ಮುಂಬಯಿ: ಭಾರತದಲ್ಲಿ ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದು ಶುಕ್ರವಾರ(ಡಿಸೆಂಬರ್ 03) ಮುಂಬಯಿ ಷೇರುಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರುವಂತಾಗಿದ್ದು, ಸಂವೇದಿ ಸೂಚ್ಯಂಕ 765 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಮುಂಬೈ ಅಂಗಳದಲ್ಲಿ ಮಿಂಚಿದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 764.83 ಅಂಕ ಇಳಿಕೆಯಾಗಿದ್ದು, 57,696.46 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 204.95 ಅಂಕ ಕುಸಿದಿದ್ದು, 17,196.70 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಟೆಕ್ ಮಹೀಂದ್ರ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎಲ್ ಆ್ಯಂಡ್ ಟಿ, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ.
ಕೋವಿಡ್ ಸೋಂಕು ನಡುವೆಯೇ ದಿಢೀರನೆ ಒಮಿಕ್ರಾನ್ ವೈರಸ್ ಹರಡುವಿಕೆ ಭೀತಿ ಮತ್ತು ಸೋಂಕು ಪತ್ತೆಯಾಗಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದ ಪರಿಣಾಮ ಷೇರುಪೇಟೆಯ ವಹಿವಾಟಿನಲ್ಲಿ ಇಳಿಕೆಯಾಗಲು ಕಾರಣವಾಗಿರುವುದಾಗಿ ಗ್ಲೋಬಲ್ ರಿಸರ್ಚ್ ಮುಖ್ಯಸ್ಥ ಗೌರವ್ ಗರ್ಗ್ ತಿಳಿಸಿದ್ದಾರೆ.