Advertisement

Gudibande: ನಗರಗೆರೆ ಹೋಬಳಿ ಗುಡಿಬಂಡೆಗೆ ಸೇರಿಸಿ

03:53 PM Feb 13, 2024 | Team Udayavani |

ಗುಡಿಬಂಡೆ: ನಗರಗೆರೆ ಹೋಬಳಿಯ ಎಲ್ಲಾ ಗ್ರಾಮಗಳನ್ನು ಈ ಸಾಲಿನ ಬಜೆಟ್‌ನಲ್ಲಿ ಗುಡಿಬಂಡೆ ತಾಲೂಕಿಗೆ ಸೇರಿಸಲು ಹೋಬಳಿಯ ಸಾರ್ವಜನಿಕರ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ.

Advertisement

ಗುಡಿಬಂಡೆ ತಾಲೂಕು ಮಜರಾ ಗ್ರಾಮಗಳು ಸೇರಿ 145 ಹಳ್ಳಿಗಳು, 8 ಗ್ರಾಪಂ ಕೇಂದ್ರಗಳು, 2 ಹೋಬಳಿ ಕೇಂದ್ರಗಳು ಸೇರಿಸಿ 2001ರ ಜನಗಣತಿಯ ಅಧಾರದ ಮೇಲೆ 65,000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ ಸಹ ಭೌಗೋಳಿಕವಾಗಿ ತಾಲೂಕು ಮಾತ್ರ ವಿಸ್ತೀರ್ಣದಲ್ಲಿ ಬಹಳ ಚಿಕ್ಕ ತಾಲೂಕಾಗಿದೆ.

ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಗ್ರಾಮಗಳು ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಕೇವಲ 3-10 ಕಿ.ಮೀ ದೂರದಲ್ಲಿದ್ದು, ಅದೇ ನಗರಗೆರೆ ಹೋಬಳಿಯ ಗ್ರಾಮಗಳು ಗೌರಿಬಿದನೂರು ತಾಲೂಕು ಕೇಂದ್ರಕ್ಕೆ 25 ರಿಂದ 30 ಕಿ.ಮೀ ದೂರದಲ್ಲಿವೆ.

ಜನರಿಗೆ ಹೆಚ್ಚಿನ ಅನುಕೂಲ: ನಗರಗೆರೆ ಹೋಬಳಿಯ ಗ್ರಾಮಗಳು ಹತ್ತಿರದ ತಾಲೂಕಿನ ನ್ಯಾಯಾಲಯ ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಲಯ ವ್ಯಾಪ್ತಿಗೆ ಬರುತ್ತಾರೆ. ಕೇವಲ ಕಂದಾಯ ಇಲಾಖೆಯ ವ್ಯವಹಾರ ಹಾಗೂ ತಾಪಂ ವ್ಯವಹಾರಗಳಿಗೆ ಮಾತ್ರ ಗೌರಿಬಿದನೂರು ತಾಲೂಕಿಗೆ ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಕಂದಾಯ ಹಾಗೂ ತಾಪಂ ಇಲಾಖೆಯ ಕೆಲಸಗಳಿಗೆ ಮಾತ್ರ ಗೌರಿಬಿದನೂರಿಗೆ ಓಡಾಡುವ ನಗರಗೆರೆ ಹೋಬಳಿಯ ವ್ಯಾಪ್ತಿಯ ಗ್ರಾಮಗಳನ್ನು ಗುಡಿಬಂಡೆ ತಾಲೂಕಿಗೆ ಸೇರಿಸಿದಲ್ಲಿ ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಗುಡಿಬಂಡೆ ತಾಲೂಕಿನ ಭೌಗೋಳಿಕ ಪ್ರದೇಶವು ಸಹ ಹೆಚ್ಚಾಗಲಿದ್ದು, ಕೂಡಲೇ ರಾಜ್ಯ ಸರ್ಕಾರ ನಗರಗೆರೆ ಹೋಬಳಿಯನ್ನು ಗುಡಿಬಂಡೆ ತಾಲೂಕಿಗೆ ಸೇರಿಸಬೇಕೆಂಬುದು ಜನರ ಒಕ್ಕೊರಲಿನ ಒತ್ತಾಯವಾಗಿದೆ.

ನಗರಗೆರೆ ಸ್ಥಳೀಯರ ಬೇಡಿಕೆ: ನಗರಗೆರೆ ಹೋಬಳಿಯು ಗೌರಿಬಿದನೂರು ತಾಲೂಕು ಕೇಂದ್ರದಿಂದ ದೂರದಲ್ಲಿದ್ದು, ಈಗಾಗಲೇ ಗೌರಿಬಿದನೂರು ತಾಲೂಕಿನಲ್ಲಿ ಆರು ಹೋಬಳಿಗಳು ಇದ್ದು, ಬಂದ ಅನುದಾನವನ್ನೆಲ್ಲಾ ಹತ್ತಿರದ ಹೋಬಳಿಗಳಿಗೆ ಬಹು ಪಾಲು ಹಂಚಿಕೊಂಡು, ಕಡಿಮೆ ಅನುದಾನ ನೀಡುತ್ತಿದ್ದು, ಅದೇ ಅಲ್ಲದೇ ನಗರಗೆರೆ ಹೋಬಳಿ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗದ ಪ್ರದೇಶವಾಗಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು ಸಹ ಸ್ಥಳಕ್ಕೆ ಬಂದು ಕ್ರಮ ವಹಿಸಲು ತಡವಾಗುತ್ತದೆ. ಈಗಾಗಲೇ ನ್ಯಾಯಾಲಯಕ್ಕೆ ಹತ್ತಿರದ ಗುಡಿಬಂಡೆಗೆ ಹೋಗತ್ತಿರುವುದರಿಂದ, ಶೈಕ್ಷಣಿಕ ಸೇರಿದಂತೆ ಎಲ್ಲಾ ಇಲಾಖೆಗಳು ಸಹ ಗುಡಿಬಂಡೆ ತಾಲೂಕಿಗೆ ವರ್ಗಾವಣೆಗೊಂಡರೆ ವಿದ್ಯಾರ್ಥಿಗಳಿಗೂ, ಸಾರ್ವಜನಿಕರಿಗೂ ಹಾಗೂ ರೈತರಿಗೆ ಸಹ ಅನುಕೂಲವಾಗಿದೆ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

Advertisement

ಗುಡಿಬಂಡೆ ತಾಲೂಕು ಕೇಂದ್ರ ನಗರಗೆರೆ ಹೋಬಳಿಯ ಎಲ್ಲಾ ಹಳ್ಳಿಗಳಿಂದ 8 ಕಿ.ಮೀ ವಿಸ್ತೀರ್ಣದ ಹತ್ತಿರದಲ್ಲಿದ್ದು, ನ್ಯಾಯಾಲಯ ಹೊರತು ಪಡಿಸಿ ಉಳಿದ ಎಲ್ಲಾ ಕೆಲಸ ಕಾರ್ಯಗಳಿಗೆ ಗೌರಿಬಿದನೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಗುಡಿಬಂಡೆಗೆ ಎಲ್ಲಾ ಇಲಾಖೆಗಳು ಸೇರ್ಪಡೆಯಾ ದರೆ ಜನರಿಗೆ ಅನುಕೂಲವಾಗಲಿದೆ.

ಮಲ್ಲಪ್ಪ, ರೈತ ಮುಖಂಡ, ವಾಟದಹೊಸಹಳ್ಳಿ 

ನಗರಗೆರೆ ಹೋಬಳಿ ಯ ಎಲ್ಲಾ ಹಳ್ಳಿಗಳು ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿದ್ದು, ಸುಮಾರು ವರ್ಷಗಳಿಂದಲೂ ಸಹ ಆ ಭಾಗದ ಜನರಿಗೆ ಗೌರಿಬಿದನೂರು ನಿಂದ ಗುಡಿಬಂಡೆ ತಾಲೂಕಿಗೆ ಸೇರಿಸಿಕೊಳ್ಳಲು ಒಕ್ಕೊರಲ ಬೇಡಿಕೆಗಳು ಬರುತ್ತಿದ್ದು, ಗುಡಿಬಂಡೆ ತಾಲೂಕಿಗೆ ಸೇರ್ಪಡೆಯಾದಲ್ಲಿ ಆ ಭಾಗದ ಜನರಿಗೆ ತುಂಬಾ ಅನುಕೂಲ. -ಜಿ.ಎನ್‌.ದ್ವಾರಕನಾಥನಾಯ್ಡು, ಮುಖಂಡರು, ಗುಡಿಬಂಡೆ   

– ಎನ್‌.ನವೀನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next