Advertisement

SS Rajamouli’: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

06:26 PM Jan 09, 2025 | Team Udayavani |

ಹೈದರಾಬಾದ್:‌ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ (SS Rajamouli) ತಮ್ಮ ಸಿನಿಮಾಗಳ ಮೂಲಕವೇ ಹತ್ತಾರು ದಾಖಲೆಗಳನ್ನು ಬರೆದು ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ ವಿಶ್ವ ಸಿನಿರಂಗದಲ್ಲೂ ಸುದ್ದಿಯಾದವರು.

Advertisement

ʼಆರ್‌ ಆರ್‌ ಆರ್‌ʼ ಬಳಿಕ ರಾಜಮೌಳಿ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ಅವರು ಒಂದು ಸಿನಿಮಾಕ್ಕೆ ಕೆಲ ವರ್ಷಗಳನ್ನೇ ತೆಗೆದುಕೊಳ್ಳುತ್ತಾರೆ. ಅವರು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೋ ಅಷ್ಟೇ ಪರ್ಫೆಕ್ಟ್‌ ಆಗಿ ಅವರ ಸಿನಿಮಾ ತೆರೆಕಂಡು ಸಕ್ಸಸ್ ಕಾಣುತ್ತದೆ.

ಮಹೇಶ್‌ ಬಾಬು (Mahesh Babu) ಅವರೊಂದಿಗೆ ರಾಜಮೌಳಿ ಅವರ ʼSSMB29ʼ ಬರಲಿದೆ. ಬರೀ ಅನೌನ್ಸ್ ಆದ ಘಳಿಗೆಯಿಂದಲೇ ಚಿತ್ರ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಮಾನ್ಯ ಬಜೆಟ್‌ ಅಲ್ಲದೇ ಬರೋಬ್ಬರಿ 900-1000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಅಡ್ವೆಂಚರ್‌ ಜಂಗಲ್‌, ಸಾಹಸಮಯ ಕಥೆಯನ್ನು ʼSSMB29ʼ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಈ ನಡುವೆ ಮಹೇಶ್‌ ಬಾಬು ಅವರೊಂದಿಗಿನ ಸಿನಿಮಾದ ಬಳಿಕ ರಾಜಮೌಳಿ ಅವರ ಮುಂದಿನ ಸಿನಿಮಾ ಯಾವ ಸಬ್ಜೆಕ್ಟ್‌ ಒಳಗೊಳ್ಳಲಿದೆ ಎನ್ನುವ ಬಗ್ಗೆ ಸುದ್ದಿಯೊಂದು ಟಾಲಿವುಡ್‌ನಲ್ಲಿ ಹರಿದಾಡಿದೆ.

ರಾಜಮೌಳಿ ಮಹೇಶ್‌ ಬಾಬು ಅವರೊಂದಿಗಿನ ಸಿನಿಮಾದ ಬಳಿಕ ಪೌರಾಣಿಕ ಮಹಾಭಾರತವನ್ನು ತಮ್ಮ ಪ್ರಾಜೆಕ್ಟ್‌ ಆಗಿ ಆಯ್ಕೆ ಮಾಡಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

“ರಾಜಮೌಳಿ ಅವರು ಮೊದಲಿನಿಂದಲೂ ಮಹಾಭಾರತದ ಕಥೆಯನ್ನು ಸಿನಿಮಾ ಮಾಡಲು ಬಯಸಿದ್ದರು. ಬಾಹುಬಲಿ ನಂತರ ಮಹಾಭಾರತವನ್ನು ಮಾಡಲು ಬಯಸಿದ್ದರು. ಆದರೆ ಅಂದು ಅವರನ್ನು ಸದ್ಯಕ್ಕೆ ಈ ಪ್ರಾಜೆಕ್ಟ್‌ ಬೇಡವೆಂದು ಸಲಹೆ ಬಂದಿತ್ತು. ಅದರ ಬದಲಿಗೆ ಅವರು ʼಆರ್‌ ಆರ್‌ ಆರ್‌ʼ ಚಿತ್ರವನ್ನು ಮಾಡಿದ್ದರು. ಈಗ ಅವರು ಮಹಾಭಾರತವನ್ನು ಮಾಡದಿದ್ದರೆ ಮತ್ತೆಂದೂ ಆ ಪ್ರಾಜೆಕ್ಟ್‌ ಮಾಡಲು ಆಗುವುದಿಲ್ಲವೆಂದು” ಮೂಲವೊಂದು ಹೇಳಿರುವುದಾಗಿ ʼಟೈಮ್ಸ್‌ ನೌʼ ವರದಿ ಮಾಡಿದೆ.

“ಮಹಾಭಾರತವನ್ನು ಮಾಡುವುದು ಬಹುದಿನಗಳ ಕನಸು. ಹತ್ತು ವರ್ಷಗಳಿಂದ ಆ ಕನಸಿನೊಂದಿಗೆ ಬದುಕಿದ್ದೇನೆ ಮತ್ತು ನಾನು ಅದನ್ನು ಒಂದು ದಿನ ಮಾಡುತ್ತೇನೆ ಎಂದು ನನಗೆ ಖಾತ್ರಿಯಿದೆ” ಈ ಹಿಂದೆ ರಾಜಮೌಳಿ ಹೇಳಿದ್ದರು.

ʼSSMB29ʼ ಚಿತ್ರ ಇದೇ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next