Advertisement
ಅನ್ಯಾಯ ಸಹಿಸಬೇಡ… ನಿನ್ನ ಕೈಲಾದ ರೀತಿಯಲ್ಲಿ ಪ್ರತಿರೋಧವನ್ನು ತೋರಿಸಲೇಬೇಕು… ಎಂದು. ಆದರೆ ನನಗೆಷ್ಟೋ ಸಲ ಅನಿಸಿತ್ತು : ನನ್ನೊಬ್ಬಳಿಂದ ಯಾವ ಬದಲಾವಣೆ ಸಾಧ್ಯವೆಂದು! ಆದರೆ ಕ್ರಮೇಣ ಕೆಲವು ಅಪೂರ್ವ ಉದಾಹರಣೆಗಳನ್ನು ಕಣ್ಮುಂದೆ ಕಂಡ ಮೇಲೆ ಸ್ಪಷ್ಟವಾಯಿತು. ಬದಲಾವಣೆ ಒಂದು ದಿನಕ್ಕೆಲ್ಲ ಸಾಧ್ಯವಿಲ್ಲ , ಆದರೆ, ಭವಿಷ್ಯತ್ತಿನಲ್ಲಿ ಸೂಕ್ತ ಬದಲಾವಣೆ ಬೇಕೆಂದರೆ ಮೊದಲ ಹೆಜ್ಜೆಯಿಡಲು ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂದು. ನಮ್ಮಲ್ಲಿ ಅಂಗವಿಕಲರಿಗೆ ಮೂಲಭೂತ ಸೌಲಭ್ಯಗಳು, ಸೌಕರ್ಯಗಳು ತೀರಾ ತಳಮಟ್ಟದಲ್ಲಿರಬಹುದು.
Related Articles
Advertisement
ನಮ್ಮಲ್ಲಿ ಆಥೊìಪೆಡಿಕ್ ಸರ್ಜನ್ ಕ್ಲಿನಿಕ್ ಕೂಡ ಎರಡನೆಯ ಮಹಡಿಯÇÉೇ ಇರುತ್ತದೆ ಮತ್ತು ಇದಕ್ಕೆ ಯಾವುದೇ ಲಿಫ್ಟ್ ಅಥವಾ ರ್‍ಯಾಂಪ್ ವ್ಯವಸ್ಥೆಯೂ ಇರುವುದಿಲ್ಲ! ಇದು ಕೇವಲ ದೈಹಿಕ ನ್ಯೂನ್ಯತೆ ಉಳ್ಳವರ ಸಮಸ್ಯೆ ಮಾತ್ರವಲ್ಲ. ವೃದ್ಧರ, ಅಶಕ್ತರ, ತೀವ್ರ ಅನಾರೋಗ್ಯ ಪೀಡಿತರ, ಕಾಲುನೋವು, ಮೂಳೆಮುರಿತ ಮುಂತಾದ ತಾತ್ಕಾಲಿಕ ತೊಂದರೆಗಳನ್ನು ಅನುಭವಿಸುತ್ತಿರುವವರ ಬವಣೆಯೂ ಹೌದು. ಡೆಂಟಿಸ್ಟ್, ಜನರಲ್ ಫಿಸಿಶಿಯನ್, ಆಥೊìà, ನ್ಯೂರೋ ಹೀಗೇ ಎÇÉಾ ಸಣ್ಣ/ದೊಡ್ಡ ಡಾಕ್ಟರುಗಳ ಕ್ಲಿನಿಕ್ಕುಗಳೂ ಬಹುತೇಕ ಮಹಡಿಯ ಮೇಲೆ ಅಥವಾ ಹತ್ತಾರು ಮೆಟ್ಟಿಲುಗಳನ್ನೇರಿ! ಹಲವೆಡೇ ಲಿಫ್ಟ್ ಇದ್ದರೂ ಒಂದೋ ಅದು ಕೆಟ್ಟಿರುತ್ತದೆ ಅಥವಾ ಮಹಡಿ ಹತ್ತಲು ಯಾವುದೇ ತೊಂದರೆ ಇಲ್ಲದವರಿಂದಲೇ ತುಂಬಿರುತ್ತದೆ. ಎಷ್ಟೋ ಸಲ ಅನಿಸಿದ್ದಿದೆ, ಅದೇಕೆ ವೈದ್ಯಕೀಯ ಕ್ಷೇತ್ರದಲ್ಲಿರುವವರೂ ನಮ್ಮಂಥವರ ಬಗ್ಗೆ ಇಷ್ಟು ಸಂವೇದನಾರಹಿತವಾಗಿ ಆಲೋಚಿಸುತ್ತಾರೆ? ಎಂದು. ರೋಗಿಗಳು ಸರಾಗವಾಗಿ ಕ್ಲಿನಿಕ್ಕಿನ ಒಳಹೋಗಲು ಕನಿಷ್ಟ ವ್ಯವಸ್ಥೆಯನ್ನೂ ಕಲ್ಪಿಸಲು ಇವರು ಆಲೋಚಿಸುತ್ತಿಲ್ಲ. ಇದು ದೂರಾಲೋಚನೆಯ ಕೊರತೆಯೋ ಅಥವಾ ದಿವ್ಯ ನಿರ್ಲಕ್ಷ್ಯವೋ ತಿಳಿಯೆ! ಈ ಕಾರಣದಿಂದ ಅನೇಕ ಅಸಹಾಯಕರು ದೊಡ್ಡಾಸ್ಪತ್ರೆಗಳಿಗೇ ಹೋಗಬೇಕಾಗುತ್ತದೆ ಅಥವಾ ಅನಿವಾರ್ಯವಾಗಿ ಅಪರಿಚಿತ ಡಾಕ್ಟರ್ಸ್ ಅನ್ನು ಸಂಪರ್ಕಿಸಬೇಕಾಗುತ್ತದೆ- ಕೇವಲ ಅವರ ಡಿಸ್ಪೆನ್ಸರಿ ಅಪ್ಪಿತಪ್ಪಿ ಕೆಳಗಿದೆ ಅಥವಾ ಅದಕ್ಕೆ ಅಷ್ಟು ಮೆಟ್ಟಿಲುಗಳಿಲ್ಲ ಎಂಬ ಕಾರಣಕ್ಕಾಗಿ. ಇನ್ನು ಹೊಟೇಲು ಮತ್ತಿತರ ಸ್ಥಳಗಳ ಬಗ್ಗೆ ಹೇಳಿಯೇ ಪ್ರಯೋಜನವಿಲ್ಲ. ತೀರಾ ಕೆಲವೇ ಕೆಲವು ಹೊಟೇಲುಗಳು ಮಾತ್ರ ಈಗೀಗ ರ್‍ಯಾಂಪ್ ಅಥವಾ ಬೇಸ್‌ಮೆಂಟಿನಿಂದ ಲಿಫ್ಟ್ ಇಡುತ್ತಿವೆ. ಆದರೆ ಈಗಲೂ ಬಹುಪಾಲು ಮೆಟ್ಟಿಲುಗಳದೇ ಸಾಮ್ರಾಜ್ಯ. ಪ್ರಯಾಣದ ಸಮಯದÇÉೆಲ್ಲ ನಾವು ಎಲ್ಲರೊಂದಿಗೆ ಹೊಟೇಲಿಗೆ ಹೋಗಲಾಗದೇ, ಕಾರಿಗೇ ಸಪ್ಲೆ„ ಮಾಡಿಸಿಕೊಳ್ಳಬೇಕಾಗುತ್ತದೆ.
ಮಾನಸಿಕವಾಗಿ ನಾವು ನಮ್ಮ ಆಲೋಚನೆಗಳು, ಚಿಂತನೆಗಳು, ಧೋರಣೆಗಳು, ಆಚರಣೆಗಳು ತಳದಿಂದ ಮೇಲೇರುತ್ತ ದಿನೇ ದಿನೇ ಋಣಾತ್ಮಕತೆಯಿಂದ ಧನಾತ್ಮಕತೆಯತ್ತ ಸಾಗುವಾಗ ಮಾನಸಿಕ ಉನ್ನತಿಯ ಮೆಟ್ಟಿಲುಗಳು ಎಷ್ಟೇ ಇದ್ದಿರಲಿ, ಏರುವ ಹುಮ್ಮಸ್ಸು ನಮ್ಮದಾಗಿರಲಿ. ಆದರೆ ಇವೇ ಮೆಟ್ಟಿಲುಗಳು ಅಶಕ್ತರ, ಅಸಹಾಯಕರ, ವೃದ್ಧರ, ಅಂಗವಿಕಲರ ಎದುರಿಗೆ ವಾಸ್ತವಿಕತೆಯಲ್ಲಿ ಪ್ರತ್ಯಕ್ಷಗೊಂಡರೆ ಅವರು ಪಡುವ ಹಿಂಸೆ, ಕಷ್ಟಗಳು ಅಷ್ಟಿಷ್ಟಲ್ಲ. ಇದರಿಂದ ಅವರೊಳಗಿನ ವಿಶ್ವಾಸ, ಧೈರ್ಯ, ಸ್ವಾವಲಂಬನೆಯ ಹಂಬಲಗಳು ಕ್ರಮೇಣ ಕುಂದಿ ಹೋಗುವ ಅಪಾಯವಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಸರ್ವರೂ ಮುಕ್ತವಾಗಿ, ಸರಾಗವಾಗಿ ಸಂಚರಿಸಿ, ಎÇÉಾ ರೀತಿಯ ಸೌಲಭ್ಯ, ಮೂಲಭೂತ ಸೌಕರ್ಯಗಳು ಲಭಿಸುವಂಥ ದಿನಗಳು ಬಹುಬೇಗ ಬರಲಿ. ಇದಕ್ಕಾಗಿ ಧ್ವನಿಯೆತ್ತಲೇಬೇಕಾಗಿದೆ. ಇದು ಕೇವಲ ನಮ್ಮಂಥವರದೊಂದೇ ಹೊಣೆಯಲ್ಲ. ಸಮಾಜದ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಬದಲಾವಣೆ ಒಂದು ದಿನದÇÉಾಗದು. ಒಂದು ಬರಹದÇÉಾಗದು. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು.
– ತೇಜಸ್ವಿನಿ ಹೆಗಡೆ