Advertisement

ಬೈದಾಟ ನಿಲ್ಲಿಸಿ, ಏನು ಮಾಡುತ್ತೇವೆ ಎನ್ನುವುದು ತಿಳಿಸಿ

03:15 PM Jan 29, 2018 | Team Udayavani |

ಜಗಳೂರು: ನಮ್ಮ ರಾಜಕಾರಣಿಗಳು ಯಾರೇ ಆಗಿದ್ದರೂ ಒಬ್ಬರು ಮತ್ತೂಬ್ಬರನ್ನು ತೆಗಳುವುದನ್ನು ಬಿಟ್ಟು ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಏನು ಮಾಡುತ್ತೇವೆ ಎಂಬುದನ್ನು ದೃಢ ಮಾತುಗಳಲ್ಲಿ ಹೇಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ
ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

Advertisement

ಜಗಳೂರು ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚುನಾವಣೆಗಳು ಇನ್ನೇನು ಹತ್ತಿರ ಬರುತ್ತಿವೆ. ಒಬ್ಬರು ಮತ್ತೂಬ್ಬರನ್ನು ಬೈಯ್ಯುವ, ಕಾಲೆಳೆಯುವ ಕೆಲಸ ನಡೆಯುತ್ತಿದೆ. ಈ ದೇಶದಲ್ಲಿ ಘೋಷಣೆಗಳು ಮಿತಿಮೀರಿವೆ. ಪ್ರಜಾಪ್ರಭುತ್ವದ ಆಶಯಗಳು ಈಡೇರಿಲ್ಲ. ಜನಪ್ರತಿನಿಧಿಗಳು ನೀಡುವ ಆಶ್ವಾಸನೆ, ಭರವಸೆಗಳೆಲ್ಲ ಸುಳ್ಳಾಗದೆ ಅವುಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ನಮ್ಮ ಪುರಾತನರು ವಿಚ್ಛಿದ್ರಕಾರಿ ನೀತಿಯನ್ನು ಬೋಧಿಸಿಲ್ಲ. ಸಂವಿಧಾನವನ್ನು ರೂಪಿಸಿದ ಡಾ| ಅಂಬೇಡ್ಕರ್‌ ಸಹ ಧರ್ಮ
ನಿರಪೇಕ್ಷತೆಯನ್ನೇ ಬೋಧಿಸಿದ್ದಾರೆ. ಎಲ್ಲರನ್ನೂ ಸಮಾನವಾಗಿ ನೋಡುವುದೇ ಧರ್ಮ ನಿರಪೇಕ್ಷತೆ ಎಂಬುದಾಗಿ ಅವರು
ಹೇಳಿದ್ದಾರೆ. ಬಸವಣ್ಣನವರು ಹೇಳಿದ ಮಾತುಗಳು ಸಂವಿಧಾನದ ಭಾಗವಾಗಿವೆ. ಸಂವಿಧಾನ ಹೇಳಿರುವ ಆಶಯದ
ಮಾತುಗಳೆಲ್ಲವೂ ಬಸವಣ್ಣನವರ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿವೆ ಎಂದು ತಿಳಿಸಿದರು. ದಾವಣಗೆರೆಯ ನಮ್ಮ ಅನುಭವ ಮಂಟಪ
ಶಾಲೆಯಲ್ಲಿ ನರ್ಸರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಇಂದು ಅಮೆರಿಕಾ ದೇಶದಲ್ಲಿ ಬಹು ದೊಡ್ಡ ಹೆಸರು ಮಾಡಿರುವ ಪರಿಗೆ ನಾವು ಬೆಕ್ಕಸ ಬೆರಗಾಗಿದ್ದೇವೆ. ಹುಣ್ಣಿಮೆ ಮಹೋತ್ಸವದ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಭಕ್ತರಿಗೆ ಆರೋಗ್ಯದ ತಿಳಿವಳಿಕೆ ನೀಡಿರುವ ಇಬ್ಬರು ವೈದ್ಯರ ಸಾಧನೆ ಅಪೂರ್ವವಾದುದು. ಈ ಮಕ್ಕಳ ಸಾಧನೆಯನ್ನು ನಾವು ನರ್ಸರಿ ಶಾಲೆಯಿಂದಲೂ ಗಮನಿಸಿದ್ದೇವೆ. ಬಸಂತ ಕುಮಾರ್‌ ಅಮೆರಿಕಾದಲ್ಲಿ ನೆಲೆಸಿದ್ದರು. ಪ್ರತಿಭಾವಂತರಾದ ಅವರು ತಮ್ಮ ಆಶಯದಂತೆ ಅಮೆರಿಕಾ ಬಿಟ್ಟು ಬೆಂಗಳೂರಿನಲ್ಲಿ ಬಂದು ನೆಲೆಸಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಧರ್ಮಗಳು ಜನಾಂಗ ಜನಾಂಗಗಳ ಮಧ್ಯೆ ವಿರಸಕ್ಕೆ ಕಾರಣವಾಗಿವೆ. ಒಬ್ಬ ಕಳ್ಳ ತನ್ನ ಕೈಯಲ್ಲಿರುವ ಚಾಕುವನ್ನು ದರೋಡೆಗೆ
ಬಳಸಿದರೆ ವೈದ್ಯನೊಬ್ಬ ಅದೇ ಚಾಕುವನ್ನು ಮನುಷ್ಯನ ಪ್ರಾಣ ರಕ್ಷಿಸಲು ಬಳಸುತ್ತಾನೆ ಎಂದು ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next