ಮುಂಬೈ:ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ(ಜುಲೈ 03) ಸಾರ್ವಕಾಲಿಕ ದಾಖಲೆ ಬರೆದಿದ್ದು, ಮೊತ್ತ ಮೊದಲ ಬಾರಿಗೆ 80,000 ಅಂಕಗಳ ಗಡಿ ದಾಟುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭವಾಗಿದೆ.
ಇದನ್ನೂ ಓದಿ:Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು
ಎನ್ ಎಸ್ ಇ ನಿಫ್ಟಿ 24.291.75 ಅಂಕಗಳ ಮಟ್ಟ ತಲುಪಿ ದಾಖಲೆ ಬರೆದಿದ್ದು, ಅದೇ ರೀತಿ ಬಿಎಸ್ ಇ ಸೂಚ್ಯಂಕ 80,013.77 ಅಂಕಗಳ ಸಾರ್ವಕಾಲಿಕ ಮಟ್ಟ ತಲುಪಿ ವಹಿವಾಟು ಮುಂದುವರಿಸಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ನ ಷೇರುಗಳ ಲಾಭಾಂಶ ಶೇ.3.5ರಷ್ಟು ಏರಿಕೆ ಕಂಡಿದೆ. ಸುಮಾರು 13 ಸೆಕ್ಟರ್ ಗಳ ಷೇರುಗಳು ಲಾಭ ಗಳಿಸಿದ್ದು, ಕೆಲವು ಷೇರುಗಳು ನಷ್ಟ ಕಂಡಿದೆ.
ಜಾಗತಿಕ ಮಾರುಕಟ್ಟೆಯ ವಹಿವಾಟು ಮಿಶ್ರ ಟ್ರೆಂಡ್ಸ್ ಕಂಡು ಬಂದಿದ್ದು, S&P ಫ್ಯೂಚರ್ಸ್ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, Hang Seng ಫ್ಯೂಚರ್ಸ್ ಶೇ.0.5ರಷ್ಟು, ಜಪಾನ್ ನ ಟುಪಿಕ್ಸ್ ಶೇ.0.2ರಷ್ಟು, ಆಸ್ಟ್ರೇಲಿಯಾದ S&P/ASX200 ಶೇ.03ರಷ್ಟು, ಯುರೋ Stoxx 50 ಫ್ಯೂಚರ್ಸ್ ಶೇ.03ರಷ್ಟು ಜಿಗಿತ ಕಂಡಿರುವುದಾಗಿ ವರದಿ ತಿಳಿಸಿದೆ.