Advertisement
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ,ರಾಜ್ಯದಲ್ಲಿ 44,547 ಹೆಕ್ಟೇರ್ ತೆಂಗು ಬೆಳೆ ಹಾನಿಯಾಗಿದ್ದು, 44 ಲಕ್ಷ 55 ಸಾವಿರ ತೆಂಗಿನ ಮರಗಳು ಹಾನಿಗೊಳಗಾಗಿವೆ. ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ 178 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ.
Related Articles
Advertisement
ಪರಿಹಾರದ ಜತೆಗೆ ಮಾಸಾಶನ:ವನ್ಯಪ್ರಾಣಿಗಳಿಂದ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದರ ಜತೆಗೆ ಐದು ವರ್ಷದವರೆಗೆ 2 ಸಾವಿರ ಮಾಸಾಶನ ನೀಡಲು ಸರ್ಕಾರ ನಿರ್ಧರಿಸಿದೆ. ಇದುವರೆಗೂ ವನ್ಯ ಜೀವಿಗಳಿಂದ ಮೃತರಾದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ.ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಜತೆಗೆ ಐದು ವರ್ಷಗಳವರೆಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಪುಟದ ಪ್ರಮುಖ ನಿರ್ಣಯಗಳು– ಹಾಸನ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಹಾಸ್ಟೆಲ್, ಗ್ರಂಥಾಲಯ ಸೌಲಭ್ಯ ಕಲ್ಪಿಸಲು 50 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ
– ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 50 ಕೋಟಿ
– ಬೀದರ್, ಶಿವಮೊಗ್ಗ ಜಿಲ್ಲಾಸ್ಪತ್ರೆಗಳಲ್ಲಿ ಹೃದ್ರೋಗ ಘಟಕ ಸ್ಥಾಪನೆಗೆ ತಲಾ 7.25 ಕೋಟಿ ರೂ. ಹಾಗೂ 7.81 ಕೋಟಿ
– ಹೊಸ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೂ ಒಂದು ವರ್ಷ ಜಿವಿಕೆ ಸಂಸ್ಥೆಯ 108 ಆಂಬ್ಯುಲೆನ್ಸ್ ಸೇವೆ
ಮುಂದುವರಿಸಲು ನಿರ್ಧಾರ.
– ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣ ಸೇರಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ರೈತರು, ಕನ್ನಡ ಪರ ಹೋರಾಟಗಾರರ ವಿರುದಟಛಿ ದಾಖಲಾಗಿದ್ದ 14 ಪ್ರಕರಣಗಳನ್ನು ಕೈ ಬಿಡಲು ಒಪ್ಪಿಗೆ.
– ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೈ.ಕ. ಭಾಗದ ಯಾದಗಿರಿ,ಹುಮನಾಬಾದ್, ಹೊಸಪೇಟೆ ಹಾಗೂ ಲಿಂಗಸುಗೂರುಗಳಲ್ಲಿ ಜಿಟಿಟಿಸಿ ಕೇಂದ್ರಗಳಲ್ಲಿ 224 ಕೋಟಿ ವೆಚ್ಚದಲ್ಲಿ ಅಟೊಮೊಬೈಲ್, ಏರೋಸ್ಪೇಸ್ ಕುರಿತು ಉನ್ನತ ಮಟ್ಟದ ತರಬೇತಿ
– ಶ್ರೀರಂಗಪಟ್ಟಣ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸಲು ಒಪ್ಪಿಗೆ
– ನಿವೃತ್ತ ಐಎಎಸ್‌ಅಧಿಕಾರಿ ಎಸ್. ಉಮೇಶ್ ಅವರನ್ನು ಕೆಎಟಿ ಸದಸ್ಯರನ್ನಾಗಿ ನೇಮಕ ಮಾಡುವ ಪ್ರಸ್ತಾಪವನ್ನು
ಹಿಂಪಡೆಯಲು ನಿರ್ಧಾರ.