Advertisement
ನಂ. 22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನ. 8ರಂದು ರಾತ್ರಿ 11.45ಕ್ಕೆ ಮಂಗಳೂರಿನಿಂದ ಸಂಚಾರ ಆರಂಭಿಸುವ ಬದಲು ನ. 9ರಂದು ನಸುಕಿನ 2.35ಕ್ಕೆ ಸಂಚರಿಸಲಿದೆ. (2ಗಂ.50.ನಿಮಿಷ ತಡ). ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸೆಂಟ್ರಲ್‌ನಿಂದ ನ. 11ರಂದು ಮಧ್ಯಾಹ್ನ 1.35ರ ಬದಲು ಸಂಜೆ 4.25ಕ್ಕೆ ಹೊರಡಲಿದೆ. (3 ಗಂಟೆ ತಡ) ನಂ.16338 ಎರ್ನಾಕುಲಂ ಜಂಕ್ಷನ್- ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್ ನ. 8ರಂದು ಎರ್ನಾಕುಲಂನಿಂದ ರಾತ್ರಿ 8.25ರ ಬದಲಿಗೆ ನ. 9ರಂದು ರಾತ್ರಿ 12.15ಕ್ಕೆ ಹೊರಡಲಿದೆ (3 ಗಂ. 50 ನಿಮಿಷ ತಡ). ನಂ.12224 ಎರ್ನಾಕುಲಂ ಜಂಕ್ಷನ್ – ಲೋಕಮಾನ್ಯ ತಿಲಕ್ (ಟಿ) ಬೈ ವೀಕ್ಲಿ ತುರಂತೋ ಎಕ್ಸ್‌ಪ್ರೆಸ್ ರೈಲು ನ. 8ರಂದು ರಾತ್ರಿ 9.30ಕ್ಕೆ ಹೊರಡುವ ಬದಲು ನ. 9ರ ನಸುಕಿನ 1.10ಕ್ಕೆ ಹೊರಡಲಿದೆ (3ಗಂ.50 ನಿಮಿಷ ತಡ).
ಸಂಚಾರಕ್ಕೆ ಕೆಲಕಾಲ ತಡೆ
ನ. 7 ಮತ್ತು 9ರಂದು ಈ ಕೆಳಗಿನ ರೈಲನ್ನು ಕೆಲವು ಗಂಟೆಗಳ ಕಾಲ ತಡೆ ಹಿಡಿಯಲಾಗುತ್ತದೆ. ನಂ. 12618 ಹಜರತ್ ನಿಜಾಮುದ್ದೀನ್- ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 3 ಗಂ. 20 ನಿಮಿಷ ತಡೆಹಿಡಿಯಲಾಗುತ್ತದೆ. ನಂ.12685 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಗಳೂರು ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು 1ಗಂ.10 ನಿಮಿಷ, ನಂ.16604 ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು 1 ಗಂಟೆ, ನಂ.12484 ಅಮೃತಸರ-ಕೊಚ್ಚುವೇಲಿ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 2 ಗಂ.40 ನಿಮಿಷ ತಡೆ ಹಿಡಿಯಲಾಗುತ್ತದೆ. ನ.10ರಂದು ನಂ.12618 ಹಜರತ್ ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು 20 ನಿಮಿಷ ತಡೆಹಿಡಿಯಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಪಾಲಾ^ಟ್ ವಿಭಾಗದ ಪ್ರಕಟನೆ ತಿಳಿಸಿದೆ.