Advertisement

ಹೆಬ್ಟಾಳಕರ ಹೇಳಿಕೆ ಖಂಡಿಸಿ ಪ್ರತಿಭಟನೆ

01:55 PM Sep 01, 2017 | Team Udayavani |

ಭಾಲ್ಕಿ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀಹೆಬ್ಟಾಳ್ಕರ್‌ ನೀಡಿರುವ ಹೇಳಿಕೆ ಖಂಡಿಸಿ ಯುವಕ್ರಾಂತಿ ಸಂಘಟನೆ ಮತ್ತು ಕರ್ನಾಟಕಾ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ಬ ಹೀಳಿಕೆ ನೀಡಿರುವ ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀಹೆಬ್ಟಾಳ್ಕರ್‌ ರವರ ವಿವಾದಾತ್ಮಕ ಹೇಳಿಕೆಗೆ ತಾಲೂಕು ಕನ್ನಡಪರ ಸಂಘಟನೆಯ ಸಂಗಮೇಶ ಗುಮ್ಮೆ, ಮತ್ತು ಯುವಕ್ರಾಂತಿಯ ಸಂಗಮೇಶ ಭೂರೆಯವರ ನೇತ್ರುತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ಕುರಿತು ಗುರುವಾರ ಪಟ್ಟಣದ ವಿವಿಧ ಬೀದಿಗಳಲ್ಲಿ ಟೈರಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದ, ಯುವಕ್ರಾಂತಿ ಸಂಘಟನೆ ಮತ್ತು ಕರ್ನಾಟಕಾ ರಕ್ಷಣಾ ವೇದಿಕೆಯ ಪದಾ ಕಾರಿಗಳು, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದು, ಈ ಸಂಬಂಧ ತೀರ್ಪು ಬಂದರೆ ಬಳಗಾವಿ ಮಾಹಾರಾಷ್ಟ್ರಕ್ಕೆ ಸೇರಲಿದೆ. ಆಗ ನಾನೇ ಮುಂದೆ ನಿಂತು ಮಹಾರಾಷ್ಟ್ರದ ಧ್ವಜ
ಹಿಡಿದು ಜೈಕಾರ ಹಾಕುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಲಕ್ಷ್ಮೀ ಹೆಬ್ಟಾಳಕರ್‌ರವರು ತಲೆ ಕೆಟ್ಟವರ ರೀತಿ ಹೇಳಿಕೆ ನೀಡುವ ಮೂಲಕ ಲಜ್ಜೆ ಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಇತಿಹಾಸ ಹೋರಾಟ, ಇವರಿಗೇನು ಗೊತ್ತಿದೆ.
ರಾಜ್ಯದ ಹಿತಕ್ಕೆ ವಿರುದ್ಧವಾಗಿ ಮಾತನಾಡಿರುವ ಲಕ್ಷ್ಮೀಹೆಬ್ಟಾಳಕರ್‌ ರವರಿಗೆ ಕಾಂಗ್ರೆಸ್‌ ಘಟಕದಿಂದ ವಜಾಮಾಡಿ, ಗಡಿಪಾರು ಮಾಡಬೇಕು ಎಂದು ಕ.ರ.ವೆ ಸಂಘಟನೆ ಮತ್ತು ಯುವಕ್ರಾಂತಿ ಸಂಘಟನೆಯ ಪದಾ ಕಾರಿಗಳು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ವೀರೇಶ ಸ್ವಾಮಿ, ಸಚಿನ ಪರಶಣೆ, ಪವನ ಪೀರಗೆ, ಸಂತೋಷ ಪಾಂಚಗೆ, ಮಹಾದೇವ ಸೂರ್ಯವಂಶಿ, ಮನ್ಮಥ ಸ್ವಾಮಿ, ಸಂತೋಷ ಹಡಪದ, ದಿಲೀಪ ಜೊಳದಪಕೆ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next