ಮುಂಬಯಿ: ಐಟಿ ಹಾಗೂ ಆರ್ಥಿಕ ವಲಯದ ಷೇರುಗಳ ಲಾಭಾಂಶ ಕಾಯ್ದಿರಿಸುವಿಕೆ ಹಾಗೂ ವಿದೇಶಿ ಬಂಡವಾಳದ ಹೊರಹರಿವಿನ ಪರಿಣಾಮ ಗುರುವಾರ (ಫೆ.03) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 700ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಬಲೂಚಿಸ್ತಾನ್:ಎರಡು ಸೇನಾ ನೆಲೆ ಮೇಲೆ ದಾಳಿ,ಪಾಕ್ ನ 100ಕ್ಕೂ ಅಧಿಕ ಸೈನಿಕರ ಹತ್ಯೆ: ಬಿಎಲ್ ಎ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 770.31 ಅಂಕಗಳಷ್ಟು ಇಳಿಕೆಯಾಗಿದ್ದು, 58,788.02 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 219.80 ಅಂಕಗಳಷ್ಟು ಕುಸಿತಗೊಂಡಿದ್ದು, 17,560.20 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಎಚ್ ಡಿಎಫ್ ಸಿ, ಇನ್ಪೋಸಿಸ್, ಎಲ್ ಆ್ಯಂಡ್ ಟಿ, ಕೋಟಕ್ ಬ್ಯಾಂಕ್, ಬಜಾಜ್ ಫಿನ್ ಸರ್ವ್ ಮತ್ತು ಟೆಕ್ ಮಹೀಂದ್ರ ಷೇರುಗಳು ಶೇ.3ಕ್ಕಿಂತ ಅಧಿಕ ನಷ್ಟ ಕಂಡಿದೆ. ಮತ್ತೊಂದೆಡೆ ಐಟಿಸಿ, ಮಾರುತಿ, ಟೈಟಾನ್, ಎಸ್ ಬಿಐ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಲಾಭಗಳಿಸಿದೆ.
ಟೋಕಿಯೊ ಷೇರುಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದ್ದು, ಸಿಯೋಲ್ ಷೇರುಪೇಟೆ ಸೆನ್ಸೆಕ್ಸ್ ಜಿಗಿತ ಕಂಡಿದೆ. ಚಾಂದ್ರಮಾನ ಹೊಸ ವರ್ಷದ ಹಿನ್ನೆಲೆಯಲ್ಲಿ ಚೀನಾ, ಹಾಂಗ್ ಕಾಂಗ್ ಸೇರಿದಂತೆ ಏಷ್ಯಾದ ಹಲವಾರು ಷೇರುಪೇಟೆಗೆ ರಜೆ ಎಂದು ವರದಿ ತಿಳಿಸಿದೆ.