ಮುಂಬೈ: ಜಾಗತಿಕ ಷೇರುಪೇಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 221 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:ಕಾರ್ಕಳ ನಲ್ಲೂರು: ಮಗುಚಿ ಬಿದ್ದ ಶಾಲಾ ಪ್ರವಾಸದ ಬಸ್; ಹಲವರಿಗೆ ಗಾಯ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 221.27 ಅಂಕ ಏರಿಕೆಯೊಂದಿಗೆ 61,062.01ರ ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 68 ಅಂಕ ಏರಿಕೆಯೊಂದಿಗೆ ವಹಿವಾಟು ನಡೆಯುತ್ತಿದೆ.
ಎನ್ ಎಸ್ ಇ ನಿಫ್ಟಿ 68.40 ಅಂಕ ಏರಿಕೆಯೊಂದಿಗೆ 18,173.70 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 277 ಅಂಕ ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು. ನಿಫ್ಟಿ ಕೂಡಾ 79 ಅಂಕ ಜಿಗಿತ ಕಂಡಿತ್ತು.
ಸ್ಟೀಲ್ ಸ್ಟ್ರಿಪ್ಸ್ 2022ನೇ ಸಾಲಿನಲ್ಲಿ ಒಟ್ಟು 334.41 ಕೋಟಿ ರೂ. ವಹಿವಾಟು ನಡೆಸಿತ್ತು. 2021ನೇ ಸಾಲಿನಲ್ಲಿ 234.54 ಕೋಟಿ ವಹಿವಾಟು ನಡೆಸಿರುವುದಾಗಿ ವರದಿ ತಿಳಿಸಿದೆ.