ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯ(Stock Market) ಧನಾತ್ಮಕ ವಹಿವಾಟಿನ ಪರಿಣಾಮ ಬುಧವಾರ (ಸೆ.18) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 182 ಅಂಕಗಳ ಜಿಗಿತದೊಂದಿಗೆ 83,000 ಗಡಿದಾಟಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 182.37 ಅಂಕಗಳಷ್ಟು ಏರಿಕೆಯೊಂದಿಗೆ 83,262.03ರ ಗಡಿ ದಾಟಿ ದಾಖಲೆ ಬರೆದಿದ್ದು, ಎಸ್ ಎಸ್ ಇ ನಿಫ್ಟಿ 46.30 ಅಂಕಗಳ ಜಿಗಿತದೊಂದಿಗೆ 25,464.80 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ.
ಸೂಚ್ಯಂಕ, ನಿಫ್ಟಿ ಏರಿಕೆಯೊಂದಿಗೆ ಬಜಾಜ್ ಫೈನಾನ್ಸ್, ಹೀರೋ ಮೋಟೊ ಕಾರ್ಪ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಟೆಕ್ ಮಹೀಂದ್ರಾ, ಎಲ್ ಟಿಐ ಮೈಂಡ್ ಟ್ರೀ, ವಿಪ್ರೋ, ಇನ್ಫೋಸಿಸ್, ಟಿಸಿಎಸ್, ಟಾಟಾ ಸ್ಟೀಲ್, ಸಿಪ್ಲಾ ಷೇರು ನಷ್ಟ ಕಂಡಿದೆ.
ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 13.37 ಅಂಕಗಳ ಅಲ್ಪ ಏರಿಕೆಯೊಂದಿಗೆ 83,093.03ರ ಮಟ್ಟದಲ್ಲಿ ವಹಿವಾಟು ಮುಂದುವರಿದಿತ್ತು. ನಿಫ್ಟಿ ಕೇವಲ 3 ಅಂಕಗಳಷ್ಟು ಏರಿಕೆಯೊಂದಿಗೆ 25,421.50ರ ಗಡಿ ತಲುಪಿತ್ತು.