Advertisement

ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ-ಸ್ಪರ್ಧೆ: ಕಲಾಸಕ್ತರ ಗಮನ ಸೆಳೆದ ಕಲಾ-ಚಿತ್ರಗಳು

03:33 PM Dec 02, 2021 | Team Udayavani |

 ಚಿಕ್ಕಮಗಳೂರು: ಹಿರಿಯ ಶಿಲ್ಪಕಲಾವಿದರ ಕೈಯಲ್ಲಿ ಅರಳುತ್ತಿರುವ ನೃತ್ಯಭಂಗಿಯಲ್ಲಿ ನೃತ್ಯಗಾರ್ತಿಯ ಮರದ ಸುಂದರ ಮೂರ್ತಿ, ಕಲಾವಿದನ ಕುಂಚದಲ್ಲಿ ಮೂಡಿದ ಜಲವರ್ಣದ ಪ್ರಕೃತಿಯ ಸೊಬಗು ನೋಡುಗರ ವಿದ್ಯಾರ್ಥಿಗಳು ದೃಷ್ಟಿ ಈ ಚಿತ್ರಗಳತ್ತ. ಇದು ಕಂಡು ಬಂದಿದ್ದು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ. ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪಿ.ಆರ್‌. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಖೆ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಪಿ.ಆರ್‌. ತಿಪ್ಪೇಸ್ವಾಮಿ ಕಲಾಸಂಭ್ರಮ, ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ, ಸ ³ರ್ಧೆ, ಕಾರ್ಯಾಗಾರ, ಸಂವಾದ ಕಾರ್ಯಕ್ರಮದ 2ನೇ ದಿನದಲ್ಲಿ ಕಂಡು ಬಂದ ದೃಶ್ಯಗಳು. ರಾಷ್ಟ್ರಪ್ರಶಸ್ತಿ ವಿಜೇತ ರಾಮಮೂರ್ತಿ ಅವರು ಮರದಲ್ಲಿ ವಿಗ್ರಹ ಕೆತ್ತನೆ ಕಲಾಸಕ್ತರ ಮತ್ತು ವಿದ್ಯಾರ್ಥಿಗಳ ಗಮನವನ್ನು ಕೇಂದ್ರಿಕರಿಸಿದ್ದರೇ, ಮಂಗಳೂರಿನ ಸೈಯದ್‌ ಆಸಿಫ್‌ ಅಲಿ ಕುಂಚದಲ್ಲಿ ಜಲವರ್ಣದ ಪ್ರಕೃತಿ ಚಿತ್ರದ ಮೇಲೆ ವಿದ್ಯಾರ್ಥಿಗಳ ದೃಷ್ಟಿನೆಟ್ಟಿತ್ತು. ಈ ಸಂದರ್ಭದಲ್ಲಿ ಶಿಲ್ಪಿ ಜಯಣ್ಣಾಚಾರ್‌, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ, ಶಿಲ್ಪ ಆಚಾರ್ಯ ಇದ್ದರು.

Advertisement

ಹಣಕ್ಕೆ ಸೀಮಿತರಾಗದೆ ಕೆಲಸದಲ್ಲಿ ಶ್ರದ್ಧೆಯಿಡಿ

ರಾಷ್ಟ್ರಪ್ರಶಸ್ತಿ ವಿಜೇತ ಬೆಂಗಳೂರಿನಹಿರಿಯ ಶಿಲ್ಪಕಲಾವಿದ ರಾಮಮೂರ್ತಿ ತಮ್ಮಲ್ಲಿ ಕಲಾಸಕ್ತಿ ಬೆಳೆದು ಬಂದ ರೀತಿ, ತಮ್ಮ ಅನುಭವ ಸೇರಿದಂತೆ ಇತರೆ ವಿಚಾರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. 42 ವರ್ಷಗಳಿಂದ ಈ ಕಾಯಕ ಮಾಡಿಕೊಂಡು ಬಂದಿದ್ದು, ಒಂದು ಕೆಲಸ ಒಪ್ಪಿಕೊಂಡರೆ ಹಣಕ್ಕೆ ಸೀಮಿತವಾಗದೆ ಶ್ರದ್ಧೆಯಿಂದ ಕೆಲಸ ಕಲಿಯಬೇಕು ಎಂದು ಯುವ ಕಲಾವಿದರಿಗೆ ಕಿವಿಮಾತು ಹೇಳಿದರು.

“ನನ್ನ ಕಲಾ ಜೀವನದಲ್ಲಿ ಸಾವಿರಾರು ವಿಗ್ರಹಗಳನ್ನು ರಚಿಸಿದ್ದೇನೆ. ದಕ್ಷಿಣ ಭಾರತ, ಶೈಲಿಯ, ಹೊಯ್ಸಳರ ಶೈಲಿಯ ಶಿಲ್ಪಗಳನ್ನು ಕೆತ್ತಿದ್ದೇನೆ. ಟಿಬೆಟಿಯನ್ನರ ಟಂಕಶೈಲಿಯಲ್ಲಿ ಶಿಲ್ಪಗಳನ್ನು ರಚಿಸಿದ್ದೇನೆ ಎಂದರು. ಟಂಕಶೈಲಿಯಲ್ಲಿ ಸಣ್ಣಪುಟ್ಟ ಕೆತ್ತನೆ ಕೆಲಸಗಳನ್ನು ಮಾಡುತ್ತಿದ್ದೆ. ನಂತರ 30 ಅಡಿ ಬುದ್ಧನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿತು. 42ವರ್ಷ ಕೆಲಸವಿಲ್ಲದೆ ಕೂತಿಲ್ಲ, ನನ್ನದೆ ಸ್ಟುಡಿಯೋ ಇದೆ. ವಿದ್ಯಾರ್ಥಿಗಳು ಇದ್ದಾರೆ. ಶಿಲ್ಪಕಲೆಯನ್ನು ಕಲಿಯುವ ವಿದ್ಯಾರ್ಥಿಗಳು ಹಣದ ಲೆಕ್ಕ ಹಾಕಬೇಡಿ, ಶಿಲ್ಪಕಲೆಯಲ್ಲಿ ಸಿಕ್ಕಪಟ್ಟೆ ಆಸಕ್ತರು ಇದ್ದಾರೆ. ಕಲಿಯುತ್ತಿದ್ದಾರೆ ಎಂದರು. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಮನ ವಿಗ್ರಹಕ್ಕೆ ಮೊದಲ ಬಹುಮಾನ ದೊರೆಯಿತು. ಬಳಿಕ ಅಯೋಧ್ಯೆ ಸಂಸ್ಥಾನದವರು ಇಷ್ಟಪಟ್ಟು ರಾಮನ ವಿಗ್ರಹ ಖರೀದಿಸಿದರು. ರಾಮನ ವಿಗ್ರಹಕ್ಕೆ ಬೇಡಿಕೆ ಬಂದಾಗ ಸಂತೋಷವಾಯ್ತು ಎಂದರು.

Advertisement

ಅಯೋಧ್ಯೆಯಿಂದ ಮೂರು ವಿಗ್ರಹಕ್ಕೆ ಬೇಡಿಕೆ ಬಂದಿತ್ತು 2ವಿಗ್ರಹದ ಕೆಲಸ ಮುಗಿದಿತ್ತು. ಮೂರನೇ ವಿಗ್ರಹ ಬೀಟೆ ಮರದಲ್ಲಿ ಮಾಡಿ ಶಿಲ್ಪವನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ಕಳುಹಿಸಿಕೊಟ್ಟಾಗ ಆ ಸಂತೋಷಕ್ಕೆ ಪರವೇ ಇರಲಿಲ್ಲ, ವಿಗ್ರಹ ಕೆತ್ತನೆಗೆ ಇಷ್ಟೇದಿನ ಎಂದು ಲೆಕ್ಕ ಇಟ್ಟಿಲ್ಲ 2-3ತಿಂಗಳು ತೆಗೆದುಕೊಂಡಿದ್ದೇನೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಜಯಣ್ಣಾಚಾರ್‌ ಕಲಾಜಗತ್ತಿನ ತಮ್ಮ ಅನುಭವ ಹಂಚಿಕೊಂಡು, ಉಳಿ, ಚಾಣಗಳನ್ನು ಬಳಸಿ ಮರದ ವಿಗ್ರಹಗಳನ್ನು ಕೆತ್ತುವುದನ್ನು ನೋಡುವುದು ನಮ್ಮ ಸೌಭಾಗ್ಯ. ಹಿಂದೆ ವಿಗ್ರಹ ಕೆತ್ತನೆಯನ್ನು ನೋಡಲು ಹೋದರೆ ಕಲಾವಿದರ ದರ್ಶನ ವಾಗುತ್ತಿತ್ತೇ ವಿನಃ ಕೆತ್ತನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next