ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಮಿಶ್ರ ವಹಿವಾಟಿನ ಪ್ರಕ್ರಿಯೆ ನಡುವೆಯೂ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ (ಏಪ್ರಿಲ್ 26) 508 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಇದನ್ನೂ ಓದಿ:ಕೋವಿಡ್ ಲಕ್ಷಣ ಇದ್ದರೂ ನೆಗೆಟಿವ್ ಬರಲು ಕಾರಣ ಏನು ಗೊತ್ತಾ?
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 508.06 ಅಂಕಗಳ ಏರಿಕೆಯೊಂದಿಗೆ 48,386.51 ಅಂಕಗಳೊಂದಿಗೆ ದಿನದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ 143.65 ಅಂಕ ಏರಿಕೆಯಾಗಿ 14,485ರ ಗಡಿ ತಲುಪಿದೆ.
ಸಂವೇದಿ ಸೂಚ್ಯಂಕ ಏರಿಕೆಯಿಂದ ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್, ಎಚ್ ಯುಎಲ್, ಎಸ್ ಬಿಐ, ಪವರ್ ಗ್ರಿಡ್, ಬಜಾಜ್ ಆಟೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ ಬ್ಯಾಂಕ್, ಮಾರುತಿ, ಸನ್ ಫಾರ್ಮಾ ಮತ್ತು ಟಿಸಿಎಸ್ ಷೇರುಗಳು ನಷ್ಟ ಅನುಭವಿಸಿದೆ. ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.