ಮುಂಬಯಿ: ಮೇ 23ರಂದು ಲೋಕಸಭಾ ಚುನಾವ ಣೆಯ ಫಲಿತಾಂಶಗಳು ಪ್ರಕಟವಾದ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯ ಕನನ್ನು ಆಯ್ಕೆ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ನೂತನ ಸಿಎಲ್‌ಪಿ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಎಂಎಲ್‌ಎಗಳು ಮತ್ತು ಎಂಎಲ್‌ಸಿಗಳ ಅಭಿಪ್ರಾಯಗಳನ್ನು ತಿಳಿಯಲು ಖರ್ಗೆ ಅವರು ಸೋಮವಾರ ಇಲ್ಲಿ ಸಭೆಯೊಂದನ್ನು ನಡೆಸಿದರು. ಈ ಸ್ಥಾನಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್, ಮುಂಬಯಿ ಮೂಲದ ಮಾಜಿ ಸಚಿವೆ ವರ್ಷಾ ಗಾಯಕ್ವಾಡ್ ಹಾಗೂ ನಾಗಪುರದ ಸುನೀಲ್ ಕೇದಾರ್ ಅವರು ಕಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಧಾಕೃಷ್ಣ ವಿಖೆ ಪಾಟೀಲ್ ಅವರ ರಾಜೀನಾಮೆ ಅನಂತರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸ್ಥಾನ ಖಾಲಿ ಉಳಿದಿದೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ರಾಗಿದ್ದ ವಿಖೆ ಪಾಟೀಲ್ ಅವರು ತಮ್ಮ ಮಗ ಸುಜಯ್ ವಿಖೆ ಪಾಟೀಲ್ ಅಹ್ಮದ್‌ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಗೆ ಸೇರಿ ಕೊಂಡ ಕಾರಣ ಕಾಂಗ್ರೆಸ್‌ಗೆ ಮುಜುಗರ ವುಂಟುಮಾಡಿದ್ದರು. ಇದಲ್ಲದೆ, ವಿಖೆ ಪಾಟೀಲ್ ಅವರು ಕಾಂಗ್ರೆಸ್-ಎನ್‌ಸಿಪಿ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲು ನಿರಾಕರಿಸಿದ್ದರು ಮತ್ತು ಅಹ್ಮದ್‌ನಗರ ಜಿಲ್ಲೆಯಲ್ಲಿ ಬಿಜೆಪಿ-ಶಿವಸೇನೆ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ಅನಂತರ, ಪಕ್ಷವು ಅವರಿಗೆ ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿ ಯುವಂತೆ ಕೇಳಿಕೊಂಡಿತ್ತು ಮತ್ತು ಇತ್ತೀಚೆಗೆ ಆ ಹು¨ªೆಗೆ ಪಕ್ಷವು ಅವರ ರಾಜೀನಾಮೆಯನ್ನು ಒಪ್ಪಿಕೊಂಡಿತ್ತು.
ಸೋಮವಾರ ನಡೆದ ಸಭೆಯಲ್ಲಿ ನೂತನ ಸಿಎಲ್‌ಪಿ ನಾಯಕನನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಪಕ್ಷದ ಹೈಕಮಾಂಡ್‌ಗೆ ನೀಡುವ ಪ್ರಸ್ತಾವವನ್ನು ಅಂಗೀಕರಿಸಲಾಯಿತು.
ನಾನು ಶಾಸಕರು ಮತ್ತು ಎಂಎಲ್‌ಸಿಗಳೊಂದಿಗೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ನಾವು ಈ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ಅಲ್ಲದೆ, ನೂತನ ನಾಯಕನಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ನಾವು ಚರ್ಚಿಸಿ ದ್ದೇವೆ ಎಂದು ಖರ್ಗೆ ತಿಳಿಸಿದ್ದಾರೆ.
ಸೋಶಿಯಲ್ ಎಂಜಿನಿಯರಿಂಗ್ ಬಗ್ಗೆಯೂ ಸಭೆಯಲ್ಲಿ ಚರ್ಚಿಸ ಲಾಗಿದೆ ಎಂದವರು ಹೇಳಿದ್ದಾರೆ. ಒಬಿಸಿ ಅಥವಾ ದಲಿತ ಶಾಸಕ ಕೂಡ ಸಿಎಲ್‌ಪಿ ನಾಯಕ ಆಗಲು ಅವಕಾಶವನ್ನು ಪಡೆಯಬಹುದು ಎಂದು ಖರ್ಗೆ ಸಂಕೇತ ನೀಡಿದ್ದಾರೆ. ರಾಜ್ಯ ವಿಧಾನಸಭೆಯು ಈ ವರ್ಷದಲ್ಲಿ ಅನಂತರ ಚುನಾವಣೆಗೆ ಹೋಗಲಿರುವ ಹಿನ್ನೆಲೆಯಲ್ಲಿ ನೂತನ ಸಿಎಲ್‌ಪಿ ನಾಯಕನಿಗೆ ಕೇವಲ ಒಂದು ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.