ಮುಂಬಯಿ: ವಿದೇಶಿ ಬಂಡವಾಳದ ಹೊರಹರಿವಿನ ನಡುವೆಯೇ ಗುರುವಾರ(ನವೆಂಬರ್ 25) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 100ಕ್ಕೂ ಅಧಿಕ ಅಂಕ ಕುಸಿತ ಕಂಡಿದ್ದು, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಷೇರು ನಷ್ಟ ಅನುಭವಿಸಿದೆ.
ಇದನ್ನೂ ಓದಿ:ರೈತ ವಿದ್ಯಾನಿಧಿ: ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದ ಸಿಎಂ; ಕಾಂಗ್ರೆಸ್
ಅಲ್ಪ ಚೇತರಿಕೆಯೊಂದಿಗೆ ಮುಂಬಯಿ ಷೇರುಪೇಟೆ ವಹಿವಾಟು ಆರಂಭಗೊಂಡಿದ್ದರೂ ಕೂಡಾ ಬಳಿಕ ಸಂವೇದಿ ಸೂಚ್ಯಂಕ 125.54 ಅಂಕ ಇಳಿಕೆಯಾಗಿದ್ದು, 58,215.45 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 30.15 ಅಂಕ ಕುಸಿತವಾಗಿದ್ದು, 17,384.90 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆಯ ಪರಿಣಾಮ ಐಸಿಐಸಿಐ, ಎನ್ ಟಿಪಿಸಿ, ಬಜಾಜ್ ಫಿನ್ ಸರ್ವ್, ಎಚ್ ಯುಎಲ್, ಏಷ್ಯನ್ ಪೇಂಟ್ಸ್, ಐಟಿಸಿ ಮತ್ತು ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಟೆಕ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ.
ಬುಧವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 323.34 ಅಂಕ ಕುಸಿತವಾಗಿದ್ದು, 58,340.99 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 88.30 ಅಂಕ ಇಳಿಕೆಯಾಗಿದ್ದು, 17, 415.05 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.