ಮುಂಬೈ:ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಷೇರುಪೇಟೆಯ ನೀರಸ ವಹಿವಾಟಿನ ಪರಿಣಾಮ ಸೋಮವಾರ(ಸೆಪ್ಟೆಂಬರ್ 26) ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 889.78 ಅಂಕಗಳಷ್ಟು ಕುಸಿತದೊಂದಿಗೆ ಆರಂಭಿಕ ವಹಿವಾಟು ನಡೆಸಿದೆ.
ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕ ಕುಸಿತ; ನಿಫ್ಟಿಯೂ ಭಾರೀ ಇಳಿಕೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 889.78 ಅಂಕಗಳಷ್ಟು ಇಳಿಕೆಯೊಂದಿಗೆ 57,209.14 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಸಂವೇದಿ ಸೂಚ್ಯಂಕ ಕುಸಿತದಿಂದ ಹೂಡಿಕೆದಾರರು ಭಾರೀ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 292.80 ಅಂಕಗಳಷ್ಟು ಕುಸಿತದೊಂದಿಗೆ 17,034.50 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಶುಕ್ರವಾರವೂ ಕೂಡಾ ಬಾಂಬೆ ಷೇರುಪೇಟೆ, ಜಾಗತಿಕ ಷೇರುಪೇಟೆಯ ಸೆನ್ಸೆಕ್ಸ್ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.
ಸೆನ್ಸೆಕ್ಸ್ ಕುಸಿತದ ಪರಿಣಾಮ ಟಾಟಾ ಸ್ಟೀಲ್ ಲಿಮಿಟೆಡ್, ಯೆಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ವೋಡಾಪೋನ್ ಐಡಿಯಾ ಲಿಮಿಟೆಡ್, ಎಚ್ ಡಿಎಫ್ ಸಿ ಬ್ಯಾಂಕ್, ಪವರ್ ಗ್ರಿಡ್ ಕಾರ್ಪೋರೇಶನ್, ಭಾರ್ತಿ ಏರ್ ಟೆಲ್, ಬ್ಯಾಂಕ್ ಆಫ್ ಬರೋಡಾ ಷೇರುಗಳು ನಷ್ಟ ಕಂಡಿದೆ.