ಮುಂಬಯಿ: ಷೇರು ಹೂಡಿಕೆದಾರರು ಹೆಚ್ಚಿನ ಮಟ್ಟದಲ್ಲಿ ಲಾಭವನ್ನು ಕಾಯ್ದಿರಿಸಿದ್ದರಿಂದ ಮಂಗಳವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ದಾಖಲೆಯ 53000 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಉಪ್ಪುಂದ: ಮದ್ಯ ಸೇವಿಸಿ ಈಜಲು ಹೋದ ವ್ಯಕ್ತಿ ಮಯ್ಯಾಡಿ ಹೊಳೆಯಲ್ಲಿ ಮುಳುಗಿ ಸಾವು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 14.25 ಅಂಕಗಳ ಸಮನಾಂತರ ಏರಿಕೆಯಿಂದ ದಾಖಲೆಯ 53,057.11 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 26.25 ಅಂಕಗಳ ಏರಿಕೆಯೊಂದಿಗೆ 15,772.75ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಮಾರುತಿ, ಎಲ್ ಆ್ಯಂಡ್ ಟಿ, ಆಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್ ಮತ್ತು ಟೈಟಾನ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ ಮತ್ತು ಎಚ್ ಯುಎಲ್ ಷೇರು ನಷ್ಟ ಅನುಭವಿಸಿದೆ.
ಕೋವಿಡ್ ವ್ಯಾಕ್ಸಿನೇಷನ್ ಮತ್ತು ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಬಿರುಸಿನ ವಹಿವಾಟಿನ ಪರಿಣಾಮ ಇಂದು ಮುಂಬಯಿ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿಯೇ ಏರಿಕೆ ಕಂಡಿತ್ತು. ಕೋವಿಡ್ ಅನ್ ಲಾಕ್ ನಿಂದ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆದಿರುವುದಾಗಿ ಎಲ್ ಕೆಪಿ ಸೆಕ್ಯುರಿಟೀಸ್ ನ ಮುಖ್ಯಸ್ಥ ಎಸ್.ರಂಗನಾಥನ್ ತಿಳಿಸಿದ್ದಾರೆ.