ಬೆಂಗಳೂರು: ನಾಲ್ಕು ವರ್ಷಗಳಿಂದ ಕುಂಟುತ್ತಾಸಾಗಿರುವ ನಗರದ ಶಿವಾನಂದ ವೃತ್ತದ ಉಕ್ಕಿನ ಸೇತುವೆಕಾಮಗಾರಿ ಈ ಮಾಸಾಂತ್ಯಕ್ಕೆ ಪೂರ್ಣಗೊಂಡುಆದಷ್ಟು ಶೀಘ್ರ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವಕಾಲ ಸನ್ನಿಹಿತವಾಗಿದೆ.13 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಆಭಾಗದ ಸಂಚಾರ ದಟ್ಟಣೆ ನಿವಾರಣೆ ಮಾಡುವ ಉದ್ದೇಶ ದಿಂದ ಕೈಗೆತ್ತಿಕೊಂಡ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಮೂರ್‍ನಾಲ್ಕು ವರ್ಷ ಉರುಳಿದರೂ ಪೂರ್ಣ ಗೊಂಡಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪಈ ಕುರಿತು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿ ತಿಂಗಳಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಬಿಬಿಎಂಪಿಗೆ ಖಡಕ್‌ವಾರ್ನಿಂಗ್ ನೀಡಿದ್ದಾರೆ.ಹೀಗಾಗಿ, ಅನ್‌ಲಾಕ್ ಬಳಿಕ ಉಕ್ಕಿನ ಸೇತುವೆಮೇಲೆ ವಾಹನ ಸಂಚಾರ ಆರಂಭವಾಗುವ ಆಶಾಭಾವನೆ ಮೂಡಿದೆ. ಲಾಕ್‌ಡೌನ್ ತೆರವು ನಂತರ ಪಾಲಿಕೆಯಿಂದ ನೀಡುವ ಮೊದಲ ಉಡುಗೊರೆ ಇದಾಗಲಿದೆಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನ ದಟ್ಟಣೆ ತಗ್ಗಿಸಲು ಕ್ರಮ: ಅನ್‌ಲಾಕ್ ಬಳಿಕವಾಹನ ದಟ್ಟಣೆ ಹೆಚ್ಚಗಲಿದೆ. ನಗರದ ಹೊರಭಾಗದಿಂದಬರುವ ಬಹುತೇಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಈ ರಸ್ತೆಯ ಮೂಲಕವೇ ಮೆಜೆಸ್ಟಿಕ್‌ನತ್ತ ಸಾಗುತ್ತವೆ. ಇಲ್ಲಿ ಉಂಟಾಗುವ ವಾಹನ ದಟ್ಟಣೆನಿಯಂತ್ರಿಸಲು ಕಾಮಗಾರಿ ಪೂರ್ಣಗೊಳಿಸುವುದೊಂದೇ ಮಾರ್ಗ ಆದಷ್ಟು ಬೇಗ ಕೆಲಸ ಮುಗಿಸಿಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ತಾಕೀತುಮಾಡಲಾಗಿದೆ.
ಒಳಚರಂಡಿ ಮಾರ್ಗ ಬದಲಾವಣೆ: ಸೇತುವೆಕಾಮಗಾರಿ ಹಿನ್ನೆಲೆ, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಮುಂಭಾಗ ಜಲಮಂಡಳಿಯಿಂದ 450ಎಂ.ಎಂ.ನ ಪೈಪ್‌ಲೈನ್ ಅನ್ನು ಈಗಾಗಲೇ ಬೇರೆಡೆಸ್ಥಳಾಂತರಿಸಲಾಗಿದೆ. 700 ಎಂ.ಎಂ.ನ ನೀರಿನ ಪೈಪ್‌ಲೈನ್ ಇದ್ದ ಪರಿಣಾಮ, ಪಿಲ್ಲರ್ ಕಾಮಗಾರಿ ಮಾಡಲುಸಾಧ್ಯವಾಗಿರಲಿಲ್ಲ. ಇದೀಗ ಪೈಪ್‌ಲೈನ್ ಬದಲಿಸಿದ್ದು,ಪೈಪ್‌ಲೈನ್, ಒಳಚರಂಡಿ ಬದಲಾವಣೆ ಸೇರಿದಂತೆ ಒಟ್ಟು 60 ಕೋಟಿ ರೂ. ವೆಚ್ಚವಾಗಲಿದೆ ಎಂದುಮಾಹಿತಿ ನೀಡಿದ್ದಾರೆ.
493 ಮೀಟರ್ ಉದ್ದದ ಸೇತುವೆ: ಮೇಲ್ಸೇತುವೆಕಾಮಗಾರಿ 493 ಮೀಟರ್ ಉದ್ದವನ್ನು ಹೊಂದಿದ್ದು,16 ಪಿಲ್ಲರ್‌ಗಳು ಬರಲಿದ್ದು, ಈಗಾಗಲೇ 15 ಪಿಲ್ಲರ್‌ಗಳ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ, ಪ್ರಾರಂಭದಲ್ಲಿ 326.25 ಮೀಟರ್ ಉದ್ದದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಸಂಚಾರದಟ್ಟಣೆನಿವಾರಣೆ ದೃಷ್ಟಿಯಿಂದ ಸೇತುವೆ ಉದ್ದ ವಿಸ್ತರಿಸುವಂತೆಸ್ಥಳೀಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.ಕೋರ್ಟ್ ಸೂಚನೆಯಂತೆ ಮೇಲ್ಸೇತುವೆಯ ಉದ್ದವನ್ನು 493 ಮೀಟರ್‌ಗಳಿಗೆ ವಿಸ್ತರಿಸಲಾಗಿದೆ ಎಂದುಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವಿಕಾಸ್ ಆರ್. ಪಿಟ್ಲಾಲಿ