Advertisement

ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧ ಪತ್ತೆ

10:41 PM Jun 08, 2020 | Sriram |

ಕುಂದಾಪುರ: ತಾಲೂಕಿನ ಇಡೂರು- ಕುಂಜಾಡಿ ಸಮೀಪದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಒಳಭಾಗ ದಲ್ಲಿರುವ ಒಂದು ದೊಡ್ಡ ಪಾರೆಯಲ್ಲಿ ರವಿವಾರ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಲ್ಲಿನ ಆಯುಧಗಳು ಪತ್ತೆಯಾಗಿವೆ ಎಂದು ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ಟಿ.ಮುರುಗೇಶಿ ತಿಳಿಸಿದ್ದಾರೆ.

Advertisement

ಈ ನಿವೇಶನಕ್ಕೆ ಸಮೀಪದಲ್ಲಿಯೇ ಇರುವ ಅವಲಕ್ಕಿಪಾರೆಯಲ್ಲಿ ಆದಿ ಕಾಲದ ಕುಟ್ಟು ಚಿತ್ರಗಳು ಕಂಡುಬಂದಿವೆ. ಈ ಆಯುಧೋಪಕರಣಗಳಲ್ಲಿ ಕೊರೆಯುಳಿಗಳು, ಬ್ಲೇಡ್‌ಗಳು, ಫ್ಲೂಟೆಡ್‌ ಕೋರ್‌ಗಳು, ಹೆರೆಗತ್ತಿಗಳು ಹಾಗೂ ಬಾಣದ ಮೊನೆಗಳು ಕಂಡುಬಂದಿವೆ.

ಇವು ದ.ಕ. ಜಿಲ್ಲೆಯ ಉಪ್ಪಿನಂಗಡಿ ಮತ್ತು ಮಾಣಿಗಳಲ್ಲಿ ದೊರೆತ ಕಲ್ಲಿನ ಆಯುಧಗಳನ್ನು ಹೋಲುತ್ತವೆ. ಈ ಸಂಶೋಧನೆಯಲ್ಲಿ ಕೊಲ್ಲೂರಿನ ಮುರಳೀಧರ ಹೆಗಡೆ ಅವರು ಸಹಕರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next