ಮುಂಬಯಿ: ಉಕ್ರೈನ್ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೋಮವಾರ (ಫೆ.14) ಭಾರೀ ಇಳಿಕೆ ಕಂಡಿದ್ದು, ಮಂಗಳವಾರ (ಫೆ.15) 315 ಅಂಕಗಳಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ:‘ಹಿಜಾಬ್ ಪರೀಕ್ಷೆ’: ಪರೀಕ್ಷೆ ಬರೆಯಲು ಒಪ್ಪದ ಒಂದೇ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು!
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 315.60 ಅಂಕ ಏರಿಕೆ ಕಂಡಿದ್ದು, 56,721.44 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 85.75 ಅಂಕಗಳಷ್ಟು ಏರಿಕೆಯೊಂದಿಗೆ 16,928.55 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಯುಎಲ್, ವಿಪ್ರೋ, ಟೆಕ್ ಮಹೀಂದ್ರ, ಟೈಟಾನ್ ಮತ್ತು ಇನ್ಫೋಸಿಸ್, ಬಜಾಜ್ ಆಟೋ ಲಿಮಿಟೆಡ್, ಭಾರ್ತಿ ಏರ್ ಟೆಲ್ ಲಿ, ಎಲ್ ಆ್ಯಂಡ್ ಟಿ, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಮಾರುತಿ ಸುಜುಕಿ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಸಿಪ್ಲಾ ಲಿಮಿಟೆಡ್, ಟಾಟಾ ಸ್ಟೀಲ್ ಲಿಮಿಟೆಡ್, ಲುಪಿನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್, ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್, ಪವರ್ ಗ್ರಿಡ್, ವೇದಾಂತ್ ಲಿಮಿಟೆಡ್, ಜಿಎಐಎಲ್ (ಇಂಡಿಯಾ)ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಷೇರುಗಳು ನಷ್ಟ ಕಂಡಿದೆ.
ಸೋಮವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1,747.08 ಅಂಕಗಳಷ್ಟು ಪತನಗೊಂಡಿದ್ದು, 56,405.94 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ 531.95 ಅಂಕ ಕುಸಿತ ಕಂಡಿದ್ದು, 16,842.80 ಅಂಕಗಳ ಮಟ್ಟ ತಲುಪಿತ್ತು.