Advertisement

State status; ಜಮ್ಮು-ಕಾಶ್ಮೀರಕ್ಕೆ ಶೀಘ್ರವೇ ರಾಜ್ಯ ಸ್ಥಾನಮಾನ: ಮೋದಿ

12:37 AM Jun 21, 2024 | Team Udayavani |

ಶ್ರೀನಗರ: “ಜಮ್ಮು-ಕಾಶ್ಮೀರದಲ್ಲಿದ್ದ 370ನೇ ವಿಧಿ ಎಂಬ ತಡೆಗೋಡೆ ಕುಸಿದು, ಪ್ರಜಾಪ್ರಭುತ್ವದ ಫ‌ಲ ದೊರೆಯುತ್ತಿದೆ. ಶೀಘ್ರವೇ ಕಣಿವೆಗೆ ರಾಜ್ಯ ಸ್ಥಾನಮಾನ ದೊರೆಯಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಅವರು, ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಮಾತನಾಡಿ “ನಿಮ್ಮ ಮತಗಳ ಮೂಲಕ ನಿಮ್ಮನ್ನು ಆಳುವ ಕಣಿವೆಯ ಸರಕಾರವನ್ನು ನೀವೆ ಆಯ್ಕೆ ಮಾಡುವ ದಿನವೂ ದೂರವಿಲ್ಲ ಜತಗೆ ಜಮ್ಮು-ಕಾಶ್ಮೀರ ಮತ್ತೂಮ್ಮೆ ರಾಜ್ಯವಾಗಿ ಮಾರ್ಪಟ್ಟು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲಿದೆ’ ಎಂದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಕಾಣುತ್ತಿರುವ ಬದಲಾವಣೆ 10 ವರ್ಷ ದಲ್ಲಿ ಕೇಂದ್ರದಲ್ಲಿ ಬಿಜೆಪಿ ತಂದಿರುವ ಸುಧಾರಣೆಗಳ ಪ್ರತೀಕ’ ಎಂದಿದ್ದಾರೆ. ಕಣಿವೆ ಜನರು ಸ್ಥಳೀಯ ಚುನಾವಣೆ ಗಳ ಮೂಲಕ ತಮ್ಮ ಪ್ರತಿನಿಧಿಗಳನ್ನು ಆರಿಸಿದ್ದರು. ಈಗ ವಿಧಾನಸಭೆ ಚುನಾ ವಣೆಗೆ ಸಿದ್ಧತೆ ನಡೆಯುತ್ತಿದೆ ಎಂದರು.

ಇದೇ ವೇಳೆ 1,500 ಕೋಟಿ ರೂ.ವೆಚ್ಚದ 84 ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ 1,800 ಕೋಟಿ ವೆಚ್ಚದ ಕೃಷಿ ಸಂಬಂಧಿತ ಯೋಜನೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next