Advertisement

ಉಕ್ಕಿನ ಸೇತುವೆ ಕಾಮಗಾರಿ ಚುರುಕು

12:11 PM Sep 05, 2018 | |

ಯೋಜನೆ – 1
ಯೋಜನೆ:
ಓಕಳಿಪುರ ಜಂಕ್ಷನ್‌ ಅಷ್ಟಪಥ
ವಿವರ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.
ಕಾಮಗಾರಿ ಆರಂಭ ದಿನಾಂಕ: 14 ಜುಲೈ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.78
ಯೋಜನಾ ವೆಚ್ಚ: 102.84 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2017
ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಅಪ್‌ಡೇಟ್‌: ಆರ್‌.ಆರ್‌.ಕಲ್ಯಾಣ ಮಂಟಪದ ಬಳಿಯ ರೈಲ್ವೆ ಹಳಿಗೆ ಒಂದು ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಕೆ ಪೂರ್ಣಗೊಂಡಿದ್ದು, ಕೋಡೆ ವೃತ್ತ ಕಡೆಗೆ ಹೋಗುವ ರಸ್ತೆಯ ರೈಲ್ವೆ ಹಳಿಗೆ ಎರಡು ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಸಲಾಗಿದೆ.
ವಸ್ತುಸ್ಥಿತಿ: ಮಳೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಕೇವಲ ಶೇ.2ರಷ್ಟು ಪ್ರಗತಿಯಾಗಿದೆ. ಎರಡು ಕಡೆಗಳಲ್ಲಿ ರೈಲ್ವೆ ಹಳಿಗಳಿಗೆ ಮೂರು ಕಾಂಕ್ರಿಟ್‌ ಎಲಿಮೆಂಟ್‌ಗಳ ಅಳವಡಿಕೆ ಕಾರ್ಯ ಬಾಕಿಯಿದೆ. 

Advertisement

ಕೋಡೆ ವೃತ್ತ ಹಾಗೂ ಆರ್‌.ಆರ್‌.ಕಲ್ಯಾಣ ಮಂಟಪದ ಬಳಿಯ ರೈಲ್ವೆ ಹಳಿಗಳಿಗೆ ಒಟ್ಟು 10 ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಸಬೇಕಿದ್ದು, ಈಗಾಗಲೇ 7 ಎಲಿಮೆಂಟ್‌ ಅಳವಡಿಕೆ ಪೂರ್ಣಗೊಂಡಿದೆ. ಉಳಿದ ಮೂರು ಎಲಿಮೆಂಟ್‌ಗಳನ್ನು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಜತೆಗೆ ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣದ ಸಂಪರ್ಕ ಕಲ್ಪಿಸುವ ಲೂಪ್‌-2 ನಿರ್ಮಿಸಲು ಸಂಚಾರ ಬದಲಿಸಬೇಕಿದೆ ಎಂದು ಎಂದು ಸಹಾಯಕ ಇಂಜಿನಿಯರ್‌ ತಿಳಿಸಿದರು. 

ಯೋಜನೆ -2
ಯೋಜನೆ:
ಬಹುಮಹಡಿ ವಾಹನ ನಿಲುಗಡೆ ತಾಣ
ವಿವರ: ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.
ಕಾರ್ಯಾದೇಶ ನೀಡಿದ ದಿನಾಂಕ: 24 ಜೂನ್‌ 2015
ಕಾಮಗಾರಿ ಆರಂಭ ದಿನಾಂಕ: 30 ಜೂನ್‌ 2018
ಕಾಮಗಾರಿ ಅವಧಿ: 24 ತಿಂಗಳು
ಈವರೆಗಿನ ಪ್ರಗತಿ: ಶೇ.50
ಅಂದಾಜು ವೆಚ್ಚ: 44.80 ಕೋಟಿ ರೂ.
ಯೋಜನಾ ವೆಚ್ಚ: 79.81 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 30 ಜೂನ್‌ 2018
ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್
ಈ ತಿಂಗಳ ಪ್ರಗತಿ: ನಾಲ್ಕು ಹಂತಗಳ ಪೈಕಿ ಮೂರನೇ ಹಂತದ  -3ರ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ ಮೂರು ಮಹಡಿಗಳಿಗೆ ಸಂಪರ್ಕ ಕಲ್ಪಿಸುವ ರ್‍ಯಾಂಪ್‌ಗ್ಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 
ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಂಡಿದ್ದು, ಒಂದು ಮಹಡಿ ಬಳಕೆಗೆ ಸಿದ್ಧವಿದೆ. ಆದರೆ, ಅಧಿಕಾರಿಗಳು ಈವರೆಗೆ ಟೆಂಡರ್‌ ಆಹ್ವಾನಿಸಲು ಮುಂದಾಗಿಲ್ಲ. ಉಳಿದಂತೆ ಮೂರನೇ ಹಂತದ -3ರ ಮಹಡಿಯ ಪಾಯ ಕಾಮಗಾರಿ ಪೂರ್ಣಗೊಂಡಿದೆ. 

ಮೂರನೇ ಹಂತದ  -3 ಮಹಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ಮಹಡಿಗಳಿಗೆ ಸಂಪರ್ಕಿಸುವ ರ್‍ಯಾಂಪ್‌ಗ್ಳನ್ನು ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಮುಂದಿನ ಜೂನ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆಯ ಎಂಜಿನಿಯರ್‌ ಮಾಹಿತಿ ನೀಡಿದರು. 

ಯೋಜನೆ – 3
ಯೋಜನೆ: ಮುತ್ತುರಾಜ ಜಂಕ್ಷನ್‌ ಅಂಡರ್‌ ಪಾಸ್‌ 
ವಿವರ: ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 
ಕಾರ್ಯಾದೇಶ ನೀಡಿದ ದಿನಾಂಕ: 01 ಸೆಪ್ಟಂಬರ್‌ 2015
ಕಾಮಗಾರಿ ಆರಂಭ ದಿನಾಂಕ: ಜನವರಿ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.32
ಅಂದಾಜು ವೆಚ್ಚ: 190 ಕೋಟಿ ರೂ.
ಯೋಜನಾ ವೆಚ್ಚ: 154.42 ಕೋಟಿ ರೂ. 
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2017
ಗುತ್ತಿಗೆದಾರ: ಎಂವಿಆರ್‌ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಅಂಡರ್‌ಪಾಸ್‌ ಕಾಮಗಾರಿಗಾಗಿ ಈಗಾಗಲೇ ಸುಮಾರು 20 ಅಡಿಗಳಷ್ಟು ಮಣ್ಣು ಅಗೆಯಲಾಗಿದ್ದು, ಅಂಡರ್‌ಪಾಸ್‌ ತಡೆಗೋಡೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು ಕಾಮಗಾರಿಗೆ ಅಡ್ಡವಾಗಿರುವ ಬೃಹತ್‌ ಬಂಡೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬ್ಲಾಸ್ಟ್‌ ಮಾಡುವ ಕೆಲಸ ಪ್ರಗತಿಯಲ್ಲಿದೆ. 
ವಸ್ತುಸ್ಥಿತಿ: ಒಂದು ತಿಂಗಳ ಹಿಂದಿನಿಂದ ಕಾಮಗಾರಿ ಮರು ಚಾಲನೆ ಪಡೆದಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಗತಿಯಾಗಿಲ್ಲ. ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೇಯರ್‌ ಸಹ ಸ್ಥಳ ಪರಿಶೀಲಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Advertisement

ಕಾಮಗಾರಿಗೆ ದೊಡ್ಡಬಂಡೆ ಅಡ್ಡಬಂದಿರುವುದರಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ಬಂಡೆ ಹೊಡೆಯಲಾಗುತ್ತಿದ್ದು, ಈಗಾಗಲೇ ಅಂಡರ್‌ಪಾಸ್‌ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸುಮಾರು 120 ಮೀಟರ್‌ನಷ್ಟು ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 

ಯೋಜನೆ – 4
ಯೋಜನೆ: ಶಿವಾನಂದ ವೃತ್ತದ ಉಕ್ಕಿನ ಸೇತುವೆ 
ವಿವರ: ರೇಸ್‌ಕೋರ್ಸ್‌ ರಸ್ತೆಯ ಕಡೆಯಿಂದ ಹರೆಕೃಷ್ಣ ರಸ್ತೆಯವರೆಗೆ 326.25 ಮೀಟರ್‌ ಉದ್ದದ ಉಕ್ಕಿನ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದ್ದು, ಇದರಿಂದ ರೇಸ್‌ಕೋರ್ಸ್‌ ಕಡೆಯಿಂದ ಶೇಷಾದ್ರಿಪುರ ರೈಲ್ವೆ ಕೆಳಸೇತುವೆ ಕಡೆಗೆ ಹೋಗುವ ಹಾಗೂ ಆ ಕಡೆಯಿಂದ ಬರುವವರಿಗೆ ದಟ್ಟಣೆ ಸಮಸ್ಯೆ ಎದುರಾಗುವುದಿಲ್ಲ. 
ಕಾರ್ಯಾದೇಶ ನೀಡಿದ ದಿನಾಂಕ: 30 ಜೂನ್‌ 2017 
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.20 
ಭೂಸ್ವಾಧೀನ ವೆಚ್ಚ: 50 ಕೋಟಿ ರೂ.
ಯೋಜನಾ ವೆಚ್ಚ: 21.76 ಕೋಟಿ ರೂ. 
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 04 ನವೆಂಬರ್‌ 2019 
ಗುತ್ತಿಗೆದಾರ: ಎಂ.ವೆಂಕಟರಾವ್‌ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಉಕ್ಕಿನ ಸೇತುವೆಗಾಗಿ ಕಾಂಕ್ರಿಟ್‌ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 4 ರಿಂದ 5 ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಜತೆಗೆ ಮೈಸೂರು ರಸ್ತೆಯಲ್ಲಿ ಸ್ಟೀಲ್‌ ಫ್ಯಾಬ್ರಿಕೇಷನ್‌ ಕಾರ್ಯ ನಡೆಸಲಾಗುತ್ತಿದೆ. 
ವಸ್ತುಸ್ಥಿತಿ: ಶಿವಾನಂದ ಉಕ್ಕಿನ ಸೇತುವೆ ಯೋಜನೆಗಾಗಿ ಒಟ್ಟು 16 ಪಿಲ್ಲರ್‌ಗಳನ್ನು ನಿರ್ಮಿಸಬೇಕಿದ್ದು, ಈಗಾಗಲೇ 4 ಪಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂರು ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಉಕ್ಕಿನ ಸೇತುವೆಗಾಗಿ ಸ್ಟೀಲ್‌ ಸಿದ್ಧಪಡಿಸಲಾಗುತ್ತಿದೆ. 

ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ವೇಗ ಪಡೆದುಕೊಂಡಿದ್ದು, ಕಳೆದೊಂದು ತಿಂಗಳಲ್ಲಿ 3 ಪಿಲ್ಲರ್‌ಗಳ ಕಾಮಗಾರಿ ನಡೆಸಿದ್ದೇವೆ. ಇದರೊಂದಿಗೆ ಸೇತುವೆ ನಿರ್ಮಾಣ ಅಗತ್ಯ ಸ್ವೀಲ್‌ನ್ನು ಫ್ಯಾಬ್ರಿಕೇಷನ್‌ ಮಾಡಲಾಗುತ್ತಿದ್ದು, ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಅದನ್ನು ತಂದು ಜೋಡಿಸಲಾಗುವುದು ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next