ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ಪರಿಣಾಮ ಸೋಮವಾರ (ಜುಲೈ 19) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಬರೋಬ್ಬರಿ 500ಕ್ಕೂ ಅಧಿಕ ಅಂಕ ಇಳಿಕೆ ಕಂಡಿದೆ.
ಇದನ್ನೂ ಓದಿ:ಅತಿ ಹೆಚ್ಚು ಸೋಂಕು ಪತ್ತೆಯಾದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ 30ನೇ ಸ್ಥಾನ..!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 515.14 ಅಂಕಗಳಷ್ಟು ಕುಸಿತ ಕಂಡಿದ್ದು, 52,624.52 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 146.75 ಅಂಕ ಇಳಿಕೆಯಾಗಿದ್ದು, 15,776.65ರ ಗಡಿಗೆ ಇಳಿದಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಟೈಟಾನ್, ಪವರ್ ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.
ಮುಂಬಯಿ ಷೇರುಪೇಟೆಯ ಹಿಂದಿನ ವಹಿವಾಟಿನಲ್ಲಿ 18.79 ಅಂಕ ಕುಸಿತ ಕಂಡಿದ್ದು, 53,140.06 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 0.80 ಅಂಕ ಇಳಿಕೆಯೊಂದಿಗೆ 15,923.40ರ ಗಡಿ ತಲುಪಿತ್ತು.