿ, ಕೋರ ಮಂಗಲ, ಮಡಿವಾಳ, ಆರ್‌ಟಿ ನಗರ, ಜೆ.ಪಿ.ನಗರದಲ್ಲಿ 3 ಮರ, ರಾಗೀಗುಡ್ಡ, ಬಸವನಗುಡಿ, ಜಯನಗರ 4ನೇ ಬ್ಲಾಕ್‌ನಲ್ಲಿ 6 ಮರ, ಶೇಷಾದ್ರಿಪುರ ಇಸ್ಕಾನ್ ದೇವಸ್ಥಾನದ ಹಿಂಭಾಗ, ಬಸವನಗುಡಿ, ಹಲವು ಭಾಗದಲ್ಲಿ ಮರದ ರೆಂಬೆ, ಕೊಂಬೆಗಳು ಬಿದ್ದ ಬಗ್ಗೆ ದೂರು ದಾಖಲಾಗಿವೆ. ಕೆಲವೆಡೆ ಈ ಮರಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದಿದ್ದರಿಂದ ಜಯನಗರ, ಕೆ.ಆರ್.ಪುರ, ರಾಜಾಜಿನಗರ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ 2-3 ತಾಸು ವಿದ್ಯುತ್ ಕೈಕೊಟ್ಟಿತು.
Related Articles
Advertisement
ಎಲ್ಲೆಲ್ಲಿ ಎಷ್ಟು ಮಳೆ?: ಸಾರಕ್ಕಿ 40 ಮಿ.ಮೀ., ಕೆಂಗೇರಿ 20.5, ಆರ್‌ಹೆಮ್ಮಿಗೆಪುರ 33, ಗೋಣಿಪುರ 20.5, ಆರ್.ಆರ್.ನಗರ 18.5, ನಾಯಂಡಹಳ್ಳಿ 21.5, ಬಿಟಿಎಂ ಲೇಔಟ್ 35.5, ವಿಶ್ವೇಶ್ವರಪುರ 48, ವಿದ್ಯಾಪೀಠ 41, ಪಟ್ಟಾಭಿರಾಮನಗರ 41, ಕುಮಾರಸ್ವಾಮಿ ಲೇಔಟ್31.5, ಬಸವನಗುಡಿ 37.5, ಉತ್ತರಹಳ್ಳಿ 20.5, ಕೋಣನಕುಂಟೆ 37.5, ಪುಲಿಕೇಶಿನಗರ 10.5, ಆವಲಹಳ್ಳಿ 27, ಪುಲಿಕೇಶಿನಗರ 10.5, ಕುಶಾಲನಗರ 7.5, ಸಂಪಂಗಿ ರಾಮನಗರ 7, ಬಸವನಪುರ 12, ಬೆಳ್ಳಂದೂರು 16, ಅತ್ತಿಬೆಲೆ 9.5, ಬಸವನಹಳ್ಳಿ 10, ವಿದ್ಯಾರಣ್ಯಪುರ 26, ಮಾದವಾರ 12.5, ಚಿಕ್ಕಬಿದರಕಲ್ಲು 12, ದೊಡ್ಡಬೊಮ್ಮಸಂದ್ರ 20, ಜಕ್ಕೂರು 22, ಬಸವೇಶ್ವರನಗರ 29, ಪೀಣ್ಯ ಕೈಗಾರಿಕಾ ಪ್ರದೇಶ 16.5, ದಾಸರಹಳ್ಳಿ 16, ಹೆಗ್ಗನಹಳ್ಳಿ 15, ಶೆಟ್ಟಿಹಳ್ಳಿ 19.5, ನಾಗವಾರ 26.5, ಕಾಟನ್‌ಪೇಟೆ 32.5, ದೊಡ್ಡಬಿದರಕಲ್ಲು 19, ನಂದಿನಿ ಲೇಔಟ್ 23, ಹಂಪಿನಗರ 22, ಚಾಮರಾಜಪೇಟೆ 38, ಮಾರಪ್ಪನಪಾಳ್ಯ 13, ದೊರೆಸಾನಿಪಾಳ್ಯ 27.5, ಎಚ್.ಗೊಲ್ಲಹಳ್ಳಿ 17, ಬೊಮ್ಮನಹಳ್ಳಿ 24, ಕೋರಮಂಗಲ 31.5, ಅರಕೆರೆ 15, ಮಾಚೋಹಳ್ಳಿ 28.5 ಹಾಗೂ ಎಚ್‌ಎಸ್ ಆರ್ ಲೇಔಟ್‌ನಲ್ಲಿ 18.5 ಮಿ.ಮೀ. ಮಳೆ ಆಗಿದೆ.