ನವದೆಹಲಿ: ಏಷ್ಯಾದ ಷೇರು ಮಾರುಕಟ್ಟೆಯ ನೆಗೆಟಿವ್ ವಹಿವಾಟಿನ ಪರಿಣಾಮ ಗುರುವಾರ(ಜುಲೈ 08) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ವಹಿವಾಟು ಏರಿಳಿಕೆಯಲ್ಲಿ ಮುಂದುವರಿದಿದೆ.
ಇದನ್ನೂ ಓದಿ:ಕಾಶ್ಮೀರ ಎನ್ ಕೌಂಟರ್: ಐವರು ಉಗ್ರರ ಹತ್ಯೆಗೈದ ಭದ್ರತಾ ಪಡೆಗಳು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 3.34 ಅಂಕಗಳಷ್ಟು ಏರಿಕೆಯೊಂದಿಗೆ 53,058 ಅಂಕಗಳ ವಹಿವಾಟು ನಡೆಸಿದ್ದು, ಎನ್ ಎಸ್ ಇ ನಿಫ್ಟಿ 8.95 ಅಂಕಗಳ ಕುಸಿತದೊಂದಿಗೆ 15,870.70ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಏರಿಕೆಯಿಂದ ಬಜಾಜ್ ಆಟೋ, ಟೆಕ್ ಮಹೀಂದ್ರ, ಎನ್ ಟಿಪಿಸಿ, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಸಿಎಲ್ ಟೆಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಆಲ್ಟ್ರಾ ಟೆಕ್ ಸಿಮೆಂಟ್, ಎಚ್ ಯುಎಲ್, ಸನ್ ಫಾರ್ಮಾ ಮತ್ತು ನೆಸ್ಲೆ ಷೇರುಗಳು ನಷ್ಟ ಅನುಭವಿಸಿದೆ.
ಹಿಂದಿನ ದಿನದ ಮುಂಬಯಿ ಷೇರುಪೇಟೆ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 193.58 ಅಂಕ ಏರಿಕೆಯಾಗಿ, 56,054 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 61.40 ಅಂಕ ಏರಿಕೆಯೊಂದಿಗೆ ದಾಖಲೆಯ 15,879ರ ಗಡಿ ದಾಟಿತ್ತು.