Advertisement

ಸರ್ಫರಾಜ್ ಖಾನ್ ಇನ್ನು ರಣಜಿ ಆಡುವುದು ನಿಲ್ಲಿಸಲಿ…: ಸುನಿಲ್ ಗಾವಸ್ಕರ್ ಕಿಡಿ ನುಡಿ

05:07 PM Jun 24, 2023 | Team Udayavani |

ಮುಂಬೈ: ವೆಸ್ಟ್ ಇಂಡೀಸ್ ಸರಣಿಗೆ ಭಾರತ ಟೆಸ್ಟ್ ತಂಡದ ಆಯ್ಕೆ ನಡೆದ ಬಳಿಕ ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟು ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ನಿರ್ಧಾರವು ಸಾಕಷ್ಟು ಟೀಕೆಗಳನ್ನು ಎದುರಿಸಿದೆ.

Advertisement

ಆಯ್ಕೆಗಾರರ ನಿರ್ಧಾರದಿಂದ ಸಂತುಷ್ಟರಾಗದವರಲ್ಲಿ ಭಾರತದ ಶ್ರೇಷ್ಠ ಆಟಗಾರ ಸುನಿಲ್ ಗಾವಸ್ಕರ್ ಕೂಡ ಒಬ್ಬರು. ಕಟುವಾದ ಟೀಕೆ ಮಾಡಿರುವ ಗಾವಸ್ಕರ್ ಅವರು ಸರ್ಫರಾಜ್ ಖಾನ್ ಅವರ ದೇಶೀಯ ಪ್ರದರ್ಶನಗಳನ್ನು ಕಡೆಗಣಿಸಿದ್ದಕ್ಕಾಗಿ ಆಯ್ಕೆ ಸಮಿತಿಯನ್ನು ಟೀಕಿಸಿದರು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಆಡುವುದನ್ನು ನಿಲ್ಲಿಸಲು ಬ್ಯಾಟರ್ ಗೆ ಸಲಹೆ ನೀಡಿದರು.

2022-23ರ ಋತುವಿನಲ್ಲಿ ಮೂರು ಶತಕಗಳನ್ನು ಒಳಗೊಂಡಂತೆ 92.66 ಸರಾಸರಿಯಲ್ಲಿ ಆರು ಪಂದ್ಯಗಳಲ್ಲಿ 556 ರನ್‌ಗಳನ್ನು ಗಳಿಸಿದ ಸರ್ಫರಾಜ್ ರಣಜಿ ಟ್ರೋಫಿಯಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಬಲಗೈ ಬ್ಯಾಟರ್ 2021-22 ರ ರಣಜಿ ಟ್ರೋಫಿ ಅಭಿಯಾನದಲ್ಲಿ 122.75 ಸರಾಸರಿಯಲ್ಲಿ 982 ರನ್ ಗಳಿಸಿದರು, ಇದರಲ್ಲಿ ನಾಲ್ಕು ಶತಕಗಳು ಸೇರಿವೆ.

ಸರ್ಫರಾಜ್ ಖಾನ್ ಅವರು ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲು ಇನ್ನೇನು ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಎಂದು ಸುನಿಲ್ ಗಾವಸ್ಕರ್ ಹೇಳಿದರು.

ಸರ್ಫರಾಜ್ ಖಾನ್ ಕಳೆದ ಮೂರು ಸೀಸನ್‌ಗಳಲ್ಲಿ ಸರಾಸರಿ 100 ರನ್ ಗಳಿಸಿದ್ದಾರೆ. ತಂಡಕ್ಕೆ ಆಯ್ಕೆಯಾಗಲು ಏನು ಮಾಡಬೇಕು? ಅವರು ಆಡುವ 11 ನಲ್ಲಿ ಇಲ್ಲದಿರಬಹುದು, ಆದರೆ ನೀವು ಅವರನ್ನು ತಂಡದಲ್ಲಿ ಆಯ್ಕೆ ಮಾಡಿ. ಅವರ ಪ್ರದರ್ಶನವನ್ನು ಗುರುತಿಸಲಾಗುತ್ತಿದೆ ಎಂದು ಹೇಳಿ. ಇಲ್ಲದಿದ್ದರೆ, ರಣಜಿ ಟ್ರೋಫಿ ಆಡುವುದನ್ನು ನಿಲ್ಲಿಸಲು ಹೇಳೀ. ಆಡಿ ಯಾವುದೇ ಪ್ರಯೋಜನವಿಲ್ಲ ಎಂದು ಗಾವಸ್ಕರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next