Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 150 ಅಂಕ ಏರಿಕೆ; ಟಾಟಾ ಸ್ಟೀಲ್ ಷೇರುಗಳಿಗೆ ಲಾಭ

01:15 PM Jul 27, 2021 | Team Udayavani |

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಭರ್ಜರಿ ಷೇರು ವಹಿವಾಟು ನಡೆದ ಪರಿಣಾಮ ಮಂಗಳವಾರ (ಜುಲೈ 27) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 150 ಅಂಕಗಳಷ್ಟು ಏರಿಕೆ ಕಂಡಿದೆ. ಇದರಿಂದ ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.

Advertisement

ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 155.51 ಅಂಕ ಏರಿಕೆಯಾಗಿದ್ದು, 53,007.78 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 48.15 ಅಂಕ ಏರಿಕೆಯಾಗಿದ್ದು, 15,872.60ರ ಗಡಿ ತಲುಪಿದೆ.

ಸೆನ್ಸೆಕ್ಸ್ ಏರಿಕೆಯಿಂದ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಮಾರುತಿ, ಟೈಟಾನ್ ಮತ್ತು ಎಸ್ ಬಿಐ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಆ್ಯಕ್ಸಿಸ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಎಚ್ ಸಿಎಲ್ ಟೆಕ್, ನೆಸ್ಲೆ ಇಂಡಿಯಾ ಮತ್ತು ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ.

ಸೋಮವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 123.53ಅಂಕಗಳಷ್ಟು ಕುಸಿತ ಕಂಡಿದ್ದು, 52,852.27 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 31.60 ಅಂಕ ಇಳಿಕೆಯಾಗಿದ್ದು, 15824.45ಕ್ಕೆ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next