Advertisement
ಈ ಬಾಬಿ¤ನಲ್ಲಿ ಕೇಂದ್ರದಿಂದ ರಾಜ್ಯಕ್ಕೆ 777 ಕೋಟಿ ರೂ. ಅನುದಾನ ನಿಗದಿಯಾಗಿದೆ. ಆ ಪೈಕಿ ಬಿಡುಗಡೆಯಾದ ಎರಡನೇ ಕಂತಿನ ಹಣವನ್ನು ರಾಜ್ಯ ಸರಕಾರ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಈ ಹಣವನ್ನು ನಗರ-ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳಿಗೆ ಕಡ್ಡಾಯವಾಗಿ ಬಳಸಿಕೊಳ್ಳಬೇಕೆಂದು ಕೇಂದ್ರ ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಹಂಚಿಕೆಯಾದ ಹಣವನ್ನು ಯಾವುದೇ ಕಾರಣಕ್ಕೂ ಸಂಬಳ ಇತ್ಯಾದಿ ವೆಚ್ಚಕ್ಕೆ ಬಳಸಿಕೊಳ್ಳದಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಅನುದಾನ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದರನ್ವಯವೇ ವೆಚ್ಚ ಮಾಡುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
ಬೆಂಗಳೂರು: ನಗರ ಮತ್ತು ಗ್ರಾಮಾಂತರ ಯೋಜನ ನಿರ್ದೇಶಕರ ಕಚೇರಿಯನ್ನು ಸರಕಾರ “ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಆಯುಕ್ತಾಲಯ’ ಎಂದು ಮರುನಾಮಕರಣ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. 31 ನಗರಾಭಿವೃದ್ಧಿ ಪ್ರಾಧಿಕಾರ
ರಾಜ್ಯದಲ್ಲಿ ಪ್ರಸ್ತುತ 31 ನಗರಾಭಿವೃದ್ಧಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಬಜೆಟ್ ಕನಿಷ್ಠ 50ರಿಂದ ಗರಿಷ್ಠ 500 ಕೋಟಿ ರೂ. ಆಗಿದೆ. ಈ ಪ್ರಾಧಿಕಾರಗಳ ಆಡಳಿತ ನಿರ್ವಹಣೆ, ಡಿಜಿಟಲೀಕರಣ, ಮೇಲುಸ್ತುವಾರಿಯಂತಹ ಹಲವು ಕಾರ್ಯಗಳಿಗೆ ಅನುಕೂಲವಾಗುವಂತೆ ಯೋಜನ ನಿರ್ದೇಶಕರ ಕಚೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಆಯುಕ್ತಾಲಯ ಎಂದು ಮರುನಾಮಕರಣ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
Related Articles
ಉದ್ದೇಶಿತ ಆಯುಕ್ತಾಲಯಕ್ಕೆ ಇಲಾಖೆಯಲ್ಲಿ ಮಂಜೂರಾದ 35 ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ಉನ್ನತೀಕರಿಸಿ, ಆ ಹುದ್ದೆಗೆ ಐಎಎಸ್ ಉನ್ನತ ದರ್ಜೆಯ ವೃಂದದ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಇನ್ನು ಮುಂದೆ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನ ಪ್ರಾಧಿಕಾರಗಳು, ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಯು ಸರಕಾರಕ್ಕೆ ಸಲ್ಲಿಸುವ ಎಲ್ಲ ಪ್ರಸ್ತಾವನೆಗಳನ್ನು (ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ, ಬಿಎಂಐಸಿಎಪಿಎ ಹೊರತುಪಡಿಸಿ) ಆಯುಕ್ತರ ಮೂಲಕ ಸಲ್ಲಿಸಲು ಸೂಚಿಸಲಾಗಿದೆ.
Advertisement