Advertisement

ಮಲ್ಪೆ ಸೀ ವಾಕ್‌ವೇ : ಕಲಾಕೃತಿಯ ಬೆರಳಿಗೆ ಹಾನಿ

08:48 PM Feb 02, 2018 | Team Udayavani |

ಮಲ್ಪೆ: ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡ ಮಲ್ಪೆ ಮೀನುಗಾರಿಕಾ ಬಂದರು ಸಮೀಪದ ನಿರ್ಮಾಣಗೊಂಡ ಸೀವಾಕ್‌ವೇಯಲ್ಲಿನ ಸುಂದರ ಕಲಾಕೃತಿಯಲ್ಲಿ ಮೀನುಗಾರ ಮಹಿಳೆಯ ಕೈ ಬೆರಳುಗಳು ತುಂಡಾಗಿದ್ದು ಇದು ರಾತ್ರಿಹೊತ್ತಿನ ಕಿಡಿಗೇಡಿಗಳ ಕೃತ್ಯವೋ ಅಥವಾ ಸೆಲ್ಫಿ ಪ್ರಿಯರ ಹುಚ್ಚಾಟಕ್ಕೆ ಬಲಿಯಾಗಿದೆಯೋ ಗೊತ್ತಿಲ್ಲ. ಕಡಲಿನತ್ತ ಮುಖಮಾಡಿದ ಮೀನುಗಾರ, ಬುಟ್ಟಿಯಲ್ಲಿ ಮೀನು ಹೊತ್ತು ಮಾರಲು ಹೊರಟ ಮಡದಿ, ಅಮ್ಮನ ಸೆರಗು ಹಿಡಿದು ಶಾಲೆಯತ್ತ ಮುಖ ಮಾಡಿದ ಮಗ ಈ ಸುಂದರ ಕಲಾಕೃತಿ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದರಲ್ಲಿ ಮಹಿಳೆಯ ತೋರುಬೆರಳು, ಉಂಗುರಬೆರಳು ಮತ್ತು ಕಿರುಬೆರಳಿಗೆ  ಹಾನಿಯಾಗಿದ್ದು ಒಳಗಿರುವ ಕಬ್ಬಿಣದ ಸರಿಗೆ ಹೊರಬಂದಿದೆ.

Advertisement


ಜ. 26ರ ಗಣರಾಜ್ಯೋತ್ಸವದಂದು ಉದ್ಘಾಟನೆಗೊಂಡ ಈ ಆಕರ್ಷಣೀಯ ಸೀವಾಕ್‌ವೇ ನೋಡಲು ಆ ದಿನದಿಂದಲೇ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದ್ದು ಪ್ರವಾಸಿಗರು, ಸ್ಥಳೀಯರು ಸೇರಿದಂತೆ ಸೆಲ್ಫಿ ಪ್ರಿಯರು ಕಲಾಕೃತಿಗೆ ಮುಗಿಬಿದ್ದು  ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕಟ್ಟೆಯ ಮೇಲೆ ನಿಂತುಕೊಂಡು, ಮೂರ್ತಿಗೆ ಒರಗಿಕೊಂಡು ಫೋಟೋವನ್ನು ಕ್ಲಿಕ್ಕಿಸಿ ಕೊಳ್ಳುವುದರ ಮಧ್ಯೆಯೂ ಕಲಾಕೃತಿಗೆ ಹಾನಿಗೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಏನೇ ಆದರೂ ಮುಂದೆ ಈ ಕಲಾಕೃತಿ ಇರುವ ಸಮೀಪ ಯಾರೂ ತೆರಳದಂತೆ, ದಂಡೆ ಮೇಲೆ ಹತ್ತದಂತೆ ಅದರ ಸುತ್ತ ರ್ಯಾಲಿಂಗ್ಸ್‌ ಹಾಕಿ ತಡೆಗೋಡೆ ಮಾಡುವಂತಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next