ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಪೂರ ಗ್ರಾಮದಲ್ಲಿನ ಗಾಯತ್ರಿ ಶಿಲ್ಪ ಕಲಾಕೇಂದ್ರದಲ್ಲಿ ಶಿಲ್ಪ ಕಲಾವಿದರಾದ ಸುರೇಶ ಆಚಾರ್, ಹಾಗೂ ದೇವರಾಜ್ ಆಚಾರ್ ಹಾಗೂ ಸಹೋದರರ ಕೈಯಲ್ಲಿ ಚಲನಚಿತ್ರ ನಟ ಕಿಚ್ಚಸುದೀಪ ರವರ ಪ್ರತಿಮೆ ತಯಾರಾಗುತ್ತಿದ್ದು ಎಲ್ಲರನ್ನು ಆಕರ್ಷಿಸುತ್ತಿದೆ.
ತಾಲ್ಲೂಕಿನ ಕುರುಕುಂದಿ ಗ್ರಾಮದಲ್ಲಿ ಕಿಚ್ಚ ಸುದೀಪ ಅಭಿಮಾನಿಗಳಿಂದ ಚಲನಚಿತ್ರ ನಟ ಕಿಚ್ಚ ಸುದೀಪರವರಿಗೆ ಅವರ ಅಭಿಮಾನಿಗಳಿಂದ ದೇವಸ್ಥಾನ ನಿರ್ಮಾಣವಾಗುತ್ತಿದ್ದು ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲು ಇಲ್ಲಿನ ಶಿಲ್ಪಿಗಳು ಸುಂದರವಾದ ಮೂರ್ತಿಯನ್ನು ತಯಾರಿಸುವುದರಲ್ಲಿ ನಿರತರಾಗಿದ್ದಾರೆ.
ಅ.13ರಂದು ಸುದೀಪ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾಗಲ್ಲಿದ್ದು ನಂತರದ ದಿನಗಳಲ್ಲಿ ಕಿಚ್ಚ ಸುದೀಪರವರ ಪ್ರತಿಮೆ ಅನಾವರಣ ಸೇರಿದಂತೆ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ .
ಇದನ್ನೂ ಓದಿ:ಆರ್ ಎಸ್ಎಸ್ ಇರದಿದ್ದರೆ ಭಾರತ ಮೂರ್ನಾಲ್ಕು ಪಾಕಿಸ್ಥಾನವಾಗುತ್ತಿತ್ತು: ಶೆಟ್ಟರ್
ಸುದೀಪ ಅಭಿಮಾನಿ ಬಳಗದ ದೇವರಾಜ ನಾಯಕ ಮಾತನಾಡಿ ಸುದೀಪ್ ರವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಭಾಗದ ರೈತರೊಬ್ಬರು ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ತಂದಂತಹ ಮಾಜಿ ಪ್ರಧಾನಿ ದೇವೆಗೌಡರವರ ಮೂರ್ತಿಯನ್ನು ಸ್ಥಾಪಿಸಿದ್ದು ಅವರ ಸ್ಪೂರ್ತಿಯಂತೆ ನಾವು ಕೂಡ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುದೀಪ್ ರವರ ಅಭಿಮಾನಿಗಳಿದ್ದು ಗ್ರಾಮದ ಶರಣಬಸವ ನಾಯಕ ಪ್ರತಿಮೆ ಸ್ಥಾಪನೆಗಾಗಿ ಉಚಿತವಾಗಿ ನಿವೇಶನ ನೀಡಿದ್ದು, ಅರುಣ ಕುಮಾರ ಬಲ್ಲಟ್ಟಗಿ ಸಹಕಾರ ನೀಡುತ್ತಿದ್ದಾರೆ.
ವಾಲ್ಮೀಕಿ ಪೀಠದ ಪ್ರಸನ್ನನಂದಪುರಿ ಸ್ವಾಮಿಗಳು ಹಾಗೂ ಸುದೀಪರವರ ಆಪ್ತಕಾರ್ಯದರ್ಶಿಗಳನ್ನು ಸಂಪರ್ಕೀಸಲಾಗಿದ್ದು, ಅವರು ಈ ಭಾಗದಲ್ಲಿ ಕೋಟಿಗೊಬ್ಬ ಚಲನಚಿತ್ರದ ಪ್ರಚಾರ ಹಾಗೂ ಮೂರ್ತಿ ಅನಾವರಣಕ್ಕೆ ಅನುಕೂಲವಾಗುವಂತೆ ದಿನಾಂಕವನ್ನು ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮದ ಸುದೀಪ್ ಅಭಿಮಾನಿಗಳು ಸುದೀಪ್‌ರನ್ನು ಪ್ರತ್ಯಕ್ಷವಾಗಿ ನೋಡಲು ಕಾತರರಾಗಿದ್ದಾರೆ,